T20 World Cup 2021: ಪಂದ್ಯ ಬಹಿಷ್ಕರಿಸಿದ ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ಪಾಕ್

By Suvarna NewsFirst Published Oct 26, 2021, 11:05 PM IST
Highlights
  • ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ 5 ವಿಕೆಟ್ ಗೆಲುವು
  • ಸೇಡು ತೀರಿಸಿಕೊಂಡು ಕೇಕೆ ಹಾಕಿದ ಪಾಕಿಸ್ತಾನ
  • ನ್ಯೂಜಿಲೆಂಡ್ ತಂಡಕ್ಕೆ ಶಾಕ್ ನೀಡಿದ ಪಾಕಿಸ್ತಾನ

ಶಾರ್ಜಾ(ಅ.26): ಪಾಕಿಸ್ತಾನ ಪ್ರವಾಸದಲ್ಲಿ ದಿಢೀರ್ ಟೂರ್ನಿ ಬಹಿಷ್ಕರಿಸಿ ತವರಿಗೆ ವಾಪಾಸ್ಸಾದ ನ್ಯೂಜಿಲೆಂಡ್ ವಿರುದ್ಧ ಬಾಬರ್ ಸೈನ್ಯ ಸೇಡು ತೀರಿಸಿಕೊಂಡಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕ್ 5 ವಿಕೆಟ್ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಗೆಲುವಿನ ಓಟ ಮುಂದುವರಿಸಿದೆ.

ಮೊಹಮ್ಮದ್ ಶಮಿ ಬೆಂಬಲಿಸಿ ಮಹತ್ವದ ಸಂದೇಶ ಸಾರಿದ ಪಾಕ್ ಕ್ರಿಕೆಟಿಗ ರಿಜ್ವಾನ್!

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ಪಾಕಿಸ್ತಾನ ತನ್ನ ಬಲಿಷ್ಠ ಬೌಲಿಂಗ್ ದಾಳಿಯಿಂದ ಕುಟುಕಿತು. ಹೀಗಾಗಿ ನ್ಯೂಜಿಲೆಂಡ್ ಟಿ20 ಸ್ಪೆಷಲಿಸ್ಟ್‌ಗೆ ಅಬ್ಬರಿಸಲು ಸಾಧ್ಯವಾಗಿಲ್ಲ. ಮಾರ್ಟಿನ್ ಗಪ್ಟಿಲ್ 17, ಡ್ರೈಲ್ ಮಿಚೆಲ್ 27, ನಾಯಕ ಕೇನ್ ವಿಲಿಯಮ್ಸನ್ 25, ಡೇವೊನ್ ಕೊನ್ವೆ 27, ಗ್ಲೆನ್ ಫಿಲಿಪ್ಸ್ 13 ರನ್ ಸಿಡಿಸಿದರು. ಈ ಮೂಲಕ ನ್ಯೂಜಿಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 134 ರನ್ ಸಿಡಿಸಿತು. 

ಸುಲಭ ಗುರಿ ಪಡೆದ ಪಾಕಿಸ್ತಾನ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕ ಬಾಬರ್ ಅಜಮ್ 9 ರನ್ ಸಿಡಿಸಿ ಔಟಾದರು. ಆದರೆ ಮೊಹಮ್ಮದ್ ರಿಜ್ವಾನ್ ಹಾಗೂ ಫಕಾರ್ ಜಮಾನ್ ಹೋರಾಟದಿಂದ ಪಾಕಿಸ್ತಾನ ಚೇತರಿಸಿಕೊಂಡಿತು. ಫಕರ್ ಜಮಾನ್ 11 ರನ್ ಸಿಡಿಸಿ ಔಟಾದರು.  47 ರನ್‌ಗೆ ಪಾಕಿಸ್ತಾನ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. 

ಪಾಕ್ ವಿರುದ್ದ ಭಾರತ ಸೋಲಿಗೆ ಕೊಹ್ಲಿ ಮಾಡಿದ ಒಂದು ತಪ್ಪು ಕಾರಣ ಎಂದ ಇಂಜಮಾಮ್!

