ಮುಂಜಾನೆ ಸುರಿದ ಮಳೆಯಿಂದಾಗಿ ಮೈದಾನ ಒದ್ದೆಯಾಗಿತ್ತು. ಹೀಗಾಗಿ ಟಾಸ್ ಕೂಡಾ ಮುಂದೂಡಲಾಯಿತು. ಆದರೆ ಮೈದಾನ ಪಂದ್ಯಕ್ಕೆ ಸೂಕ್ತವಲ್ಲದ ಕಾರಣ ಭಾರತೀಯ ಕಾಲಮಾನ ರಾತ್ರಿ 9 ಗಂಟೆ ವೇಳೆಗೆ ಪಂದ್ಯವನ್ನು ರದ್ದುಗೊಳಿಸಲು ಮ್ಯಾಚ್ ರೆಫ್ರಿಗಳು ನಿರ್ಧರಿಸಿದರು.
ಲಾಡೆರ್‌ಹಿಲ್: ಭಾರತ ಹಾಗೂ ಕೆನಡಾ ತಂಡಗಳ ನಡುವೆ ಶನಿವಾರ ನಿಗದಿಯಾಗಿದ್ದ ‘ಎ’ ಗುಂಪಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ಇದರಿಂದಾಗಿ ಇತ್ತಂಡಗಳೂ ತಲಾ 1 ಅಂಕ ಹಂಚಿಕೊಂಡವು.
ಫ್ಲೋರಿಡಾದಲ್ಲಿ ಕಳೆದ ಹಲವು ದಿನಗಳಿಂದಲೂ ಮಳೆಯಾಗುತ್ತಿದ್ದು, ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಕಳೆದ 2 ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ, ಸಂಪೂರ್ಣವಾಗಿ ನಿಂತಿಲ್ಲ. ಹೀಗಾಗಿ ಶನಿವಾರದ ಪಂದ್ಯ ಆರಂಭಿಸಲೂ ಸಾಧ್ಯವಾಗಲಿಲ್ಲ.
undefined
ಮುಂಜಾನೆ ಸುರಿದ ಮಳೆಯಿಂದಾಗಿ ಮೈದಾನ ಒದ್ದೆಯಾಗಿತ್ತು. ಹೀಗಾಗಿ ಟಾಸ್ ಕೂಡಾ ಮುಂದೂಡಲಾಯಿತು. ಆದರೆ ಮೈದಾನ ಪಂದ್ಯಕ್ಕೆ ಸೂಕ್ತವಲ್ಲದ ಕಾರಣ ಭಾರತೀಯ ಕಾಲಮಾನ ರಾತ್ರಿ 9 ಗಂಟೆ ವೇಳೆಗೆ ಪಂದ್ಯವನ್ನು ರದ್ದುಗೊಳಿಸಲು ಮ್ಯಾಚ್ ರೆಫ್ರಿಗಳು ನಿರ್ಧರಿಸಿದರು.
ಟೀಂ ಇಂಡಿಯಾ ಕೋಚ್ ಆಗುವ ನಿರೀಕ್ಷೆಯಲ್ಲಿರುವ ಗಂಭೀರ್‌ಗೆ ಅನಿಲ್ ಕುಂಬ್ಳೆ ಕಿವಿಮಾತು!
ಪಂದ್ಯ ರದ್ದುಗೊಂಡಿದ್ದರಿಂದ ಭಾರತ 4 ಪಂದ್ಯಗಳಲ್ಲಿ 7 ಅಂಕದೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಸೂಪರ್-8ರ ಘಟ್ಟ ಪ್ರವೇಶಿಸಿತು. ಭಾರತ ಆರಂಭಿಕ 3 ಪಂದ್ಯಗಳಲ್ಲಿ ಕ್ರಮವಾಗಿ ಐರ್ಲೆಂಡ್, ಪಾಕಿಸ್ತಾನ ಹಾಗೂ ಅಮೆರಿಕ ತಂಡಗಳ ವಿರುದ್ಧ ಜಯಗಳಿಸಿತ್ತು. ಇದೇ ವೇಳೆ ಕೆನಡಾ ತಂಡ 4 ಪಂದ್ಯಗಳಲ್ಲಿ 3 ಅಂಕದೊಂದಿಗೆ ಅಭಿಯಾನ ಕೊನೆಗೊಳಿಸಿತು. ತಂಡ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋತರೂ, ಐರ್ಲೆಂಡ್ ವಿರುದ್ಧ ಗೆದ್ದಿತ್ತು. ಬಳಿಕ ಪಾಕಿಸ್ತಾನಕ್ಕೆ ಶರಣಾಗಿತ್ತು.
