T20 World Cup; 2012ರ ಬಳಿಕ ಮೊದಲ ಬಾರಿಗೆ ICC ಟೂರ್ನಿಯಲ್ಲಿ ಲೀಗ್ ಹಂತದಿಂದ ಭಾರತ ಔಟ್!

By Suvarna NewsFirst Published Nov 7, 2021, 9:18 PM IST
Highlights
  • T20 World Cup 2021 ಟೂರ್ನಿಂದ ಹೊರಬಿದ್ದ ಟೀಂ ಇಂಡಿಯಾ
  • ಭಾರತಕ್ಕೆ ಆಘಾತ ನೀಡಿದ ಆರಂಭಿಕ 2 ಪಂದ್ಯದ ಸೋಲು
  • 2012ರ ಬಳಿಕ ಮೊದಲ ಬಾರಿ ICC ಟೂರ್ನಿಯಲ್ಲಿ ನಾಕೌಟ್ ಪ್ರವೇಶಿಸಿದ ಭಾರತ
  • 2013ರ ಬಳಿಕ ಭಾರತ ಗೆದ್ದಿಲ್ಲ ಐಸಿಸಿ ಟ್ರೋಫಿ

ದುಬೈ(ನ.07):  T20 World Cup 2021 ಟೂರ್ನಿಯಲ್ಲಿ ಟೀಂ ಇಂಡಿಯಾ(Team India) ಗೆಲುವಿನ ಹಳಿ ಬಂದು ಅಬ್ಬರಿಸಲು ಆರಂಭಿಸಿದಾಗಲೇ ಟೂರ್ನಿಯಿಂದಲೇ ಹೊರಬಿದ್ದಿದೆ. ಇದಕ್ಕೆ ಕಾರಣ ಆರಂಭಿಕ ಎರಡು ಪಂದ್ಯದ ಸೋಲು. ಹೀಗಾಗಿ ಇತರ ತಂಡದ ಫಲಿತಾಂಶದ ಮೇಲೆ ಟೀಂ ಇಂಡಿಯಾ ಅವಲಂಬಿತವಾಗಿತ್ತು. ಆದರೆ ಆಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ ಗೆಲುವಿನ ಮೂಲಕ ಟೀಂ ಇಂಡಿಯಾ ಹೊರಬಿದ್ದಿದೆ. 2012ರ ಬಳಿಕ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಕೌಟ್ ಹಂತ ಪ್ರವೇಶಿಸದೇ ಹೊರಬಿದ್ದ ಅಪಖ್ಯಾತಿಗೆ ಗುರಿಯಾಗಿದೆ.

ಆಫ್ಘಾನಿಸ್ತಾನ(Afghanistan) ಹಾಗೂ ನ್ಯೂಜಿಲೆಂಡ್(New zealand) ನಡುವಿನ ಪಂದ್ಯದ ಮೇಲೆ ಟೀಂ ಇಂಡಿಯಾ ಭವಿಷ್ಯ ನಿಂತಿತ್ತು. ಈ ಪಂದ್ಯದಲ್ಲಿ ಆಫ್ಘಾನಿಸ್ತಾನ ಮುಗ್ಗರಿಸಿತು. 8 ವಿಕೆಟ್ ಗೆಲುವು ದಾಖಲಿಸಿದ ನ್ಯೂಜಿಲೆಂಡ್ ಸೆಮಿಫೈನಲ್(Semifinal) ಪ್ರವೇಶಿಸಿತು. ಆದರೆ ನ್ಯೂಜಿಲೆಂಡ್ ಗೆಲುವಿನೊಂದಿಗೆ ಭಾರತದ ಸೆಮಿಫೈನಲ್ ಪ್ರವೇಶದ ಕೊನೆಯ ಆಸೆಯೊಂದು ನುಚ್ಚು ನೂರಾಯಿತು.

T20 World cup 2021: ಆಫ್ಘಾನ್ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು, ಸೆಮೀಸ್ ರೇಸ್‌ನಿಂದ ಭಾರತ ಔಟ್!

ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಟೆಸ್ಟ್ ಚಾಂಪಿಯನ್‌ಶಿಪ್ ಸೇರಿದಂತೆ ಐಸಿಸಿ ಟೂರ್ನಿಗಳಲ್ಲಿ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿದಿದೆ. ಪ್ರತಿ ಭಾರಿ ದಿಟ್ಟ ಹೋರಾಟ ನೀಡಿ ನಾಕೌಟ್ ಹಂತ ಪ್ರವೇಶಿಸಿದೆ. ಆದರೆ ಈ ಬಾರಿ ಲೀಗ್ ಹಂತದಿಂದಲೇ ಹೊರಬಿದ್ದಿದೆ.

