15 ಕೋಟಿ ರುಪಾಯಿ ವಂಚನೆ: ಮಾಜಿ ಪಾರ್ಟ್ನರ್‌ಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿದ ಕೂಲ್ ಕ್ಯಾಪ್ಟನ್ ಧೋನಿ

By Naveen Kodase  |  First Published Jan 5, 2024, 5:03 PM IST

ಹಲವಾರು ಪ್ರಯತ್ನಗಳ ಹೊರತಾಗಿಯೂ, ಒಪ್ಪಂದದಲ್ಲಿ ನಿರ್ದಿಷ್ಟಪಡಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಕಡೆಗಣಿಸಲಾಗಿದೆ. ಪರಿಣಾಮವಾಗಿ ಆಗಸ್ಟ್ 15, 2021ರಲ್ಲಿ ಅರ್ಕಾ ಸ್ಫೋರ್ಟ್ಸ್‌ಗೆ ನೀಡಲಾಗಿದ್ದ ಅಥಾರಿಟಿ ಪತ್ರವನ್ನು ಮಹೇಂದ್ರ ಸಿಂಗ್ ಧೋನಿ ಹಿಂಪಡೆದಿದ್ದರು. ಇದಾದ ಬಳಿಕ ಹಲವಾರು ಬಾರಿ ಲೀಗಲ್ ನೋಟಿಸ್‌ಗಳನ್ನು ಕಳಿಸಲಾಗಿತ್ತಾದರೂ ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ.

ನವದೆಹಲಿ(ಜ.05): ಅರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಮಿಹಿರ್ ದಿವಾಕರ್ ಹಾಗೂ ಸೌಮ್ಯ ವಿಶ್ವಾಸ್‌ ಎನ್ನುವವರ ವಿರುದ್ದ ರಾಂಚಿ ಕೋರ್ಟ್‌ನಲ್ಲಿ ಭಾರತ ಕ್ರಿಕೆಟ್ ದಂತಕಥೆ ಮಹೇಂದ್ರ ಸಿಂಗ್ ಧೋನಿ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ

2017ರಲ್ಲಿ ಮಹೇಂದ್ರ ಸಿಂಗ್ ಧೋನಿಯವರ ಜತೆ ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿಯನ್ನು ಸ್ಥಾಪಿಸಲು ದಿವಾಕರ್ ಅವರು ಒಪ್ಪಂದ ಮಾಡಿಕೊಂಡಿದ್ದರು. ಆದರೆ ಆ ಒಪ್ಪಂದವನ್ನು ನೆರವೇರಿಸಲು ದಿವಾಕರ್ ಅವರು ವಿಫಲವಾಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಅರ್ಕಾ ಸ್ಪೋರ್ಟ್ಸ್, ಫ್ರಾಂಚೈಸಿಯ ಶುಲ್ಕವನ್ನು ಪಾವತಿಸಲು ಹಾಗೂ ಒಪ್ಪಂದದ ನಿಯಮಗಳ ಪ್ರಕಾರ ಲಾಭವನ್ನು ಹಂಚಿಕೊಳ್ಳಲು ಬದ್ಧವಾಗಿದೆ, ಆದರೆ ಅದನ್ನು ಅವರು ಗೌರವಿಸಿಲ್ಲ ಎಂದು ಆರೋಪಿಸಲಾಗಿದೆ.

Tap to resize

Latest Videos

ಹಲವಾರು ಪ್ರಯತ್ನಗಳ ಹೊರತಾಗಿಯೂ, ಒಪ್ಪಂದದಲ್ಲಿ ನಿರ್ದಿಷ್ಟಪಡಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಕಡೆಗಣಿಸಲಾಗಿದೆ. ಪರಿಣಾಮವಾಗಿ ಆಗಸ್ಟ್ 15, 2021ರಲ್ಲಿ ಅರ್ಕಾ ಸ್ಫೋರ್ಟ್ಸ್‌ಗೆ ನೀಡಲಾಗಿದ್ದ ಅಥಾರಿಟಿ ಪತ್ರವನ್ನು ಮಹೇಂದ್ರ ಸಿಂಗ್ ಧೋನಿ ಹಿಂಪಡೆದಿದ್ದರು. ಇದಾದ ಬಳಿಕ ಹಲವಾರು ಬಾರಿ ಲೀಗಲ್ ನೋಟಿಸ್‌ಗಳನ್ನು ಕಳಿಸಲಾಗಿತ್ತಾದರೂ ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ.

ವಿಧಿ ಅಸೋಸಿಯೇಟ್ಸ್‌ ಮೂಲಕ ಎಂ ಎಸ್ ಧೋನಿಯನ್ನು ಪ್ರತಿನಿಧಿಸುತ್ತಿದ್ದ ದಯಾನಂದ್ ಸಿಂಗ್ ಎನ್ನುವವರಿಗೆ ಅರ್ಕಾ ಸ್ಪೋರ್ಟ್ಸ್‌ ಸುಮಾರು 15 ಕೋಟಿ ರುಪಾಯಿ ವಂಚಿಸಿದೆ ಎಂದು ಆರೋಪ ಕೇಳಿ ಬಂದಿದೆ.

ಅರ್ಕಾ ಸ್ಪೋರ್ಟ್ಸ್‌ ಮೇಲೆ ಲೀಗಲ್ ನೋಟೀಸ್ ಕಳಿಸಿದ ಬೆನ್ನಲ್ಲೇ ಮಿಹಿರ್ ದಿವಾಕರ್ ಅವರು ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದು ಮಾತ್ರವಲ್ಲದೇ ಬೆದರಿಕೆಯನ್ನು ಹಾಕಿದ್ದಾರೆ ಎಂದು ಧೋನಿ ಸ್ನೇಹಿತ ಸಿಮಂತ್ ಲೊಹನಿ ಎಂದು ಆರೋಪಿಸಿದ್ದಾರೆ. 
 
click me!