ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು, ಅಕ್ತರ್ ಭವಿಷ್ಯಕ್ಕೆ ಭಾರತೀಯರ ಆಕ್ರೋಶ!

By Suvarna NewsFirst Published Oct 28, 2022, 7:43 PM IST
Highlights

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸತತ 2 ಗೆಲುವಿನ ಮೂಲಕ ಸೆಮಿಫೈನಲ್ ಪ್ರವೇಶದ ಹಾದಿಯನ್ನು ಸುಗಮಗೊಳಿಸಿದೆ. ಆದರೆ ಟೀಂ ಇಂಡಿಯಾ ಮುಂದಿನ ವಾರ ಮನಗೆ ವಾಪಾಸ್ಸಾಗಲಿದೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್ ಭವಿಷ್ಯ ನುಡಿದಿದ್ದಾರೆ.
 

ಲಾಹೋರ್(ಅ.28):  ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯಾರು ಸೆಮಿಫೈನಲ್ ಪ್ರವೇಶಿಸುತ್ತಾರೆ? ಯಾರು ಫೈನಲ್ ಪ್ರವೇಶಿಸುತ್ತಾರೆ ಅನ್ನೋ ಚರ್ಚೆ ಜೋರಾಗಿದೆ. ಟೀಂ ಇಂಡಿಯಾ ಈಗಾಲೇ 2 ಪಂದ್ಯ ಗೆದ್ದು ಸೆಮೀಸ್ ಹಾದಿ ಸುಗಮಗೊಳಿಸಿದೆ. ಅತ್ತ ಪಾಕಿಸ್ತಾನ ಜಿಂಬಾಬ್ವೆ ವಿರುದ್ಧ 1 ರನ್‌ಗಳ ಸೋಲು ಅನುಭವಿಸುವ ಮೂಲಕ 2 ಪಂದ್ಯಗಳನ್ನು ಕೈಚೆಲ್ಲಿದೆ. ಹೀಗಾಗಿ ಪಾಕಿಸ್ತಾನ ಸೆಮಿಫೈನಲ್ ಹಾದಿ ಅತ್ಯಂತ ಕಠಿಣವಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್, ಟೀಂ ಇಂಡಿಯಾದ ಭವಿಷ್ಯ ಹೇಳಿದ್ದಾರೆ. ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮೊದಲೇ ಹೇಳಿದ್ದೇನೆ. ಪಾಕಿಸ್ತಾನ ಮೊದಲ ವಾರದಲ್ಲಿ ಟೂರ್ನಿಯಿಂದ ಹೊರಬೀಳಲಿದೆ. ಭಾರತ ಎರಡನೇ ವಾರ ಹೊರಬೀಳಲಿದೆ ಎಂದಿದ್ದೇನೆ. ಟೀಂ ಇಂಡಿಯಾ ಹೆಚ್ಚೆಂದರೆ ಸೆಮಿಫೈನಲ್ ಆಡಲಿದೆ. ಬಳಿಕ ಮನೆಗೆ ವಾಪಾಸ್ಸಾಗಲಿದೆ ಎಂದು ಅಕ್ತರ್ ಹೇಳಿದ್ದಾರೆ.

ಪಾಕಿಸ್ತಾನ ನಾಯಕ ಕಳಪೆ ಎಂದು ಬಾಬರ್ ಅಜಮ್ ಟೀಕಿಸಿದ ಅಕ್ತರ್, ಭಾರತದ ಹೆಚ್ಚು ಸಂಭ್ರಮಿಸಬೇಕಿಲ್ಲ. ಟ್ರೋಲ್ ಮಾಡಬೇಕಿಲ್ಲ. ಸೆಮಿಫೈನಲ್ ಬಳಿಕ ಭಾರತವೂ ಮನೆಗೆ ಬರಲಿದೆ ಎಂದು ಅಕ್ತರ್ ಹೇಳಿದ್ದಾರೆ. ಭಾರತ ವಿರುದ್ದ ದಿಟ್ಟ ಹೋರಾಟ ನೀಡಿ ಸೋತಿದೆ. ಆದರೆ ಜಿಂಬಾಬ್ವೆ ವಿರುದ್ಧ 1 ರನ್‌ಗಳಿಂದ ಸೋತಿರುವುದು ದಿಟ್ಟ ಹೋರಾಟವಲ್ಲ. ಪಾಕಿಸ್ತಾನ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ ಎಂದು ಅಕ್ತರ್ ಹೇಳಿದ್ದಾರೆ.

