Latest Videos

T20 World Cup 2024: ಟೀಂ ಇಂಡಿಯಾ ಆಟಗಾರರ ಜತೆ ಕಾಣಿಸಿಕೊಂಡ 'ನಿಗೂಢ ವ್ಯಕ್ತಿ'..! ವಿಡಿಯೋ ವೈರಲ್

By Naveen KodaseFirst Published Jun 17, 2024, 2:20 PM IST
Highlights

ಅಷ್ಟೇನೂ ಕ್ರಿಕೆಟ್ ಕ್ರೇಜ್ ಇರದ ಅಮೆರಿಕದಲ್ಲೂ ಈ ಬಾರಿ ಟೀಂ ಇಂಡಿಯಾ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಸ್ಟೇಡಿಯಂಗಳು ಭರ್ತಿಯಾಗಿದ್ದೇ ಇದಕ್ಕೆ ಸಾಕ್ಷಿ. ಇದೆಲ್ಲದರ ನಡುವೆ ಭಾರತೀಯ ಆಟಗಾರರ ಜತೆ ನಿಗೂಢ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದು, ಆ ವ್ಯಕ್ತಿಯೇ ಹಂಚಿಕೊಂಡಿರುವ ವಿಡಿಯೋ ಇದೀಗ ಲಕ್ಷಕ್ಕೂ ಆಧಿಕ ಮಂದಿ ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಿಸಿದ್ದಾರೆ.

ನ್ಯೂಯಾರ್ಕ್‌: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸದ್ಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದೆ. ಈ ಬಾರಿ ಟಿ20 ಟ್ರೋಫಿ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿರುವ ಟೀಂ ಇಂಡಿಯಾಗೆ ಭಾರತ ಮಾತ್ರವಲ್ಲದೇ ಜಗತ್ತಿನ ನಾನಾ ಮೂಲೆಗಳಲ್ಲಿ ಅಭಿಮಾನಿಗಳಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಷ್ಟೇನೂ ಕ್ರಿಕೆಟ್ ಕ್ರೇಜ್ ಇರದ ಅಮೆರಿಕದಲ್ಲೂ ಈ ಬಾರಿ ಟೀಂ ಇಂಡಿಯಾ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಸ್ಟೇಡಿಯಂಗಳು ಭರ್ತಿಯಾಗಿದ್ದೇ ಇದಕ್ಕೆ ಸಾಕ್ಷಿ. ಇದೆಲ್ಲದರ ನಡುವೆ ಭಾರತೀಯ ಆಟಗಾರರ ಜತೆ ನಿಗೂಢ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದು, ಆ ವ್ಯಕ್ತಿಯೇ ಹಂಚಿಕೊಂಡಿರುವ ವಿಡಿಯೋ ಇದೀಗ ಲಕ್ಷಕ್ಕೂ ಆಧಿಕ ಮಂದಿ ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಿಸಿದ್ದಾರೆ.

ಅರೇ ಇದೇನಿದು ಅಂತ ಆಶ್ಚರ್ಯವಾಗಬೇಡಿ. ಈತ ಭಾರತೀಯ ಮೂಲದ ಟೀಂ ಇಂಡಿಯಾ ಅಭಿಮಾನಿಯಾಗಿದ್ದು, ತನ್ನ ಜೀವಮಾನದಲ್ಲೇ ಹಿಂದೆಂದೂ ಅನುಭವಿಸದ ಸುಂದರ ಕ್ಷಣಗಳನ್ನು ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳೆಯಲ್ಲಿ ಅನುಭವಿಸಿದ್ದಾರೆ. ತಾನು ಬುಕ್‌ ಮಾಡಿದ್ದ ಹೋಟೆಲ್‌ನಲ್ಲಿಯೇ, ಟಿ20 ವಿಶ್ವಕಪ್ ಟೂರ್ನಿ ಆಡಲು ಬಂದಿದ್ದ ಇಡೀ ಭಾರತ ಕ್ರಿಕೆಟ್ ತಂಡವು ಉಳಿದುಕೊಂಡಿತ್ತು. ಇದೀಗ ಆ ವ್ಯಕ್ತಿ, ಟೀಂ ಇಂಡಿಯಾ ಆಟಗಾರರು ಹೋಟೆಲ್‌ಗೆ ಬರುವುದು ಹಾಗೂ ಅವರಿಂದ ತಾನು ಆಟೋಗ್ರಾಫ್ ಪಡೆದುಕೊಳ್ಳುವುದು ಹಾಗೂ ಇನ್ನಿತರ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.

ಟೀಂ ಇಂಡಿಯಾಗೆ ಹೊರೆಯಾದ ಸ್ಟಾರ್ ಕ್ರಿಕೆಟರ್..! ಗ್ರೂಪ್ ಹಂತದಲ್ಲಿ ಈತನ ಸಾಧನೆ ಶೂನ್ಯ..! ಆದ್ರೆ ಈತ ಕೊಹ್ಲಿಯಲ್ಲ

ಹೌದು, ಸುನೀತ್ ಜೈನ್ ಎನ್ನುವ ವ್ಯಕ್ತಿ, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, 'ಫೈನಲ್‌ನಲ್ಲಿ ಸಿಗೋಣ' ಎನ್ನುವ ಕ್ಯಾಪ್ಶನ್ ನೀಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Suneet Jain (@suneetj.13)

ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಹಲವು ನೆಟ್ಟಿಗರು ಟೀಂ ಇಂಡಿಯಾ ಆಟಗಾರರು ಉಳಿದುಕೊಂಡ ಹೋಟೆಲ್ ಹೆಸರೇನು ಎಂದು ಕೇಳಿದ್ದಾರೆ. ಇದಕ್ಕೆ ತಮಾಷೆಯಾಗಿಯೇ ಪ್ರತಿಕ್ರಿಯೆ ನೀಡಿರುವ ಸುನೀತ್ ಜೈನ್, ತಮಗೆ 5 ಡಾಲರ್ ನೀಡಿದರಷ್ಟೇ ಈ ಮಾಹಿತಿ ಕೊಡುತ್ತೇನೆ ಎಂದು ರಿಪ್ಲೇ ಕೊಟ್ಟಿದ್ದಾರೆ.

ಕೊನೆಗೂ ಗಂಭೀರ್ ಆ 'ಡಿಮ್ಯಾಂಡ್' ಒಪ್ಪಿಕೊಂಡ ಬಿಸಿಸಿಐ..! ಟೀಂ ಇಂಡಿಯಾ ಹೆಡ್‌ ಕೋಚ್ ಘೋಷಣೆಗೆ ಕ್ಷಣಗಣನೆ

ಇನ್ನು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಗ್ಗೆ ಹೇಳುವುದಾರೇ, ಬಹುತೇಕ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದಿವೆ. 'ಎ' ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಭಾರತ ಸೂಪರ್ 8 ಹಂತಕ್ಕೆ ಲಗ್ಗೆಯಿಟ್ಟಿದೆ. ಸೂಪರ್ 8 ಹಂತದಲ್ಲಿ ತಲಾ 4 ತಂಡಗಳು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಮೊದಲ ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ, ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ. ಇನ್ನು ಎರಡನೇ ಗುಂಪಿನಲ್ಲಿ ವೆಸ್ಟ್ ಇಂಡೀಸ್, ಯುಎಸ್‌ಎ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಸ್ಥಾನ ಪಡೆದಿವೆ.
 

click me!