T20 World Cup 2021: ಸೋಲಿಲ್ಲದ ಸರದಾರನಾಗಿ ಸೆಮೀಸ್ ಪ್ರವೇಶಿಸಿದ ಪಾಕಿಸ್ತಾನ!

By Suvarna NewsFirst Published Nov 7, 2021, 11:00 PM IST
Highlights
  • T20 World Cup 2021 ಸೋಲಿಲ್ಲದ ಸರದಾರ ಪಾಕ್
  • ಸ್ಕಾಟ್‌ಲೆಂಡ್ ವಿರುದ್ಧ 72 ರನ್ ಗೆಲುವು
  • ಅಜೇಯ ಗೆಲುವಿನ ಓಟ ಮುಂದುವರಿಸಿದ ಪಾಕಿಸ್ತಾನ

ಶಾರ್ಜಾ(ನ.07):  T20 World Cup 2021 ಟೂರ್ನಿಯಲ್ಲಿ ಪಾಕಿಸ್ತಾನ(Pakistan) ತನ್ನ ಅಜೇಯ ಓಟ ಮುಂದುವರಿಸಿದೆ. ಸ್ಕಾಟ್‌ಲೆಂಡ್(Scotland) ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 72 ರನ್ ಗೆಲುವು ದಾಖಲಿಸಿದೆ. ಈ ಮೂಲಕ ಸೂಪರ್ 12 ಹಂತದಲ್ಲಿ ಆಡಿದ ಎಲ್ಲಾ ಪಂದ್ಯದಲ್ಲಿ ಗೆಲುವು ಸಾಧಿಸಿ ಸೋಲಿಲ್ಲದ ಸರದಾರನಾಗಿ ಸೆಮಿಫೈನಲ್ ಪ್ರವೇಶಿಸಿದೆ.

T20 World Cup; 2012ರ ಬಳಿಕ ಮೊದಲ ಬಾರಿಗೆ ICC ಟೂರ್ನಿಯಲ್ಲಿ ಲೀಗ್ ಹಂತದಿಂದ ಭಾರತ ಔಟ್!

ಮೊದಲು ಬ್ಯಾಟಿಂಗ್ ಪಾಕಿಸ್ತಾನ ಸ್ಫೋಟಕ ಪ್ರದರ್ಶನ ನೀಡಿತು. ಬಾಬರ್ ಅಜಮ್ 66 ರನ್ ಸಿಡಿಸಿದರೆ, ಅಂತಿಮ ಹಂತದಲ್ಲಿ ಶೋಯೆಬ್ ಮಲಿಕ್ ಕೇವಲ 18 ಎಸೆತದಲ್ಲಿ 54 ರನ್ ಸಿಡಿಸಿದರು. ಈ ಮೂಲಕ ಅತೀ ಕಡಿಮೆ ಎಸೆತದಲ್ಲಿ ಹಾಫ್ ಸೆಂಚುರಿ ಪೂರೈಸಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಪಾಕಿಸ್ತಾನ 4 ವಿಕೆಟ್ ನಷ್ಟಕ್ಕೆ 189 ರನ್ ಸಿಡಿಸಿತು. 

190 ರನ್ ಟಾರ್ಗೆಟ್ ಪಡೆದ ಸ್ಕಾಟ್‌ಲೆಂಡ್ ದಿಟ್ಟ ಹೋರಾಟ ನೀಡಿತು. ಆದರೆ ಬೃಹತ್ ಟಾರ್ಗೆಟ್ ಹಾಗೂ ಪಾಕಿಸ್ತಾನ ಅತ್ಯುತ್ತಮ ಬೌಲಿಂಗ್ ದಾಳಿ ಮುಂದೆ ರನ್ ಚೇಸ್ ಮಾಡಲು ಸಾಧ್ಯವಾಗಲಿಲ್ಲ.  ರಿಚೆ ಬೆರಿಂಗ್ಟನ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಆದರೆ ಇತರ ಬ್ಯಾಟ್ಸ್‌ಮನ್ ಬಹುಬೇಗನೆ ವಿಕೆಟ್ ಕೈಚೆಲ್ಲಿದರು. 

T20 World cup 2021: ಆಫ್ಘಾನ್ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು, ಸೆಮೀಸ್ ರೇಸ್‌ನಿಂದ ಭಾರತ ಔಟ್!

