ದುಬೈ(ಅ.26): T20 world Cup 2021 ಟೂರ್ನಿಯಲ್ಲಿ ಭಾರತ(Team India) ವಿರುದ್ಧ ಪಂದ್ಯ ಗೆದ್ದ ಪಾಕಿಸ್ತಾನ( Pakistan) ತಂಡವನ್ನು ಪಾಕ್ ಮಾಜಿ ಕ್ರಿಕೆಟಿಗರು ಪ್ರತಿ ದಿನ ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಇದು ಸಹಜ ಬಿಡಿ. ಆದರೆ ಇದರ ನಡುವೆ ಧರ್ಮವನ್ನು ಎಳೆದು ತಂದು ಕ್ರಿಕೆಟ್ ಇಬ್ಬಾಗ ಮಾಡುವ ಕೆಲಸಕ್ಕೆ ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಯತ್ನಿಸಿದ್ದಾರೆ. ಪಾಕ್ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಹಿಂದೂಗಳ(Hindu) ನಡುವೆ ನಮಾಜ್(Namaz) ಮಾಡಿರುವುದು ಎಲ್ಲಕ್ಕಿಂತ ಹೆಚ್ಚು ತೃಪ್ತಿ ನೀಡಿದೆ ಎಂದು ಪಾಕಿಸ್ತಾನ ಮಾಜಿ ನಾಯಕ ವಕಾರ್ ಯೂನಿಸ್(Waqar Yunis) ಹೇಳಿದ್ದಾರೆ. ಈ ಹೇಳಿಕೆಗೆ ಖ್ಯಾತ ಕಮೆಂಟೇಟರ್ ಹರ್ಷಾ ಬೋಗ್ಲೇ ತಿರುಗೇಟು ನೀಡಿದ್ದಾರೆ.
ಭಾರತ ವಿರುದ್ಧ ಘೋಷಣೆ, ಪಾಕ್ ಗೆಲುವಿಗೆ ಸಂಭ್ರಮ; ಕಾಶ್ಮೀರ ವಿದ್ಯಾರ್ಥಿ, ರಾಜಸ್ಥಾನ ಶಿಕ್ಷಕಿ ಮೇಲೆ ಕೇಸ್!
ಪಾಕಿಸ್ತಾನ ಗೆಲುವು ಸಂಭ್ರಮಿಸುತ್ತಾ ಪಾಕಿಸ್ತಾನ ಮಾಧ್ಯಮ ಚರ್ಚಾ ಕಾರ್ಯಕ್ರಮ ನಡೆಸಿತ್ತು. ಈ ಚರ್ಚೆಯಲ್ಲಿ ವಕಾರ್ ಯೂನಿಸ್, ಮಾಜಿ ವೇಗಿ ಶೋಯೆಬ್ ಅಕ್ತರ್ ಕೂಡ ಪಾಲ್ಗೊಂಡಿದ್ದರು. ಚರ್ಚೆಯ ನಡುವೆ ರಿಜ್ವಾನ್ ಬ್ಯಾಟಿಂಗ್‌ಗಿಂತ ಹೆಚ್ಚು ತೃಪ್ತಿ ನೀಡಿರುವ ವಿಚಾರ ಎಂದರೆ, ಹಿಂದೂಗಳ ನಡುವೆ ರಿಜ್ವಾನ್ ನಮಾಜ್ ಮಾಡಿರುವುದು. ಇದು ಅತ್ಯಂತ ಖುಷಿ ಹಾಗೂ ತೃಪ್ತಿ ನೀಡುವ ವಿಚಾರ ಎಂದು ವಕಾರ್ ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.
"Rizwan offered Namaz during match in middle of Hindus was most satisfying thing Mashallah, even more than his batting"
- Waqar Younis & Shoaib Akhtar discusspic.twitter.com/ELTVJSTqh4
ಹಿಂದೂಗಳ ನಡುವೆ ನಮಾಜ್ ಮಾಡುವುದು ಹೆಚ್ಚು ತೃಪ್ತಿ ನೀಡುವ ವಿಚಾರ ಅನ್ನೋ ವಕಾರ್ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ. ಈ ಹೇಳಿಕೆ ವಿರುದ್ಧ ಪ್ರತಿಕ್ರಿಯೆ ನೀಡಿರುವ ಹರ್ಷಾ ಬೋಗ್ಲೆ, ಇಂತಹ ಹೇಳಿಕೆ ನೀಡಿ ಕ್ರಿಕೆಟ್ ಇಬ್ಬಾಗ ಮಾಡುವ ಪ್ರಯತ್ನ ಮಾಡಬೇಡಿ ಎಂದಿದ್ದಾರೆ.
