ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ನ್ಯೂಯಾರ್ಕ್‌ನ ನಾಸೌ ಕೌಂಟಿ ಇಂಟರ್‌ನ್ಯಾಷನಲ್ ಸ್ಟೇಡಿಯಂ ಆತಿಥ್ಯ ವಹಿಸಿದೆ.
ನ್ಯೂಯಾರ್ಕ್(ಜೂ.09): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿಂದು ಬಲಿಷ್ಠ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಸೂಪರ್ 8 ಪ್ರವೇಶಿಸುವ ನಿಟ್ಟಿನಲ್ಲಿ ಪಾಕಿಸ್ತಾನ ತಂಡಕ್ಕಿದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ.
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ನ್ಯೂಯಾರ್ಕ್‌ನ ನಾಸೌ ಕೌಂಟಿ ಇಂಟರ್‌ನ್ಯಾಷನಲ್ ಸ್ಟೇಡಿಯಂ ಆತಿಥ್ಯ ವಹಿಸಿದೆ. ನಿರೀಕ್ಷೆಯಂತೆಯೇ ಪಾಕಿಸ್ತಾನ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಅಜಂ ಖಾನ್ ತಂಡದಿಂದ ಹೊರಬಿದ್ದಿದ್ದಾರೆ. ಇನ್ನು ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಒಂದು ವೇಳೆ ಭಾರತ ಎದುರು ಗೆದ್ದರೂ ಪಾಕಿಸ್ತಾನ ಸೂಪರ್ 8ಗೇರೋದು ಡೌಟ್..! ಇಲ್ಲಿದೆ ನೋಡಿ ಲೆಕ್ಕಾಚಾರ
ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲೇ ಆತಿಥೇಯ ಯುಎಸ್ಎ ತಂಡದ ಎದುರು ಆಘಾತಕಾರಿ ಸೋಲು ಅನುಭವಿಸಿದೆ. ಇದೀಗ ಭಾರತದ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ. ಒಂದು ವೇಳೆ ಇಂದು ಪಾಕಿಸ್ತಾನ ಮುಗ್ಗರಿಸಿದರೆ, ಬಹುತೇಕ ಪಾಕಿಸ್ತಾನ ತಂಡದ ಸೂಪರ್ 8 ಹಾದಿ ಭಗ್ನವಾಗಲಿದೆ.
It's 🇮🇳 🆚 🇵🇰 in New York! 🔥
Babar Azam wins the toss and opts to field first against India. | | 📝: https://t.co/6nOq3vU98z pic.twitter.com/sHYekdoLqe
ಇನ್ನೊಂದೆಡೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಮೊದಲ ಪಂದ್ಯದಲ್ಲಿ ಐರ್ಲೆಂಡ್ ಎದುರು ಭರ್ಜರಿ ಗೆಲುವು ಸಾಧಿಸಿದ್ದು, ಇದೀಗ ಮತ್ತೊಂದು ಪಂದ್ಯವನ್ನು ಜಯಿಸುವ ಮೂಲಕ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿಕೊಂಡು ಹೋಗುವ ವಿಶ್ವಾಸದಲ್ಲಿದೆ.
ಭಾರತ-ಪಾಕ್ ಟಿ20 ವಿಶ್ವಕಪ್ ಮುಖಾಮುಖಿ
ವರ್ಷ ಸ್ಕೋರ್ ಫಲಿತಾಂಶ
2007 ಭಾರತ 141/9, ಪಾಕ್ 141/9 ಬೌಲ್ ಔಟ್‌ನಲ್ಲಿ ಗೆದ್ದ ಭಾರತ
2007 ಭಾರತ 157/5, ಪಾಕ್ 152/10 ಭಾರತಕ್ಕೆ 5 ರನ್ ಗೆಲುವು(ಫೈನಲ್)
2012 ಪಾಕ್ 128/10, ಭಾರತ 129/2 ಭಾರತಕ್ಕೆ 8 ವಿಕೆಟ್ ಗೆಲುವು
2014 ಪಾಕ್ 130/7, ಭಾರತ 131/3 ಭಾರತಕ್ಕೆ 7 ವಿಕೆಟ್ ಜಯ
2016 ಪಾಕ್ 118/5, ಭಾರತ 119/4 ಭಾರತಕ್ಕೆ 6 ವಿಕೆಟ್ ಗೆಲುವು
2021 ಭಾರತ 151/7, ಪಾಕ್ 152/0 ಪಾಕ್‌ಗೆ 10 ವಿಕೆಟ್ ಗೆಲುವು
2022 ಪಾಕ್ 159/8, ಭಾರತ 160/6 ಭಾರತಕ್ಕೆ 4 ವಿಕೆಟ್ ಜಯ
ಉಭಯ ತಂಡಗಳ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಶ್‌ದೀಪ್ ಸಿಂಗ್.
ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಂ, ಉಸ್ಮಾನ್ ಖಾನ್, ಫಖರ್ ಜಮಾನ್, ಶದಾಬ್ ಖಾನ್, ಇಮಾದ್ ವಾಸೀಂ , ಇಫ್ತಿಕಾರ್ ಅಹಮದ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಂ ಶಾ, ಮೊಹಮ್ಮದ್ ಅಮೀರ್.
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್, ಡಿಡಿ ಸ್ಪೋರ್ಟ್ಸ್