ಮೊಹಮ್ಮದ್ ಹಫೀಜ್ 11 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಹೋರಾಟ ನೀಡಿದ ರಿಜ್ವಾನ್ 33 ರನ್ ಸಿಡಿಸಿ ಔಟಾದರು. 69 ರನ್‌ಗೆ 4 ವಿಕೆಟ್ ಕಳೆದುಕೊಂಡ ಪಾಕಿಸ್ತಾನ ತಂಡ ಸಂಕಷ್ಟಕ್ಕೆ ಸಿಲುಕಿತು. ಟಾರ್ಗೆಟ್ ಸುಲಭವಾಗಿದ್ದರೂ  ನ್ಯೂಜಿಲೆಂಡ್ ದಾಳಿಗೆ ವಿಕೆಟ್ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಪಾಕಿಸ್ತಾನ ಮುಂದಾಯಿತು.

Pak ವಿರುದ್ಧ ಸೋತ ಭಾರತ: ನಿಂದನೆಗೀಡಾದ ಶಮಿ ಬೆಂಬಲಕ್ಕೆ ಬಂದ ಕ್ರಿಕೆಟ್‌ ದೇವರು!

ಕುಸಿದ ತಂಡಕ್ಕೆ ಶೋಯೆಬ್ ಮಲಿಕ್ ಆಸರೆಯಾದರು. ಆದರೆ ಇಮಾದ್ ವಾಸಿಮ್ 11 ರನ್ ಸಿಡಿಸಿ ನಿರ್ಗಮಿಸಿದರು. ಮಲಿಕ್ ಹಾಗೂ ಆಸಿಫ್ ಆಲಿ ಹೋರಾಟದಿಂದ ಪಾಕಿಸ್ತಾನ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿತು. ಅಂತಿಮ 12 ಎಸೆತದಲ್ಲಿ ಪಾಕಿಸ್ತಾನ ಗೆಲುವಿಗೆ ಕೇವಲ 9 ರನ್ ಅವಶ್ಯಕತೆ ಇತ್ತು.

T20 world Cup 2021 ಟೂರ್ನಿಯಲ್ಲಿ ಪಾಕಿಸ್ತಾನದ ಗೆಲುವಿನ ಓಟ ಮುಂದುವರಿದಿದೆ. ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ 10 ವಿಕೆಟ್ ಗೆಲುವು ಸಾಧಿಸಿತ್ತು. ಈ ಮೂಲಕ ಇದೇ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ ಗೆಲುವು ಸಾಧಿಸಿದ ಹೆಗ್ಗಳಿಕೆಗ ಪಾಕಿಸ್ತಾನ ಪಾತ್ರವಾಗಿದೆ. ಇದೀಗ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಪಾಕಿಸ್ತಾನ ಗೆಲುವಿನ ನಗೆ ಬೀರಿದೆ.

T20 World Cup ಸೋಲಿನ ಗಾಯದ ಮೇಲೆ ಬರೆ, ಮುಂದಿನ ಪಂದ್ಯಕ್ಕೆ ಈ ಸ್ಟಾರ್ ಆಟಗಾರ ಆಡೋದು ಡೌಟ್..!

ಅಂಕಪಟ್ಟಿ:
ಟಿ20 ವಿಶ್ವಕಪ್ ಟೂರ್ನಿಯ 2ನೇ ಗುಂಪಿನಲ್ಲಿ ಪಾಕಿಸ್ತಾನ ಮತ್ತೆ ಅಗ್ರಸ್ಥಾನಕ್ಕೇರಿದೆ. ಎರಡು ಪಂದ್ಯದಿಂದ 2 ಗೆಲುವು ದಾಖಲಿಸಿರುವ ಪಾಕಿಸ್ತಾನ 4 ಅಂಕಗೊಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನು ಆಪ್ಘಾನಿಸ್ತಾನ ಆಡಿದ 1 ಪಂದ್ಯದಲ್ಲಿ 1 ಗೆಲುವು ಸಾಧಿಸಿ 2ನೇ ಸ್ಥಾನದಲ್ಲಿದೆ. ನಮಿಬಿಯಾ ಹಾಗೂ ನ್ಯೂಜಿಲೆಂಡ್ 3 ಮತ್ತು ನಾಲ್ಕನೇ ಸ್ಥಾನದಲ್ಲಿದೆ. ಟೀಂ ಇಂಡಿಯಾ 5 ಹಾಗೂ ಸ್ಕಾಟ್‌ಲೆಂಡ್ 6ನೇ ಸ್ಥಾನದಲ್ಲಿದೆ.

click me!