ಒಬ್ಬರ ನಂತರ ಮತ್ತೊಬ್ಬರು ರಿಟೈರ್ಡ್​ ಆಗ್ತಿರೋದ್ಯಾಕೆ..?

By Naveen KodaseFirst Published Aug 13, 2022, 4:14 PM IST
Highlights

ಟಿ20 ಲೀಗ್ ಹಾವಳಿಯಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕುತ್ತು?
ಟಿ20 ಲೀಗ್‌ನಿಂದಾಗಿ ಹಲವು ಕ್ರಿಕೆಟಿಗರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ
ಫ್ರಾಂಚೈಸಿ ಲೀಗ್​​ ಕಡೆ ಕ್ರಿಕೆಟರ್ಸ್ ಒಲವು

ಬೆಂಗಳೂರು(ಆ.13): ಟಿ20 ಬಂದ್ಮೇಲೆ ಒನ್​ಡೇ ಕ್ರಿಕೆಟ್ ಸಪ್ಪೆಯಾಗ್ತಿದೆ ಅಂತ ದಶಕಗಳಿಂದಲೂ ಹೇಳಲಾಗ್ತಿದೆ. ಏಕದಿನ ಕ್ರಿಕೆಟ್ ಮಾದರಿ ಸಂಧ್ಯಾಕಾಲದಲ್ಲಿದೆ ಅಂತ ಇತ್ತೀಚೆಗೆ ಕ್ರಿಕೆಟ್ ಪಂಡಿತರೇ ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದೆರಡು ವರ್ಷ ಹೋದ್ಮೇಲೆ ಒನ್​​ಡೇ ಜೊತೆ ಇಡೀ ಇಂಟರ್​ನ್ಯಾಷನಲ್ ಕ್ರಿಕೆಟ್ ಕೊನೆಗಾಲದಲ್ಲಿದೆ ಅಂತ ಹೇಳಿಕೆ ಕೊಟ್ಟರೂ ಆಶ್ಚರ್ಯವಿಲ್ಲ ಬಿಡಿ. ಯಾಕಂದ್ರೆ ನಾಯಿಕೊಡೆಗಳಂತೆ ಫ್ರಾಂಚೈಸಿ ಲೀಗ್​ಗಳು ಆರಂಭವಾಗ್ತಿದ್ದು, ಇಂಟರ್​ ನ್ಯಾಷನಲ್ ಕ್ರಿಕೆಟ್ ಆಡಲು ಕ್ಯಾಲಿಟಿ ಪ್ಲೇಯರ್​ಗಳೇ ಇಲ್ಲದಂತಾಗ್ತಿದೆ.

ಕಿವೀಸ್ ಗುತ್ತಿಗೆಯಿಂದ ಹೊರಬಂದ ಬೋಲ್ಟ್: 

ಟೆಸ್ಟ್ ಕ್ರಿಕೆಟ್​ ಕಡೆ ಫೋಕಸ್ ಮಾಡಲು ಒನ್​ಡೇ ಕ್ರಿಕೆಟ್​ಗೆ ನಿವೃತ್ತಿ ಘೋಷಿಸ್ತಿದ್ದೀನಿ ಅಂತ ಇಂಗ್ಲೆಂಡ್ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಹೇಳಿಕೆ ನೀಡಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದರು. ಈಗ ವೇಗದ ಬೌಲರ್ ಟ್ರೆಂಟ್ ಬೋಲ್ಟ್‌ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ನೀಡಿದ್ದ ಒಪ್ಪಂದ ತಿರಸ್ಕರಿಸಿದ್ದು, ತಂಡಕ್ಕೆ ಆಯ್ಕೆಯಾಗುವುದು ಅನುಮಾನವಾಗಿದೆ. ಬೌಲ್ಡ್ ಒಪ್ಪಂದಕ್ಕೆ ಸಹಿ ಹಾಕಿದರೆ, ನ್ಯೂಜಿಲೆಂಡ್ ಮಂಡಳಿ ಅನುಮತಿಯಿಲ್ಲದೆ ಫ್ರಾಂಚೈಸಿ ಟಿ20 ಲೀಗ್‌ಗಳನ್ನಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಫ್ರಾಂಚೈಸಿ ಲೀಗ್​​ ಕಡೆ ಕ್ರಿಕೆಟರ್ಸ್ ಒಲವು: 

