ಪಾಕ್ ಗೆಲುವಿನ ಬಳಿಕ ಬದಲಾಯ್ತು ಸೆಮೀಸ್ ಲೆಕ್ಕಾಚಾರ, ಭಾರತ, ಸೌತ್ ಆಫ್ರಿಕಾಗೆ ಗೆಲುವೇ ಆಧಾರ!

Published : Nov 03, 2022, 08:10 PM IST
ಪಾಕ್ ಗೆಲುವಿನ ಬಳಿಕ ಬದಲಾಯ್ತು ಸೆಮೀಸ್ ಲೆಕ್ಕಾಚಾರ, ಭಾರತ, ಸೌತ್ ಆಫ್ರಿಕಾಗೆ ಗೆಲುವೇ ಆಧಾರ!

ಸಾರಾಂಶ

ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಗುಂಪಿನ ಸೆಮಿಫೈನಲ್ ಲೆಕ್ಕಾಚಾರ ಮತ್ತೆ ಕೆಲ ಯೂ ಟರ್ನ್ ಪಡೆದಿದೆ. ಬಾಂಗ್ಲಾದೇಶ ವಿರುದ್ಧದ ಗೆಲುವಿನ ಬಳಿಕ ಭಾರತ ಸೆಮಿಫೈನಲ್ ಪ್ರವೇಶ ಸುಲಭವಾಗಿತ್ತು. ಆದರೆ ಸೌತ್ ಆಫ್ರಿಕಾ ವಿರುದ್ಧ ಪಾಕಿಸ್ತಾನ ಗೆಲುವಿನ ಬಳಿಕ ಇದೀಗ ಮತ್ತೆ ಲೆಕ್ಕಾಚಾರ ಬದಲಾಗಿದೆ.  

ಆಡಿಲೇಡ್(ನ.03): ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶದ ಲೆಕ್ಕಾಚಾರ ಪ್ರತಿ ದಿನ ಬದಲಾಗುತ್ತಿದೆ. ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸುತ್ತಿದ್ದಂತೆ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಗುಂಪಿನಲ್ಲಿ ಸೆಮಿಫೈನಲ್ ಪ್ರವೇಶಕ್ಕೆ ಪೈಪೋಟಿ ಹೆಚ್ಚಾಗಿದೆ. ಸದ್ಯ 4ರಲ್ಲಿ 3 ಗೆಲುವು ಸಾಧಿಸಿರುವ ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿದೆ. ಸೌತ್ ಆಫ್ರಿಕಾ ಹಾಗೂ ಪಾಕಿಸ್ತಾನ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ಇದೀಗ ಎರಡನೇ ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸುವ ತಂಡ ಯಾವುದು ಅನ್ನೋ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಬಾಂಗ್ಲಾದೇಶ ವಿರುದ್ದದ ಗೆಲುವಿನ ಬಳಿಕ ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಸುಗಮವಾಗಿತ್ತು. ಆದರೆ ಸೌತ್ ಅಫ್ರಿಕಾ ವಿರುದ್ಧ ಪಾಕಿಸ್ತಾನ ಗೆಲುವಿನ ಬಳಿಕ ಇದೀಗ ಸೆಮೀಸ್ ಪ್ರವೇಶ ಮತ್ತಷ್ಟು ಕಠಿಣಗೊಂಡಿದೆ.

ಭಾರತ, ಸೌತ್ ಆಫ್ರಿಕಾ ಹಾಗೂ ಪಾಕಿಸ್ತಾನ ಮೂರು ತಂಡಗಳು ಸೆಮಿಫೈನಲ್ ಪ್ರವೇಶಕ್ಕೆ ಹೋರಾಟ ಜೋರಾಗಿದೆ. ಇದರಲ್ಲಿ ಎರಡು ತಂಡಕ್ಕೆ ಮಾತ್ರ ಅವಕಾಶವಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಟಾಪ್ 2 ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ತೀವ್ರ ಪೈಪೋಟಿ ಎದುರಾಗಿದೆ. ಮೂರು ತಂಡಗಳಿಗೆ ಇನ್ನೊಂದು ಪಂದ್ಯ ಬಾಕಿ ಇದೆ. ಸರಳವಾಗಿ ಹೇಳಬೇಕು ಅಂದರೆ ಗೆದ್ದ ತಂಡ ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಮೂರು ತಂಡಗಳು ಬಾಕಿ ಇರುವ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಭಾರತ ಹಾಗೂ ಸೌತ್ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸಲಿದೆ. ಪಾಕಿಸ್ತಾನ ಹೊರಬೀಳಲಿದೆ.

T20 WORLD CUP: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪಾಕ್‌ ಬೇಡಿ!