2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ ಇನ್ನುಳಿದ ಟಿ20 ಪಂದ್ಯಗಳಲ್ಲಿ ಫೈನಲ್ ಹಾಗೂ ಸೆಮಿಫೈನಲ್ ಪ್ರವೇಶಿಸಿದೆ. 2014ರ ವಿಶ್ವಕಪ್ ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ನಾಕೌಟ್ ಹಂತ ಪ್ರವೇಶಿಸಿದೆ. 20216ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿದೆ. 

T20 World Cup 2021: ಇಂಗ್ಲೆಂಡ್ ಮಣಿಸಿದರೂ ಟೂರ್ನಿಯಿಂದ ಹೊರಬಿದ್ದ ಸೌತ್ ಆಫ್ರಿಕಾ!

2013ರಲ್ಲಿ ಧೋನಿ ನಾಯಕತ್ವದ ಟೀಂ ಇಂಡಿಯಾ ಗೆದ್ದ ಚಾಂಪಿಯನ್ಸ್ ಟ್ರೋಫಿ ಟೀಂ ಇಂಡಿಯಾ ಗೆದ್ದ ಕೊನೆಯ ಐಸಿಸಿ ಟ್ರೋಫಿ. ಬಳಿಕ ನಡೆದ ಎಲ್ಲಾ ಐಸಿಸಿ ಟೂರ್ನಿಗಳಲ್ಲಿ ಭಾರತ ನಿರಾಸೆ ಅನುಭವಿಸಿದ್ದೇ ಹೆಚ್ಚು. ಈ ಬಾರಿ ಸೂಪರ್ 12 ಹಂತದಿಂದ ಹೊರಬೀಳುವ ಮೂಲಕ ನಿರಾಸೆ ಮತ್ತಷ್ಟು ಹೆಚ್ಚಾಗಿದೆ.

ಲೀಗ್ ಹಂತದಿಂದ ಹೊರಬೀಳುತ್ತಿರುವುದು ಇದೇ ಮೊದಲಲ್ಲ. ಆದರೆ ಟೀಂ ಇಂಡಿಯಾ ಹಿಂದೆಂದಿಗಿಂತಲೂ ಅತ್ಯಂತ ಬಲಿಷ್ಠವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ವಿಶ್ವದ ಬೆಸ್ಟ್ ಕ್ಲಾಸ್ ಆಟಗಾರರನ್ನು ಹೊಂದಿದೆ. ಹೀಗಾಗಿ ಈ ಬಾರಿಯ ನಿರ್ಗಮನ ಟೀಂ ಇಂಡಿಯಾ ಅಭಿಮಾನಿಗಳಿಗೆ ಮತ್ತಷ್ಟು ಆಘಾತ ನೀಡಿದೆ.

ಪಾಕಿಸ್ತಾನ ವಿರುದ್ಧ 10 ವಿಕೆಟ್ ಸೋಲು ಕಂಡ ಬೆನ್ನಲ್ಲೇ ನ್ಯೂಜಿಲೆಂಡ್ ವಿರುದ್ಧವೂ ಭಾರತ ಮುಗ್ಗರಿಸಿತ್ತು. ಈ ಎರಡು ಪಂದ್ಯದ ಸೋಲು ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಅಂತ್ಯಗೊಳಿಸಿತ್ತು. ಇನ್ನು ಸ್ಕಾಟ್‌ಲೆಂಡ್ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಬೇಕಿತ್ತು. ಸ್ಕಾಟ್‌ಲೆಂಡ್ ತಂಡವನ್ನು 85 ರನ್‌ಗೆ ಕಟ್ಟಿಹಾಕಿ 6.3 ಓವರ್‌ಗಳಲ್ಲಿ ಟೀಂ ಇಂಡಿಯಾ ಚೇಸ್ ಮಾಡಿತ್ತು. ಇದು ಟಿ20 ಯಲ್ಲಿ ದಾಖಲಾದ ಅತೀ ದೊಡ್ಡ ಗೆಲುವಾಗಿದೆ(ಬಾಲ್). 

ಆರಂಭಿಕ ಎರಡು ಸೋಲಿನಿಂದ ಚೇತರಿಸಿಕೊಂಡು ಅಬ್ಬರಿಸಲು ಆರಂಭಿಸಿದ ಭಾರತ ಇದೀಗ ನಮಿಬಿಯಾ ವಿರುದ್ಧ ಸೂಪರ್ 12 ಹಂತದ ಅಂತಿಮ ಪಂದ್ಯ ಆಡಲಿದೆ. ಆದರೆ ಎರಡೂ ತಂಡಗಳು ಟೂರ್ನಿಯಿಂದ ಹೊರಬಿದ್ದ ಕಾರಣ ಈ ಪಂದ್ಯದ ಫಲಿತಾಂಶ ಯಾವ ಬದಲಾವಣೆಯನ್ನು ಮಾಡುವುದಿಲ್ಲ.

ಎರಡನೇ ಗುಂಪಿನಿಂದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ. ಮೊದಲ ಗುಂಪಿನಿಂದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶಿಸಿದೆ. ಈ ಬಾರಿ ಪಾಕಿಸ್ತಾನ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. 
 

click me!