ಐಪಿಎಲ್ ಆರಂಭವಾಗಿ, ಸಕ್ಸಸ್ ಆಗಿದ್ದೇ ಬಂತು. ಎಲ್ಲಾ ಕ್ರಿಕೆಟರ್ಸ್​ ಹಣ ಹೊಳೆ ಹರಿಸೋ ಫ್ರಾಂಚೈಸಿ ಲೀಗ್ ಹಿಂದೆ ಬಿದ್ದಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟರ್ಸ್ ತಮ್ಮ ದೇಶಕ್ಕಾಗಿ ಆಡೋದಕ್ಕಿಂತ ಬೇರೆ ಬೇರೆ  ಫ್ರಾಂಚೈಸಿ ಲೀಗ್​ಗಳಲ್ಲಿ ಆಡೋದೇ ಜಾಸ್ತಿ. ಸದ್ಯ ಕ್ರಿಕೆಟ್ ಜಗತ್ತಿನಲ್ಲಿ 10ಕ್ಕೂ ಹೆಚ್ಚು ಫ್ರಾಂಚೈಸಿ ಲೀಗ್​ಗಳು ಆರಂಭವಾಗಿದೆ. ಅಲ್ಲಿಗೆ ವರ್ಷ ಪೂರ್ತಿ ಒಂದಲ್ಲ ಒಂದು ಟಿ20 ಲೀಗ್ ನಡೆಯುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಆಟಗಾರರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದಿದ್ದರೂ ತಲೆ ಕೆಡಿಸಿಕೊಳ್ತಿಲ್ಲ.

ನ್ಯೂಜಿಲೆಂಡ್‌ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಹೊರಗುಳಿದ ಮಾರಕ ವೇಗಿ ಟ್ರೆಂಟ್‌ ಬೌಲ್ಟ್‌..!

ವಿದೇಶಿ ಲೀಗ್​​ಗಳಲ್ಲೂ ಹರಿಯುತ್ತಿದೆ ಹಣದ ಹೊಳೆ: 

ಇಷ್ಟು ವರ್ಷ ಐಪಿಎಲ್ ಬಿಟ್ಟರೆ ಉಳಿದ ಲೀಗ್​ಗಳಲ್ಲಿ ಅಷ್ಟೊಂದು ಹಣ ಸಿಗ್ತಿರಲಿಲ್ಲ. ಆದ್ರೆ ಸಿಪಿಎಲ್, ಯುಎಇ ಮತ್ತು ಸೌತ್ ಆಫ್ರಿಕಾ ಲೀಗ್​ಗಳ ತಂಡಗಳನ್ನ ಐಪಿಎಲ್ ತಂಡಗಳ ಫ್ರಾಂಚೈಸಿಗಳೇ ಖರೀದಿಸಿದ್ದಾರೆ. ಐಪಿಎಲ್​ನಂತೆ ಈ ಲೀಗ್​ಗಳನ್ನೂ ಸಕ್ಸಸ್ ಮಾಡಲು ಫ್ರಾಂಚೈಸಿಗಳು ಹಣದ ಹೊಣೆಯನ್ನೇ ಹರಿಸ್ತಿದ್ದಾರೆ. ಕ್ರಿಕೆಟರ್ಸ್​ಗೂ ಕೋಟಿಗಟ್ಟಲೆ ಹಣ ಸಿಗ್ತಿದೆ. ಹಾಗಾಗಿಯೇ ಸ್ಟಾರ್ ಪ್ಲೇಯರ್ಸ್​ ರಾಷ್ಟ್ರೀಯ ತಂಡಗಳನ್ನ ಬಿಟ್ಟು ಫ್ರಾಂಚೈಸಿ ಲೀಗ್​ಗಳತ್ತ ಮುಖ ಮಾಡಿರೋದು. ಐದು ವರ್ಷ ರಾಷ್ಟ್ರೀಯ ತಂಡದಲ್ಲಿ ಆಡಿ ಗಳಿಸುವ ಹಣವನ್ನ ಜಸ್ಟ್ ಒಂದೇ ವರ್ಷದಲ್ಲಿ ಎಲ್ಲಾ ಫ್ರಾಂಚೈಸಿ ಲೀಗ್​ಗಳನ್ನಾಡಿ ಗಳಿಸಬಹುದು.

click me!