T20 World Cup 2021: ಐರ್ಲೆಂಡ್ ಮಣಿಸಿ ಸೂಪರ್ 12ಗೆ ಅರ್ಹತೆ ಪಡೆದ ನಮಿಬಿಯಾ!

By Suvarna NewsFirst Published Oct 22, 2021, 8:29 PM IST
Highlights
  • ಐರ್ಲೆಂಡ್ ವಿರುದ್ಧ ನಮಿಬಿಯಾಗೆ 8 ವಿಕೆಟ್ ಗೆಲುವು
  • ಸೂಪರ್ 12 ಹಂತಕ್ಕೆ ಅರ್ಹತೆ ಪಡೆದ ನಮಿಬಿಯಾ
  • ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಸೇರಿದಂತೆ ಎ ಗುಂಪಿನಲ್ಲಿ ನಮಿಬಿಯಾ

ಶಾರ್ಜಾ(ಅ.22): T20 World Cup 2021 ಟೂರ್ನಿಯ ಎ ಗುಂಪಿಗೆ ಇದೀಗ ನಮಿಬಿಯಾ ತಂಡ ಸೇರಿಕೊಂಡಿದೆ. ಭಾರತ(India), ಪಾಕಿಸ್ತಾನ(Pakistan), ನ್ಯೂಜಿಲೆಂಡ್, ಆಫ್ಘಾನಿಸ್ತಾನ, ಸ್ಕಾಟ್‌ಲೆಂಡ್ ತಂಡಗಳ ಗುಂಪಿಗೆ ಇದೀಗ ನಮಿಬಿಯಾ ಸೇರಿಕೊಂಡಿದೆ. ಅರ್ಹತಾ ಸುತ್ತಿನಲ್ಲಿ ಐರ್ಲೆಂಡ್ ವಿರುದ್ಧ 8 ವಿಕೆಟ್ ಗೆಲುವು ದಾಖಲಿಸಿದ ನಮಿಬಿಯಾ  ಈ ಸಾಧನೆ ಮಾಡಿದೆ.

T20 World Cup 2021:ಹರಿದಾಡುತ್ತಿದೆ ಇಂಡೋ ಪಾಕ್ ಪಂದ್ಯದ ವೈರಲ್ ಮೆಮ್ಸ್!

ಸೂಪರ್ 12 ಹಂತದ ಪ್ರವೇಶಕ್ಕಾಗಿ ನಡೆದ ಮಹತ್ವದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ನಮಿಬಿಯಾ 8 ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 8 ವಿಕೆಟ್ ನಷ್ಟಕ್ಕೆ 125 ರನ್ ಸಿಡಿಸಿತು. ಜಾನ್ ಫ್ರಾಂಕ್ಲಿಕ್ ದಾಳಿಗೆ ತತ್ತರಿಸಿದ ಐರ್ಲೆಂಡ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಯಿತು.

ಐರ್ಲೆಡ್ ಪರ ಸ್ಟಿರ್ಲಿಂಗ್ ಹಾಗೂ ಕೆವಿನ್ ಒಬ್ರಿಯಾನ್ ಉತ್ತಮ ಆರಂಭ ನೀಡಿದರು. ಆದರೆ ಒಬ್ರಿಯಾನ್ 25 ರನ್ ಸಿಡಿಸಿ ಔಟಾಗುವ ಮೂಲಕ ಇವರ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು. ಮೊದಲ ವಿಕೆಟ್‌ಗೆ ಈ ಜೋಡಿ 62 ರನ್ ಜೊತೆಯಾಟ ನೀಡಿತು. ನಾಯಕ ಬಾಲ್‍‌ಬ್ರೈನಿ 21 ರನ್ ಕಾಣಿಕೆ ನೀಡಿದರು.

T20 World Cup: ಟೀಂ ಇಂಡಿಯಾ ವಿಶ್ವಕಪ್‌ ಟ್ರೋಫಿ ಗೆಲ್ಲುವ ಫೇವರಿಟ್ ಎಂದ ಆಸೀಸ್‌ ಕ್ರಿಕೆಟಿಗ..!

