ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ, ಜೂನ್‌ 1ಕ್ಕೆ ಟೂರ್ನಿ ಆರಂಭ; 9ಕ್ಕೆ ಭಾರತ-ಪಾಕ್‌ ಫೈಟ್‌

By Santosh Naik  |  First Published Jan 5, 2024, 8:29 PM IST


ಬಹುನಿರೀಕ್ಷಿತ ಟಿ20 ವಿಶ್ವಕಪ್‌ ಜೂನ್‌ 1 ರಿಂದ ಆರಂಭವಾಗಲಿದ್ದು, ಜೂನ್‌ 9 ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ನ್ಯೂಯಾರ್ಕ್‌ನಲ್ಲಿ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ.
 


ನವದೆಹಲಿ (ಜ.5):  2024 ರ ಟಿ-20 ವಿಶ್ವಕಪ್ ಜೂನ್ 1 ರಿಂದ 29 ರವರೆಗೆ ನಡೆಯಲಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದ 9 ನಗರಗಳಲ್ಲಿ 55 ಪಂದ್ಯಗಳು ನಡೆಯಲಿವೆ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿದ್ದು, ಭಾರತ-ಪಾಕ್‌ ನಡುವಿನ ಗುಂಪು ಹಂತದ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಫೈನಲ್‌  ಪಂದ್ಯ ಜೂನ್ 29 ರಂದು ವೆಸ್ಟ್ ಇಂಡೀಸ್‌ನ ಬಾರ್ಬಡೋಸ್ ನಗರದಲ್ಲಿ ನಡೆಯಲಿದೆ. ಮೊದಲ ಬಾರಿಗೆ, ಟಿ-20 ವಿಶ್ವಕಪ್‌ನಲ್ಲಿ 20 ತಂಡಗಳನ್ನು ಸೇರಿಸಲಾಗಿದೆ, ಹಿಂದಿನ ಎರಡು ಆವೃತ್ತಿಗಳಲ್ಲಿ ತಲಾ 16 ತಂಡಗಳು ಇದ್ದವು. ಇಂಗ್ಲೆಂಡ್ ಹಾಲಿ ಚಾಂಪಿಯನ್ ಆಗಿದ್ದರೆ, ಭಾರತ ಈಗಾಗಲೇ 2007 ರಲ್ಲಿ ಟೂರ್ನಮೆಂಟ್ ಪ್ರಶಸ್ತಿಯನ್ನು ಗೆದ್ದಿತ್ತು.

ಕೆನಡಾ ಮತ್ತು ಅಮೆರಿಕ ನಡುವಿನ ಆರಂಭಿಕ ಪಂದ್ಯ: ಟೂರ್ನಿಯ ಉದ್ಘಾಟನಾ ಪಂದ್ಯ ಕೆನಡಾ ಮತ್ತು ಆತಿಥೇಯ ತಂಡ ಅಮೆರಿಕ ನಡುವೆ ನಡೆಯಲಿದೆ. ಜೂನ್ 1 ರಂದು ಡಲ್ಲಾಸ್‌ನಲ್ಲಿ ಪಂದ್ಯ ನಡೆಯಲಿದೆ. 1844ರಲ್ಲಿ ಕ್ರಿಕೆಟ್‌ ಇತಿಹಾಸದ ಮೊಟ್ಟ ಮೊದಲ ಪಂದ್ಯ ಕೂಡ ಅಮೆರಿಕ ಹಾಗೂ ಕೆನಡಾ ನಡುವೆ ನಡೆದಿತ್ತು. ವೆಸ್ಟ್ ಇಂಡೀಸ್ ತನ್ನ ಮೊದಲ ಪಂದ್ಯವನ್ನು ಪಪುವಾ ನ್ಯೂಗಿನಿಯಾ ವಿರುದ್ಧ ಜೂನ್ 2 ರಂದು ಗಯಾನಾದಲ್ಲಿ ಆಡಲಿದೆ. 29 ದಿನಗಳ ಕಾಲ 20 ತಂಡಗಳ ನಡುವಿನ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿದೆ. ಜೂನ್ 1 ರಿಂದ 17 ರವರೆಗೆ 40 ಗುಂಪು ಹಂತದ ಪಂದ್ಯಗಳು ನಡೆಯಲಿವೆ. ಸೂಪರ್-8 ಹಂತದ 12 ಪಂದ್ಯಗಳು ಜೂನ್ 19 ರಿಂದ 24 ರವರೆಗೆ ನಡೆಯಲಿವೆ. ಮೊದಲ ಸೆಮಿಫೈನಲ್ ಗಯಾನಾದಲ್ಲಿ ಜೂನ್ 26 ರಂದು ಮತ್ತು ಎರಡನೇ ಸೆಮಿಫೈನಲ್ ಜೂನ್ 27 ರಂದು ಟ್ರಿನಿಡಾಡ್‌ನಲ್ಲಿ ನಡೆಯಲಿದೆ. ಅಂತಿಮ ಪಂದ್ಯ ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ನಡೆಯಲಿದೆ.