ಫೇಕ್‌ ಮಿ.ಬೀನ್‌ ಕುರಿತಾಗಿ ಜಿಂಬಾಬ್ವೆ ಅಧ್ಯಕ್ಷನ ಟ್ವೀಟ್‌, ತಪ್ಪೊಪ್ಪಿಕೊಂಡು ಪಾಕ್‌ ಪ್ರಧಾನಿ ಟ್ವೀಟ್‌!

ಬದ್ಧವೈರಿ ಭಾರತಕ್ಕೆ ಶರಣಾಗುವ ಮೂಲಕ ಐಸಿಸಿ ಟಿ20 ವಿಶ್ವಕಪ್‌ ಅಭಿಯಾನ ಆರಂಭಿಸಿದ್ದ ಮಾಜಿ ಚಾಂಪಿಯನ್‌ ಪಾಕಿಸ್ತಾನ ಈಗ ಕ್ರಿಕೆಟ್‌ ಶಿಶು ಜಿಂಬಾಬ್ವೆ ವಿರುದ್ಧ ಮಂಡಿಯೂರಿದೆ. ಗುರುವಾರ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಪಾಕ್‌ 1 ರನ್‌ ಆಘಾತಕಾರಿ ಸೋಲು ಕಂಡಿತು. ಸತತ 2ನೇ ಸೋಲು ಕಂಡ ಪಾಕ್‌ ಮೊದಲ ಸುತ್ತಲ್ಲೇ ಹೊರಬೀಳುವ ಆತಂಕಕ್ಕೆ ಗುರಿಯಾಗಿದೆ.

ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ 20 ಓವರಲ್ಲಿ 8 ವಿಕೆಟ್‌ಗೆ 130 ರನ್‌ ಗಳಿಸಿತು. ವಿಲಿಯಮ್ಸ್‌ 31, ಬ್ರಾಡ್‌ ಎವಾನ್ಸ್‌ 19 ರನ್‌ ಗಳಿಸಿದರು. ಮೊಹಮದ್‌ ವಾಸಿಂ 4, ಶದಾಬ್‌ ಖಾನ್‌ 3 ವಿಕೆಟ್‌ ಪಡೆದರು. ಸುಲಭ ಗುರಿ ಬೆನ್ನತ್ತಿದರೂ ಪಾಕ್‌ ಬ್ಯಾಟರ್‌ಗಳು ರನ್‌ ಗಳಿಸಲು ತಿಣುಕಾಡಿದರು. ಶಾನ್‌ ಮಸೂದ್‌(44) ಹೋರಾಟದ ಹೊರತಾಗಿಯೂ ತಂಡ 8 ವಿಕೆಟ್‌ಗೆ 129 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಕೊನೆ ಓವರಲ್ಲಿ ಬೇಕಿದ್ದ 11 ರನ್‌ಗಳಿಸಲು ಪಾಕ್‌ ವಿಫಲವಾಯಿತು. ಬ್ಯಾಟಿಂಗ್‌ನಲ್ಲಿ ವಿಫಲರಾದರೂ ಬೌಲಿಂಗ್‌ನಲ್ಲಿ ಮಿಂಚಿದ ಸಿಕಂದರ್‌ ರಾಜಾ 24ಕ್ಕೆ 3 ವಿಕೆಟ್‌ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.

ವಿಲ್ ಯು ಮ್ಯಾರಿ ಮಿ? ಭಾರತ ನೆದರ್ಲೆಂಡ್ ಪಂದ್ಯದ ನಡುವೆ ಗೆಳತಿಗೆ ಪ್ರೇಮ ನಿವೇದನೆ!

ಪಾಕಿಸ್ತಾನ ಸತತ 2 ಪಂದ್ಯ ಸೋತಿರುವ ಕಾರಣ ಸೆಮಿಫೈನಲ್ ಹಾದಿ ಇತರ ತಂಡದ ಮೇಲೆ ಅವಲಂಬಿತವಾಗಿದೆ. ಪಾಕಿಸ್ತಾನ ಇನ್ನುಳಿದ ಎಲ್ಲಾ ಪಂದ್ಯ ಗೆದ್ದರೂ ಇತರ ತಂಡದ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಪಾಕ್ ಸೆಮಿಫೈನಲ್ ಹಾದಿ ಮುಳ್ಳಿನ ಹಾದಿಯಾಗಿದೆ. ಇತ್ತ ಭಾರತ ಕಳೆದ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

click me!