ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 5 ರನ್ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಈ ಗೆಲುವಿನ ಬಳಿಕ ಸೆಮಿಫೈನಲ್ ಲೆಕ್ಕಾಚಾರದಲ್ಲಿ ಕೆಲ ಬದಲಾವಣೆ ಆಗಿದೆ. ಭಾರತದ ಸೆಮಿಫೈನಲ್ ಹಾದಿ, ಪಾಕಿಸ್ತಾನದ ಅವಕಾಶ , ಸೌತ್ ಆಫ್ರಿಕಾ ಮುಂದಿರುವ ಸವಾಲಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಆಡಿಲೇಡ್(ನ.02): ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟದ ಮೂಲಕ ಮುನ್ನಗ್ಗುತ್ತಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಂತಿಮ ಎಸೆತದವರೆಗೆ ಗೆಲುವಿನ ಕುತೂಹಲ ಬಹಿರಂಗಗೊಂಡಿರಲಿಲ್ಲ. ಆದರೆ ಕೊನೆಯ ಎಸೆತದಲ್ಲಿ ಭಾರತ 5 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಸುಗಮಗೊಂಡಿದೆ. ಆದರೆ ಇನ್ನೂ ಖಚಿತಗೊಂಡಿಲ್ಲ. ಟೀಂ ಇಂಡಿಯಾ 4 ಪಂದ್ಯದಲ್ಲಿ 3 ಗೆಲುವು 1 ಸೋಲಿನೊಂದಿಗೆ 6 ಅಂಕ ಸಂಪಾದಿಸಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾ 3 ಪಂದ್ಯದಲ್ಲಿ 2 ಗೆಲುವು 1 ಪಂದ್ಯ ರದ್ದಾಗಿರುವ ಕಾರಣ 5 ಅಂಕ ಸಂಪಾದಿಸಿದೆ. ಮೂರನೇ ಸ್ಥಾನದಲ್ಲಿ ಬಾಂಗ್ಲಾದೇಶ, ನಾಲ್ಕನೇ ಸ್ಥಾನದಲ್ಲಿ ಜಿಂಬಾಬ್ವೆ , 5ನೇ ಸ್ಥಾನದಲ್ಲಿ ಪಾಕಿಸ್ತಾನ ಇದೆ. ಮುಂದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಪಾಕಿಸ್ತಾನ ವಿರುದ್ಧ ಗೆಲುವು ದಾಖಲಿಸಿದರೆ ಎರಡನೇ ಗುಂಪಿನಿಂದ ಸೌತ್ ಆಫ್ರಿಕಾ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಇಷ್ಟೇ ಅಲ್ಲ ಇದೇ ಗೆಲುವು ಭಾರತ ತಂಡದ ಸೆಮಿಫೈನಲ್ ಪ್ರವೇಶವನ್ನೂ ಖಚಿತಪಡಿಸಲಿದೆ.
ಹೌದು, ಪಾಕಿಸ್ತಾನ ವಿರುದ್ಧ ಸೌತ್ ಆಫ್ರಿಕಾ ಗೆಲುವು ದಾಖಲಿಸಿದರೆ, ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶ ಖಚಿತವಾಗಲಿದೆ. ಆದರೆ ಪಾಕಿಸ್ತಾನ ತನ್ನ ಅಂತಿಮ ಎರಡೂ ಪಂದ್ಯ ಗೆದ್ದರೆ ಲೆಕ್ಕಾಚಾಲ ಉಲ್ಟಾ ಆಗಲಿದೆ. ಹೀಗಾದಲ್ಲಿ ಭಾರತದ ಸೆಮಿಫೈನಲ್ ಪ್ರವೇಶ ಖಚಿತಪಡಿಸಲು ಜಿಂಬಾಬ್ವೆ ವಿರುದ್ದ ಗೆಲ್ಲಲಬೇಕು. ಜಿಂಬಾಬ್ವೆ ತಂಡ ಭಾರತ ತಂಡ ಸೋಲಿಸಿದರೆ, ಇತ್ತ ಪಾಕಿಸ್ತಾನ ಉತ್ತಮ ಮಾರ್ಜಿನ್ ಮೂಲಕ ಎರಡೂ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ, ಸೆಮಿಫೈನಲ್ ಪ್ರವೇಶಿಸುವ ಸಣ್ಣ ಅವಕಾಶವೊಂದು ತೆರೆಯಲಿದೆ. ಆದರೆ ಪಾಕಿಸ್ತಾನ ಅಸಾಧಾರಣ ಪ್ರದರ್ಶನ ನೀಡಬೇಕು.
T20 WORLD CUP ಬಾಂಗ್ಲಾ ಎದುರು ರೋಚಕ ಜಯ, ಸೆಮೀಸ್‌ಗೆ ಟೀಂ ಇಂಡಿಯಾ ಸನಿಹ..!
