ದುಬೈ(ಅ.23): T20 World Cup 2021 ಟೂರ್ನಿ ಅತ್ಯಂತ ಮಹತ್ವದ ಹಾಗೂ ಬಹುನಿರೀಕ್ಷಿತ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ(India vs Pakistan) ಸೆಣಸಾಟಕ್ಕೆ ರೆಡಿಯಾಗಿದೆ. ಈಗಾಗಲೇ ಪಾಕಿಸ್ತಾನ 12 ಸದಸ್ಯರ ತಂಡ ಪ್ರಕಟಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ನಾಯಕ ಬಾಬರ್ ಅಜಮ್(Babar Azam), ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ. ಇದೀಗ ಅಭಿಮಾನಿಗಳ ನಡುವೆ ಜಟಾಪಟಿಗೆ ಕಾರಣವಾಗಿದೆ.
T20 World Cup: ಭಾರತ ವಿರುದ್ದದ ಪಂದ್ಯಕ್ಕೆ 12 ಆಟಗಾರರನ್ನೊಳಗೊಂಡ ಪಾಕಿಸ್ತಾನ ತಂಡ ಪ್ರಕಟ
undefined
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕೌಂಟ್‌ಡೌನ್ ಆರಂಭಗೊಂಡಿದೆ. ಅಕ್ಟೋಬರ್ 24 ರಂದು ಉಭಯ ತಂಡಗಳು ಮುಖಾಮುಖಿಯಾಗುತ್ತಿದೆ. ಇದರ ಬೆನ್ನಲ್ಲೇ ಬಾಬರ್ ಅಜಮ್, ಈ ಬಾರಿ ಪಾಕಿಸ್ತಾನ ಗೆಲುವು ಖಚಿತ. ಕಾರಣ ಪಾಕಿಸ್ತಾನ ಬಲಿಷ್ಠ ಬೌಲಿಂಗ್ ಅಸ್ತ್ರ ಹೊಂದಿದೆ. ಅನುಭವಿ ಆಟಗಾರರನ್ನು ಹೊಂದಿರುವ ಪಾಕಿಸ್ತಾನ, ಟೀಂ ಇಂಡಿಯಾ ಬ್ಯಾಟಿಂಗ್(Team India) ಧೂಳೀಪಟ ಮಾಡಲಿದೆ ಎಂದು ಬಾಬರ್ ಹೇಳಿದ್ದಾರೆ.
T20 World Cup 2021:ಹರಿದಾಡುತ್ತಿದೆ ಇಂಡೋ ಪಾಕ್ ಪಂದ್ಯದ ವೈರಲ್ ಮೆಮ್ಸ್!
ಪ್ರತಿ ತಂಡಕ್ಕೆ ಅವರದ್ದೆ ಆದ ಶಕ್ತಿ ಇದೆ. ಪಾಕಿಸ್ತಾನ ತಂಡ ಸಮತೋಲನದಿಂದ ಕೂಡಿದೆ. ಜೊತೆಗೆ ಬೌಲಿಂಗ್‌ನಲ್ಲಿ ಅತ್ಯಂತ ಬಲಿಷ್ಠ ತಂಡವಾಗಿದೆ. ಮಾರಕ ದಾಳಿ ನಡೆಸಬಲ್ಲ ಬೌಲರ್ ಪಾಕ್ ತಂಡದಲ್ಲಿದ್ದಾರೆ. ಹೀಗಾಗಿ ಎದುರಾಳಿ ಪಡೆಯ ಬ್ಯಾಟ್ಸ್‌ಮನ್ ಲೆಕ್ಕಾಚಾರ ಉಲ್ಟಾ ಆಗಲಿದೆ. 2016ರ ಚಾಂಪಿಯನ್ ಟ್ರೋಫಿ ಟೂರ್ನಿಗಿಂತಲೂ ಬಲಿಷ್ಠವಾಗಿದೆ ಎಂದು ಬಾಬರ್ ಅಜಮ್ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್ ಟೂರ್ನಿ ಆಡಬಲ್ಲ ಅನುಭವಿಗಳಿದ್ದಾರೆ. ಹೀಗಾಗಿ ಒತ್ತಡ ಪಾಕಿಸ್ತಾನ ತಂಡಕ್ಕಿಲ್ಲ. ಭಾರತದ ಮೇಲಿದೆ ಎಂದು ಬಾಬರ್ ಹೇಳಿದ್ದಾರೆ. ಹಿಂದಿನ ದಾಖಲೆಗಳು ಭಾರತದ ಪರವಾಗಿರಬಹುದು. ಆದರೆ ಈ ಬಾರಿ ಪಾಕಿಸ್ತಾನ ಇತಿಹಾಸ ರಚಿಸಲಿದೆ ಎಂದು ಬಾಬರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
T20 World Cup ಇಂಡೋ-ಪಾಕ್ ಪಂದ್ಯದ ಜಾಹೀರಾತು: 10 ಸೆಕೆಂಡ್‌ಗೆ 30 ಲಕ್ಷ ರೂ..!
ಭಾರತ ತಂಡವನ್ನು ಮಣಿಸಲು ಸಜ್ಜಾಗಿದ್ದೇವೆ. ಟಿ20 ವಿಶ್ವಕಪ್ ಟೂರ್ನಿಗಾಗಿ ತೆರಳುವ ಮುನ್ನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. 1992ರ ವಿಶ್ವಕಪ್ ಟೂರ್ನಿಯಿಂದ ಸ್ಪೂರ್ತಿ ಪಡೆದು ಹೋರಾಟ ನೀಡಬೇಕು. 1992ರಂತೆ ವಿಶ್ವಕಪ್ ಟ್ರೋಫಿ ಗೆಲ್ಲಬೇಕು ಎಂದು ಇಮ್ರಾನ್ ಹೇಳಿದ್ದಾರೆ. ಇತರ ಯಾವುದೇ ಸಂದೇಶ ನೀಡಿಲ್ಲ ಎಂದು ಬಾಬರ್ ಹೇಳಿದ್ದಾರೆ.
Pakistan open T20 World Cup campaign on Sunday
More details ➡️ https://t.co/jNJ0nfEIOg |
ನಮ್ಮನೆ ಚಾಕುವಿಗೆ ವೀರೂ ಎಂದು ಹೆಸರಿಟ್ಟಿದ್ದೇನೆ: ಡೇಲ್ ಸ್ಟೇನ್
ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ಉತ್ತಮ ಹೋರಾಟ ನೀಡಿದೆ. ಪಾಕಿಸ್ತಾನ ತಂಡ ಆತ್ಮವಿಶ್ವಾಸದಲ್ಲಿದೆ. ಇದು ಮಹತ್ವದ ಪಂದ್ಯ. ಯಾವ ಕ್ಷಣದಲ್ಲೂ ವಿಶ್ರಾಂತಿ ಪಡೆಯುವಂತಿಲ್ಲ. ಭಾರತ ವಿರುದ್ಧದ ಪಂದ್ಯಕ್ಕಾಗಿ ಪಾಕಿಸ್ತಾನ ತಂಡ ಅಭ್ಯಾಸ ನಡೆಸಿದೆ. ಮಾನಸಿಕವಾಗಿ ಸಿದ್ಧರಾಗಿದ್ದೇವೆ. ಹೀಗಾಗಿ ಗೆಲುವು ಖಚಿತ ಎಂದು ಬಾಬರ್ ಹೇಳಿದ್ದಾರೆ.