ಪಾಕ್ ವಿರುದ್ದ ಭಾರತ ಸೋಲಿಗೆ ಕೊಹ್ಲಿ ಮಾಡಿದ ಒಂದು ತಪ್ಪು ಕಾರಣ ಎಂದ ಇಂಜಮಾಮ್!
ಹಿಂದೂಗಳ ಮುಂದೆ ರಿಜ್ವಾನ್ ನಮಾಜ್ ಮಾಡುವುದನ್ನು ನೋಡುವುದು ನನಗೆ ತುಂಬಾ ವಿಶೇಷ ಹಾಗೂ ತೃಪ್ತಿ ನೀಡಿತ್ತು ಎಂಬ ವಕಾರ್ ಯೂನಿಸ್ ಹೇಳಿಕೆ ಕೇಳಿ ನಿರಾಸೆಯಾಗಿದೆ. ಶ್ರೇಷ್ಠ ಕ್ರಿಕೆಟಿಗನೊಬ್ಬ ಈ ಹೇಳಿಕೆ ನೀಡಿರುವುದು ಬೇಸರದ ಸಂಗತಿ. ನಮ್ಮಲ್ಲಿ ಹಲವರು ಈ ರೀತಿಯ ವಿಚಾಗಳನ್ನು ಹೇಳುವುದಿಲ್ಲ. ಇದರ ಬದಲಾಗಿ ಕ್ರಿಕೆಟ್, ಟೆಕ್ನಿಕ್, ಸಾಧನೆ ಕುರಿತು ಮಾತನಾಡುತ್ತಾರೆ. ಆದರೆ ಈ ರೀತಿ ವಿಚಾರ ಕೇಳಲು ಭಯವಾಗುತ್ತದೆ ಎಂದು ಹರ್ಷಾ ಬೋಗ್ಲೆ ಟ್ವೀಟ್ ಮಾಡಿದ್ದಾರೆ.
For a person of Waqar Younis' stature to say that watching Rizwan offering namaz in front of Hindus was very special to him, is one of the most disappointing things I have heard. A lot of us try hard to play such things down and talk up sport and to hear this is terrible.
— Harsha Bhogle (@bhogleharsha)ಸರಣಿ ಟ್ವೀಟ್ ಮಾಡಿರುವ ಹರ್ಷಾ ಬೋಗ್ಲೆ ಕ್ರಿಕೆಟ್ ರಾಯಭಾರಿಗಳು ಈ ರೀತಿ ವಿಚಾರವನ್ನು ಬಿಟ್ಟು ತಂಡದ ಸಾಧನೆ, ಕ್ರಿಕೆಟಿಗರ ಕಠಿಣ ಪರಿಶ್ರಮ ಕುರಿತು ಮಾತನಾಡಬೇಕು. ವಕಾರ್ ಯೂನಿಸ್ ಈ ಕುರಿತು ಕ್ಷಮೆ ಕೇಳುತ್ತಾರೆ ಎಂದು ಭಾವಿಸಿದ್ದೇನೆ. ನಾವು ಕ್ರಿಕೆಟ್‌ನಿಂದ ಒಂದಾಗಬೇಕು. ಆದರೆ ಕ್ರಿಕೆಟನ್ನೇ ಇಬ್ಬಾಗ ಮಾಡಬೇಡಿ ಎಂದು ಹರ್ಷಾ ಬೋಗ್ಲೇ ಹೇಳಿದ್ದಾರೆ.
You would think that cricketers, as ambassadors of our game, would be a little more responsible. I am sure there will be an apology on the way from Waqar. We need to unite the cricket world, not divide it by religion
— Harsha Bhogle (@bhogleharsha)ಪಾಕ್ ಗೆಲುವನ್ನು ಹೊಗಳಲೇಬೇಕು. ಪಾಕಿಸ್ತಾನ ಕ್ರಿಕೆಟಿಗರ ಸಾಧನೆ ಕುರಿತು ವಿವರಿಸಿ. ಆದರೆ ಈ ರೀತಿಯ ಹೇಳಿಕೆಯಲ್ಲ ಎಂದು ಬೋಗ್ಲೇ ಹೇಳಿದ್ದಾರೆ. ವಕಾರ್ ಯೂನಿಸ್ ಮಾತಿಗೆ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿದೆ.
I really hope that a lot of genuine sportslovers in Pakistan are able to see the dangerous side to this statement and join in my disappointment. It makes it very difficult for sportslovers like us to try and tell people it is just sport, just a cricket match.
— Harsha Bhogle (@bhogleharsha)