
ದೆಹಲಿ: ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026ರ ಐಸಿಸಿ ಟಿ20 ವಿಶ್ವಕಪ್ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್‌ಗೆ ಸ್ಥಾನ ಸಿಗುವುದಿಲ್ಲ ಎಂದು ಮಾಜಿ ಭಾರತೀಯ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ. ಸಂಜು ಬದಲಿಗೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಮಿಂಚಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ವಿಶ್ವಕಪ್ ತಂಡಕ್ಕೆ ಬರುತ್ತಾರೆ ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಭವಿಷ್ಯ ನುಡಿದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಾಗ ಇತರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಿಗಿಂತ ಉತ್ತಮ ದಾಖಲೆ ಜಿತೇಶ್‌ಗೆ ಇದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಸಂಜುಗೆ ಒಂದರಿಂದ ಮೂರುವರೆಗಿನ ಸ್ಥಾನಗಳಲ್ಲಿ ಉತ್ತಮ ದಾಖಲೆ ಇದೆ, ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಾಗ ಸಂಜು ಅವರ ಪ್ರದರ್ಶನದಲ್ಲಿ ದೊಡ್ಡ ಕುಸಿತ ಕಂಡುಬರುತ್ತದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಭಾರತಕ್ಕಾಗಿ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ ನಾಲ್ಕರಿಂದ ಏಳರವರೆಗಿನ ಸ್ಥಾನಗಳಲ್ಲಿ ಬ್ಯಾಟ್ ಮಾಡಬಲ್ಲ ವಿಕೆಟ್ ಕೀಪರ್ ಅನ್ನು ತಂಡದ ಆಡಳಿತ ಮಂಡಳಿ ವಿಶ್ವಕಪ್ ತಂಡಕ್ಕೆ ಪರಿಗಣಿಸುತ್ತದೆ. ಸ್ವಾಭಾವಿಕವಾಗಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಜಿತೇಶ್‌ಗೆ ಇಲ್ಲಿ ಅವಕಾಶವಿದೆ ಎಂದು ಚೋಪ್ರಾ ಸ್ಪಷ್ಟಪಡಿಸಿದ್ದಾರೆ.
ಏಷ್ಯಾಕಪ್ ತಂಡದಲ್ಲಿ ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ಇಬ್ಬರೂ ಇದ್ದರೂ, ಜಿತೇಶ್‌ಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗುತ್ತದೆ. ಒಂದರಿಂದ ಮೂರುವರೆಗಿನ ಸ್ಥಾನಗಳಲ್ಲಿ ಬ್ಯಾಟ್ ಮಾಡುವಾಗ ಜಿತೇಶ್‌ಗೆ 135 ಸ್ಟ್ರೈಕ್ ರೇಟ್ ಮತ್ತು 25ರ ಸರಾಸರಿ ಮಾತ್ರ ಇದೆ. ಆದರೆ ನಾವು ಅದರ ಬಗ್ಗೆ ಹೆಚ್ಚು ಯೋಚಿಸಬೇಕಾಗಿಲ್ಲ, ಏಕೆಂದರೆ ಆ ಸ್ಥಾನಗಳಲ್ಲಿ ಜಿತೇಶ್‌ರನ್ನು ಪರಿಗಣಿಸುವುದಿಲ್ಲ. ಆದರೆ ನಾಲ್ಕರಿಂದ ಏಳರವರೆಗಿನ ಸ್ಥಾನಗಳಲ್ಲಿ ಬ್ಯಾಟ್ ಮಾಡುವಾಗ ಜಿತೇಶ್‌ರ ಸ್ಟ್ರೈಕ್ ರೇಟ್ 166 ಆಗಿದೆ. ಹೀಗಾಗಿ ಏಷ್ಯಾಕಪ್‌ನಲ್ಲೂ ಸಂಜು ಸ್ಯಾಮ್ಸನ್‌ಗಿಂತ ಜಿತೇಶ್ ಶರ್ಮಾಗೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚು ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಈ ಸ್ಥಾನಗಳಲ್ಲಿ ಬ್ಯಾಟ್ ಮಾಡುವಾಗ 150 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಏಕೈಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್. ಆದ್ದರಿಂದ ಜಿತೇಶ್ ಅವರೇ ನಂಬರ್ ಒನ್ ಆಯ್ಕೆ. ಇನ್ನೊಂದು ಸಾಧ್ಯತೆ ಕೆ ಎಲ್ ರಾಹುಲ್. ಆದರೆ ಟಾಪ್ ತ್ರೀಯಲ್ಲಿ ಚೆನ್ನಾಗಿ ಬ್ಯಾಟ್ ಮಾಡುವ ರಾಹುಲ್ ಮಧ್ಯಮ ಕ್ರಮಾಂಕಕ್ಕೆ ಇಳಿದಾಗ 133 ಮಾತ್ರ ಸ್ಟ್ರೈಕ್ ರೇಟ್ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಚುಟುಕು ಮಾದರಿಯಲ್ಲಿ ಆರಂಭಿಕ ಬ್ಯಾಟರ್ ಆಗಿ ಯಶಸ್ವಿಯಾಗಿದ್ದರು. ಆದರೆ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚಿದ್ದ ಶುಭ್‌ಮನ್ ಇದೀಗ ಭಾರತ ಟಿ20 ತಂಡಕ್ಕೆ ವಾಪಾಸ್ಸಾಗಿದ್ದು, ಉಪನಾಯಕರಾಗಿ ಬಡ್ತಿ ಪಡೆದಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ ಸ್ಥಾನ ಒಂದು ರೀತಿ ಅಲ್ಲೋಲಕಲ್ಲೋಲ ಎನಿಸಿದೆ.
ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ:
ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಕುಮಾರ್(ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.