Tap to resize

Latest Videos

ವೆಸ್ಟ್ ಇಂಡೀಸ್ ನಲ್ಲಿ 41 ಪಂದ್ಯಗಳು, ಅಮೆರಿಕದಲ್ಲಿ 14 ಪಂದ್ಯಗಳು ನಡೆಯಲಿವೆ: ಟಿ-20 ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸುತ್ತಿವೆ. ವೆಸ್ಟ್ ಇಂಡೀಸ್‌ನ 6 ನಗರಗಳಲ್ಲಿ ಒಟ್ಟು 41 ಪಂದ್ಯಗಳು ನಡೆಯಲಿದ್ದು, ಮೂರೂ ನಾಕೌಟ್ ಪಂದ್ಯಗಳು ನಡೆಯಲಿದೆ. ಇನ್ನುಳಿದ 14 ಪಂದ್ಯಗಳು ನ್ಯೂಯಾರ್ಕ್, ಫ್ಲೋರಿಡಾ ಮತ್ತು ಅಮೆರಿಕದ ಡಲ್ಲಾಸ್ ನಗರಗಳಲ್ಲಿ ನಡೆಯಲಿದೆ. ವೆಸ್ಟ್ ಇಂಡೀಸ್‌ನ ಟ್ರಿನಿಡಾಡ್, ಗಯಾನಾ, ಬಾರ್ಬಡೋಸ್, ಆಂಟಿಗುವಾ, ಸೇಂಟ್ ವಿನ್ಸೆಂಟ್ ಮತ್ತು ಸೇಂಟ್ ಲೂಸಿಯಾದಲ್ಲಿ ಪಂದ್ಯಗಳು ನಡೆಯಲಿದೆ.
ಟಿ-20 ವಿಶ್ವಕಪ್‌ನಲ್ಲಿ ತಲಾ 5 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಗುಂಪಿನಲ್ಲಿ ಇರಿಸಲಾಗಿದೆ. ಐರ್ಲೆಂಡ್, ಕೆನಡಾ ಮತ್ತು ಅಮೆರಿಕ ಕೂಡ ಈ ಗುಂಪಿನಲ್ಲಿವೆ. ಭಾರತ ಮತ್ತು ಪಾಕಿಸ್ತಾನ ತಮ್ಮ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲಿ ಮಾತ್ರ ಆಡಲಿವೆ.

 

 
 
 
 
 
 
 
 
 
 
 
 
 
 
 

A post shared by ICC (@icc)

ಭಾರತ-ಪಾಕ್ ಟಿ20 ವಿಶ್ವಕಪ್ ಪಂದ್ಯಕ್ಕೆ ಡೇಟ್ ಫಿಕ್ಸ್..!

ಭಾರತದ ಮೊದಲ ಮೂರು ಪಂದ್ಯಗಳು ನ್ಯೂಯಾರ್ಕ್‌ನಲ್ಲಿ ಮತ್ತು ನಾಲ್ಕನೇ ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಜೂನ್ 5 ರಂದು ಐರ್ಲೆಂಡ್ ವಿರುದ್ಧ ಮೊದಲ ಪಂದ್ಯ, ಜೂನ್ 9 ರಂದು ಪಾಕಿಸ್ತಾನ ವಿರುದ್ಧ ಎರಡನೇ ಪಂದ್ಯ, ಜೂನ್ 12 ರಂದು ಅಮೆರಿಕ ವಿರುದ್ಧ ಮೂರನೇ ಪಂದ್ಯ ಮತ್ತು ಜೂನ್ 15 ರಂದು ಕೆನಡಾ ವಿರುದ್ಧ ನಾಲ್ಕನೇ ಪಂದ್ಯವನ್ನು ಆಡಲಿದೆ.

ಆತ್ಮಹತ್ಯೆಗೆ ಪ್ರಚೋದನೆ ಆರೋಪ, ಟೀಮ್‌ ಇಂಡಿಯಾ ವಿಶ್ವಕಪ್‌ ಹೀರೋ ಮೇಲೆ ಬಿತ್ತು ಎಫ್‌ಐಆರ್‌!

click me!