ಫ್ಲೋರಿಡಾದ 3 ಪಂದ್ಯ ಮಳೆಯಿಂದಾಗಿ ರದ್ದು!
ಫ್ಲೋರಿಡಾದ ಲಾಡೆರ್‌ಹಿಲ್ ಕ್ರೀಡಾಂಗಣದಲ್ಲಿ ಈ ಬಾರಿ ನಿಗದಿಯಾಗಿದ್ದ 3 ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು. ಜೂ.12ರಂದು ನಡೆಯಬೇಕಿದ್ದ ಶ್ರೀಲಂಕಾ-ನೇಪಾಳ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಗಿತ್ತು. ಶುಕ್ರವಾರ ಅಮೆರಿಕ ಹಾಗೂ ಐರ್ಲೆಂಡ್ ನಡುವಿನ ಪಂದ್ಯ ಕೂಡಾ ರದ್ದು ಮಾಡಲಾಗಿತ್ತು. ಇನ್ನು ಜೂ.16ರಂದು ಪಾಕಿಸ್ತಾನ ಹಾಗೂ ಐರ್ಲೆಂಡ್ ಪಂದ್ಯ ನಡೆಯಬೇಕಿದ್ದು, ಆ ದಿನವೂ ಮಳೆ ಸುರಿಯುವ ಸಾಧ್ಯತೆ ಶೇ.80ಕ್ಕಿಂತ ಹೆಚ್ಚು ಎಂದು ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಪಂದ್ಯ ರದ್ದಾಗುವ ಸಾಧ್ಯತೆ ಹೆಚ್ಚು.
ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಪಾಕ್ ತಂಡದ ವಿರುದ್ಧ ದೇಶದ್ರೋಹದ ಕೇಸ್ ದಾಖಲು..!
ಸೂಪರ್-8ರಲ್ಲಿ ಭಾರತಕ್ಕೆ ಆಸೀಸ್, ಆಫ್ಘನ್ ಸವಾಲು!
‘ಎ’ ಗುಂಪಿನಿಂದ ಅಗ್ರಸ್ಥಾನಿಯಾಗಿ ಸೂಪರ್-8 ಪ್ರವೇಶಿಸಿರುವ ಭಾರತ ತಂಡಕ್ಕೆ ಸೂಪರ್-8ರ ಘಟ್ಟದಲ್ಲಿ ಕಠಿಣ ಸವಾಲು ಎದುರಾಗಲಿದೆ. ಸೂಪರ್-8ರಲ್ಲಿ 8 ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಭಾರತ ಇರಲಿರುವ ಮೊದಲ ಗುಂಪಿನಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ತಂಡಗಳೂ ಇರಲಿದ್ದು, 4ನೇ ತಂಡವಾಗಿ ಬಾಂಗ್ಲಾದೇಶ ಅಥವಾ ನೆದರ್‌ಲೆಂಡ್ಸ್ ಸ್ಥಾನ ಗಿಟ್ಟಿಸಲಿವೆ. ಭಾರತ ತಂಡ ಜೂ.20ರಂದು ಸೂಪರ್-8ರ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೆಣಸಲಿದೆ. ಜೂ.22ರಂದು ಬಾಂಗ್ಲಾ ಅಥವಾ ನೆದರ್‌ಲೆಂಡ್ಸ್ ವಿರುದ್ಧ ಆಡಲಿರುವ ಟೀಂ ಇಂಡಿಯಾ, ಜೂ.24ರಂದು ಕೊನೆ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಸವಾಲು ಎದುರಿಸಲಿದೆ.