ಟೀಂ ಇಂಡಿಯಾ ಅಂತಿಮ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ದ ಪಂದ್ಯ ಆಡಬೇಕಿದೆ. ಈ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕು. ಗೆದ್ದರೇ ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಒಂದು ವೇಳೆ ಭಾರತ ಸೋತರೆ, ಅತ್ತ ಪಾಕಿಸ್ತಾನ ಅಥವಾ ಸೌತ್ ಆಫ್ರಿಕಾ ಸೋತರೂ ಭಾರತ ಸೆಮಿಫೈನಲ್ ಪ್ರವೇಶಸಲಿದೆ. ಆದರೆ ಸೌತ್ ಆಫ್ರಿಕಾ ತಂಡ ನೆದರ್ಲೆಂಡ್ ವಿರುದ್ಧ ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಸುಲಭ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಸೌತ್ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಇದೆ. 

ಪಾಕಿಸ್ತಾನ ಅಂತಿಮ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದರೆ 6 ಅಂಕ ಸಂಪಾದಿಸಲಿದೆ. ಪಾಕಿಸ್ತಾನ ನೆಟ್ ರನ್‌ರೇಟ್ ಹೆಚ್ಚಿದೆ. ಪಾಕಿಸ್ತಾನಕ್ಕೆ ಕೇವಲ ಗೆಲುವು ಮಾತ್ರ ಸೆಮಿಫೈನಲ್ ಪ್ರವೇಶಕ್ಕೆ ನೆರವಾಗುವುದಿಲ್ಲ. ಗೆಲುವಿನ ಜೊತೆಗೆ ಇತರ ತಂಡ ಅಂದರೆ ಭಾರತ ಹಾಗೂ ಸೌತ್ ಆಫ್ರಿಕಾ ತಂಡ ಸೋಲು ಅನುಭವಿಸಿದರೆ ಮಾತ್ರ ಸೆಮಿಫೈನಲ್ ಪ್ರವೇಶಿಸಲಿದೆ.

T20 World Cup: ಭಾರತವನ್ನು ಜಿಂಬಾಬ್ವೆ ಸೋಲಿಸಿದರೆ ನಾನು ಆ ದೇಶದವರನ್ನೇ ಮದುವೆಯಾಗ್ತೀನಿ

ಸೆಮೀಸ್‌ ರೇಸ್‌ನಿಂದ ಹೊರಬಿದ್ದ ಜಿಂಬಾಬ್ವೆ 
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ಅಚ್ಚರಿಯ ಸೋಲುಣಿಸಿದ್ದ ಜಿಂಬಾಬ್ವೆ ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿದೆ. ಬುಧವಾರ ನೆದರ್ಲೆಂಡ್‌್ಸ ವಿರುದ್ಧ 5 ವಿಕೆಟ್‌ ಸೋಲನುಭವಿಸಿತು. ಈ ಪಂದ್ಯಕ್ಕೂ ಮೊದಲೇ ಸೆಮೀಸ್‌ ರೇಸ್‌ನಿಂದ ಹೊರಬಿದ್ದಿದ್ದ ನೆದರ್ಲೆಂಡ್‌್ಸ ಸೂಪರ್‌-12 ಹಂತದಲ್ಲಿ ಮೊದಲ ಗೆಲುವು ದಾಖಲಿಸಿತು.ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ 19.2 ಓವರ್‌ಗಳಲ್ಲಿ 117ಕ್ಕೆ ಆಲೌಟಾಯಿತು. ಸುಲಭ ಗುರಿ ಬೆನ್ನತ್ತಿದ ನೆದರ್ಲೆಂಡ್‌್ಸ 18 ಓವರಲ್ಲಿ ಜಯಿಸಿತು. ಮ್ಯಾಕ್ಸ್‌ ಓ’ ಡೌಡ್‌ (52) ಅರ್ಧಶತಕ ಬಾರಿಸಿದರೆ, ಟಾಮ್‌ ಕೂಪರ್‌ 32 ರನ್‌ ಕೊಡುಗೆ ನೀಡಿದರು.

ಬ್ಯಾಟಿಂಗ್‌ ವೈಫಲ್ಯ: ಗೆಲ್ಲಲೇಬೇಕಾದ ಒತ್ತಡದಲ್ಲಿ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ ಆರಂಭದಲ್ಲೇ ಕುಸಿಯಿತು. 20 ರನ್‌ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್‌ ಬಿದ್ದವು. ಸಿಕಂದರ್‌ ರಾಜಾ(40), ವಿಲಿಯಮ್ಸ್‌(28) ತಂಡ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ತಡೆದರು. ಉಳಿದವರಾರ‍ಯರೂ ಎರಡಂಕಿ ಮೊತ್ತ ಗಳಿಸಲಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL Mini Auction 2026: 1355 ಆಟಗಾರರಲ್ಲಿ 350 ಪ್ಲೇಯರ್ಸ್ ಶಾರ್ಟ್‌ಲಿಸ್ಟ್! ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್
ಸಡನ್ನಾಗಿ ಸೋಶಿಯಲ್‌ ಮೀಡಿಯಾದಲ್ಲಿ ಸನ್ನಿ ಲಿಯೋನ್‌ ಫೋಟೋ ಹಂಚಿಕೊಂಡ ಅಶ್ವಿನ್‌, ಇದಕ್ಕಿದೆ ಐಪಿಎಲ್ ಲಿಂಕ್‌!