ಜಾರ್ಜ್ ಮುನ್ಸೆ 17 ರನ್ ಸಿಡಿಸಿ ನಿರ್ಗಮಿಸಿದರು. ನಾಯಕ ಕೈಲ್ ಕೊಯೆಟ್ಜರ್ 9 ರನ್ ಸಿಡಿಸಿ ಔಟಾದರು ಮಾಥ್ಯೂ ಕ್ರಾಸ್ 5 ರನ್ ಸಿಡಿಸಿ ನಿರ್ಗಮಿಸಿದರು. ಡೈಲನ್ ಬಡ್ಜ್ ಡಕೌಟ್ ಆದರು. ಮೆಚೆಲ್ ಲಿಸ್ಕ್ 14 ರನ್ ಸಿಡಿಸಿದರುರ ರೆಚೆ ಬೆರಿಂಗ್ಟನ್ ಏಕಾಂಗಿ ಹೋರಾಟ ನೀಡಿ ಅರ್ಧಶತಕ ಪೂರೈಸಿದರು.

ರಿಚೆ ಅಜೇಯ 54 ರನ್ ಸಿಡಿಸಿದರು. ಈ ಮೂಲಕ ಸ್ಕಾಟ್‌ಲೆಂಡ್ 6 ವಿಕೆಟ್ ಕಳೆದುಕೊಂಡು 117 ರನ್ ಸಿಡಿಸಿತು. 72 ರನ್ ಗಲುವು ದಾಖಲಿಸಿದ ಪಾಕಿಸ್ತಾನ 5 ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸಿತು. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದೆ ಸೆಮಿಫೈನಲ್ ಪ್ರವೇಶಿಸಿದ ಏಕೈಕ ತಂಡ ಅನ್ನೋ ದಾಖಲೆ ಬರೆಯಿತು.

ಈ ಪಂದ್ಯದಲ್ಲಿ ಪಾಕಿಸ್ತಾ ಬ್ಯಾಟ್ಸ್‌ಮನ್ ಶೊಯೆಬ್ ಮಲಿಕ್ ಕೆಲ ದಾಖಲೆ ಬರೆದಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಮಲಿಕ್ 18 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಪರ ಶೋಯೆಬ್ ಮಲಿಕ್ ಅತೀ ಕಡಿಮೆ ಎಸೆತದಲ್ಲಿ ಹಾಫ್ ಸೆಂಚುರಿ ಪೂರೈಸಿದ ದಾಖಲೆ ಬರೆದರು.

18 ಶೋಯೆಬ್ ಮಲಿಕ್ v ಸ್ಕಾಟ್ಲೆಂಡ್, 2021
21 ಉಮರ್ ಅಕ್ಮಲ್ v ಆಸ್ಟ್ರೇಲಿಯಾ, 2010
22 ಉಮರ್ ಅಕ್ಮಲ್ v ನ್ಯೂಜಿಲೆಂಡ್, 2016

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತೀ ವೇಗದ ಅರ್ಧಶತಕ
12 ಎಸೆತ, ಯುವರಾಜ್ ಸಿಂಗ್ v ಇಂಗ್ಲೆಂಡ್, 2007
17 ಸ್ಟೀಫನ್ ಮೈಬರ್ಗ್ v ಐರ್ಲೆಂಡ್, 2014
18 ಗ್ಲೆನ್ ಮ್ಯಾಕ್ಸ್‌ವೆಲ್  v ಪಾಕಿಸ್ತಾನ, 2014
18 ಕೆಎಲ್ ರಾಹುಲ್ v ಸ್ಕಾಟ್‌ಲೆಂಡ್, 2021
18 ಶೊಯೆಬ್ ಮಲಿಕ್ v ಸ್ಕಾಟ್‌ಲೆಂಡ್, 2021

ಸ್ಕಾಟ್ಲೆಂಡ್ ವಿರುದ್ಧ ಶೊಯೆಬ್ ಮಲಿಕ್(ಟಿ20 ಹೋರಾಟ)
11(13) ಡರ್ಬನ್, 2007
53(27) ಎಡಿನ್‌ಬರ್ಗ್, 2018
49*(22) ಎಡಿನ್‌ಬರ್ಗ್, 2018
54*(18) ಶಾರ್ಜಾ 2021

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಶೊಯೆಬ್ ಮಲಿಕ್ ಪಂದ್ಯಶ್ರೇಷ್ಟ ಪ್ರಶಸ್ತಿ ಸ್ವೀಕರಿಸಿದರು. ಮಲಿಕ್ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 1 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ಒಳಗೊಂಡಿತ್ತು,

click me!