ಸ್ಟ್ರಿಲ್ಲಿಂಗ್ 38 ರನ್ ಸಿಡಿಸಿ ಔಟಾದರು. ಐರ್ಲೆಂಡ್ ತಂಡದ ಇತರ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಹೋರಾಟ ಸಾಧ್ಯವಾಗಲಿಲ್ಲ. ಹೀಗಾಗಿ ಐರ್ಲೆಂಡ್ 8 ವಿಕೆಟ್ ಕಳೆದುಕೊಂಡು 125 ರನ್ ಸಿಡಿಸಿತು. ದೊಡ್ಡ ಮೊತ್ತ ನಿರೀಕ್ಷಿಸಿದ್ದ ಐರ್ಲೆಂಡ್ ಬ್ಯಾಟಿಂಗ್ ವೈಫಲ್ಯದಿಂದ ನಮಿಬಿಯಾಗೆ ಸುಲಭ ಟಾರ್ಗೆಟ್ ನೀಡಿತು.

ಟಾರ್ಗೆಟ್ ಅಲ್ಪವಾಗಿದ್ದರೂ ನಮಿಬಿಯಾ ಉತ್ತಮ ಆರಂಭ ಪಡೆಯಲಿಲ್ಲ. ಕ್ರೈಗ್ ವಿಲಿಯಮ್ಸ್ ಕೇವಲ 15 ರನ್ ಸಿಡಿಸಿ ಔಟಾದರು. ಜೇನ್ ಗ್ರೀನ್ 24 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ನಮಿಬಿಯಾ ಗೆಲುವಿನ ಹಾದಿಯಲ್ಲಿ ಸಾಗಿತ್ತು. ನಾಯಕ ಗೆರ್ಹಾರ್ಡ್ ಹಾಗೂ ಡೇವಿಡ್ ವೀಸೆ ಹೋರಾಟದಿಂದ ನಮಿಬಿಯಾ ಸುಲಭವಾಗಿ ಗೆಲುವಿನ ನಗೆ ಬೀರಿತು.

T20 World Cup ಇಂಡೋ-ಪಾಕ್‌ ಪಂದ್ಯದ ಜಾಹೀರಾತು: 10 ಸೆಕೆಂಡ್‌ಗೆ 30 ಲಕ್ಷ ರೂ..!

ಗೆರ್ಹಾರ್ಡ್ ದಿಟ್ಟ ಹೋರಾಟದ ಮೂಲಕ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ಡೇವಿಡ್ ವೀಸೆ ಉತ್ತಮ ಸಾಥ್ ನೀಡಿದರು. ಗೆರ್ಹಾರ್ಡ್ ಅಜೇಯ 53 ರನ್ ಸಿಡಿಸಿದರು. ಇತ್ತ ಡೇವಿಡ್ ವೈಸೆ ಅಜೇಯ 28 ರನ್ ಸಿಡಿಸಿದರು. ಈ ಮೂಲಕ ನಮಿಬಿಯಾ 18.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು. ಈ ಮೂಲಕ ಸೂಪರ್ 12 ಹಂತಕ್ಕೆ ಅರ್ಹತೆ ಪಡೆಯಿತು.

ಸೂಪರ್ 12 ಗೆ ನಡೆದ ಅರ್ಹತಾ ಸುತ್ತಿನಲ್ಲಿ ನಮಿಬಿಯಾ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮುಗ್ಗರಿಸಿತ್ತು. ಆದರೆ ಆರಂಭಿಕ ಹಿನ್ನಡೆಯಿಂದ ಕುಗ್ಗದ ನಮಿಬಿಯಾ ತಂಡ ನೆದರ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಕಂಡಿತ್ತು. ನಮಿಬಿಯಾ ಇದೀಗ ಐರ್ಲೆಂಡ್ ವಿರುದ್ಧ 8 ವಿಕೆಟ್ ಗೆಲುವಿನೊಂದಿಗೆ ಸೂಪರ್ 12 ಹಂತಕ್ಕೆ ಪ್ರವೇಶಿಸಿದೆ.

click me!