ಸೌತ್ ಆಫ್ರಿಕಾ ತಂಡ ಪಾಕಿಸ್ತಾನ ಹಾಗೂ ನೆದರ್ಲೆಂಡ್ ವಿರುದ್ದ ಪಂದ್ಯ ಆಡಲಿದೆ. ಇದರಲ್ಲಿ ಒಂದರಲ್ಲಿ ಗೆಲುವು ದಾಖಲಿಸಿದರೂ ಸೌತ್ ಆಫ್ರಿಕಾ ಸೆಮಿಫೈನಲ್ ಹಾದಿ ಸುಗಮಗೊಳ್ಳಲಿದೆ. ಪಾಕಿಸ್ತಾನದ ಮುಂದೆ ಕಠಿಣ ಸವಾಲು ಇದೆ. ಸೌತ್ ಆಫ್ರಿಕಾ ಹಾಗೂ ಬಾಂಗ್ಲಾದೇಶ ವಿರುದ್ದ ಪಂದ್ಯ ಆಡಬೇಕಿದೆ.
undefined
ಸೆಮೀಸ್ ರೇಸಲ್ಲಿ ಉಳಿದ ಇಂಗ್ಲೆಂಡ್
ಐಸಿಸಿ ಟಿ20 ವಿಶ್ವಕಪ್‌ನ ನ್ಯೂಜಿಲೆಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಇಂಗ್ಲೆಂಡ್ 20 ರನ್ ಗೆಲುವು ಸಾಧಿಸಿದ್ದು, ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಗ್ಲೆನ್ ಫಿಲಿಫ್ಸ್ ಹೋರಾಟ ಕಿವೀಸ್‌ಗೆ ಜಯ ತಂದುಕೊಡಲಿಲ್ಲ. ಈ ಗೆಲುವಿನೊಂದಿಗೆ ಗುಂಪು 1ರ ನಾಕೌಟ್ ರೇಸ್ ಮತ್ತಷ್ಟುರೋಚಕತೆ ಸೃಷ್ಟಿಸಿದ್ದು, ಇಂಗ್ಲೆಂಡ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಉತ್ತಮ ನೆಟ್ ರನ್‌ರೇಟ್ ಹೊಂದಿರುವ ಕಾರಣ ಕಿವೀಸ್ ಅಗ್ರಸ್ಥಾನ ಉಳಿಸಿಕೊಂಡಿದೆ.
T20 World Cup ಇತಿಹಾಸದಲ್ಲಿ ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ..!
ಸೆಮೀಸ್ ರೇಸ್ಸಿಂದ ಆಫ್ಘನ್ ಔಟ್
ಅಷ್ಘಾನಿಸ್ತಾನ ವಿರುದ್ಧ 6 ವಿಕೆಟ್ ಗೆಲುವು ಸಾಧಿಸುವ ಮೂಲಕ ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸುವ ಆಸೆಯನ್ನು ಶ್ರೀಲಂಕಾ ಜೀವಂತವಾಗಿರಿಸಿಕೊಂಡಿದೆ. ಈ ಸೋಲಿನಿಂದಾಗಿ ಆಫ್ಘನ್‌ಗೆ ಸೆಮೀಸ್ ಬಾಗಿಲು ಮುಚ್ಚಿದೆ. ಆಫ್ಘನ್ನರ ಮೇಲೆ ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿದ ಶ್ರೀಲಂಕಾ ತನ್ನ ನೆಟ್ ರನ್‌ರೇಟ್ ಉತ್ತಮಗೊಳಿಸಿಕೊಳ್ಳುವುದರ ಕಡೆಗೂ ಗಮನ ಹರಿಸಿತು. ವನಿಂಡು ಹಸರಂಗ ಜವಾಬ್ದಾರಿಯುತ ಬೌಲಿಂಗ್‌ನ ನೆರವಿನಿಂದ ಆಫ್ಘನ್ ಪಡೆಯನ್ನು 8 ವಿಕೆಟ್‌ಗೆ 144 ರನ್‌ಗಳ ಸಾಧಾರಣ ಮೊತ್ತಕ್ಕೆ ಲಂಕಾ ನಿಯಂತ್ರಿಸಿತು. ಪಥುಂ ನಿಸ್ಸಾಂಕ(12) ಬೇಗನೆ ಔಟಾದರು. ಮುಜೀಬ್‌ರ ಸ್ಪಿನ್ ದಾಳಿ ಎದುರು ಲಂಕಾ ತಿಣುಕಾಡಿತು. ಪವರ್-ಪ್ಲೇನಲ್ಲಿ ಕೇವಲ 28 ರನ್ ಗಳಿಸಿತು.