ಜಿಂಬಾಬ್ವೆ ಪ್ರವಾಸದಲ್ಲಿ ಕೆ ಎಲ್ ರಾಹುಲ್ ಯಾವ ಕ್ರಮಾಂಕದಲ್ಲಿ ಆಡ್ತಾರೆ..?

By Suvarna NewsFirst Published Aug 13, 2022, 3:56 PM IST
Highlights

ಜಿಂಬಾಬ್ವೆ ಪ್ರವಾಸಕ್ಕೆ ಸಜ್ಜಾದ ಟೀಂ ಇಂಡಿಯಾ
ನಾಯಕನಾಗಿ ಟೀಂ ಇಂಡಿಯಾ ಮುನ್ನಡೆಸಲಿರುವ ಕೆ ಎಲ್ ರಾಹುಲ್
ಕೆ ಎಲ್ ರಾಹುಲ್‌ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಜೋರಾಯ್ತು ಕುತೂಹಲ

ಬೆಂಗಳೂರು(ಆ.13): ಕಳೆದ ಎರಡು ತಿಂಗಳಿಂದ ಗಾಯ ಅನ್ನೋ ಭೂತ ಕಾಡಿದ್ದರಿಂದ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ದೂರ ಉಳಿದಿದ್ದ ಕನ್ನಡಿಗ ಕೆಎಲ್ ರಾಹುಲ್​ಗೆ ದೈವಬಲ ಸಿಕ್ಕಿದೆ. ಚಿಕ್ಕಬಳ್ಳಾಪುರ ಬಳಿ ಇರುವ ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಏಷ್ಯಾಕಪ್​ಗೆ ಸೆಲೆಕ್ಟ್ ಆಗಿದ್ದರು. ಜಿಂಬಾಬ್ವೆ ಸರಣಿಯಿಂದ ಡ್ರಾಪ್ ಆಗಿದ್ದ ಇದೇ ರಾಹುಲ್, ಈಗ ಅದೇ ಜಿಂಬಾಬ್ವೆಗೆ ನಾಯಕರಾಗಿ ಹೋಗ್ತಿದ್ದಾರೆ. ಭಾರತ ಒನ್​ಡೇ ಟೀಂ ಅನ್ನ ಕನ್ನಡಿಗ ಲೀಡ್ ಮಾಡ್ತಿದ್ದಾರೆ. ಎಲ್ಲಾ ದೈವಬಲ.

ಈಗ ವಿಷ್ಯ ಅದಲ್ಲ. ಜಿಂಬಾಬ್ವೆಯಲ್ಲಿ ಕನ್ನಡಿಗ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ್ತಾರೆ ಅನ್ನೋ ಪ್ರಶ್ನೆ ಎದ್ದಿದೆ. ಟೆಸ್ಟ್ ಮತ್ತು ಟಿ20ಯಲ್ಲಿ ಖಾಯಂ ಓಪನರ್ ಆಗಿರುವ ರಾಹುಲ್​ಗೆ ಒನ್​ಡೇಯಲ್ಲಿ ಮಾತ್ರ ಇಂತದ್ದೇ ಕ್ರಮಾಂಕ ಅಂತ ಫಿಕ್ಸ್ ಇಲ್ಲ. ಅವರ ಕೆರಿಯರ್​ನಲ್ಲಿ ಆಡಿರೋ 41 ಒನ್​ಡೇ ಇನ್ನಿಂಗ್ಸ್​ಗಳನ್ನ 1ರಿಂದ 6ನೇ ಕ್ರಮಾಂಕದವರೆಗೂ ಆಡಿದ್ದಾರೆ.  ಅತಿಹೆಚ್ಚು ಇನ್ನಿಂಗ್ಸ್ ಆಡಿರೋದು ಓಪನರ್ ಆಗಿ. ಸೆಕೆಂಡ್ ಹೈಯಸ್ಟ್ ಆಡಿರೋದು ನಂಬರ್ 5 ಸ್ಲಾಟ್​ನಲ್ಲಿ.

ಒನ್​ಡೇಯಲ್ಲಿ ನಂ. 5 ಸ್ಲಾಟ್​ಗೆ ಫಿಕ್ಸ್ ಆಗ್ತಾರಾ ರಾಹುಲ್..?: 

ರೋಹಿತ್ ಶರ್ಮಾ ಮತ್ತು ಶಿಖರ್ ಧವನ್, ಒನ್​ಡೇ ಕ್ರಿಕೆಟ್​ನಲ್ಲಿ ದಿ ಬೆಸ್ಟ್​ ಆರಂಭಿಕ ಜೋಡಿ. ಇವರಿಬ್ಬರು ಸೇರಿಕೊಂಡು ದಾಖಲೆಯ ರನ್ ಹೊಡೆದಿದ್ದಾರೆ. ಹಾಗಾಗಿ ಮುಂದಿನ ವರ್ಷ ನಡೆಯೋ ಒನ್​ಡೇ ವರ್ಲ್ಡ್​ಕಪ್​​​​​ವರೆಗೆ ಈ ಜೋಡಿಯೇ ಏಕದಿನ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಓಪನರ್ಸ್. ಕೊಹ್ಲಿ ನಂಬರ್ 3 ಮತ್ತು ಪಂತ್ ನಂಬರ್ 4 ಸ್ಲಾಟ್​​ನಲ್ಲಿ​ ಆಡ್ತಾರೆ. ಖಾಲಿ ಇರೋದು ನಂಬರ್ 5 ಸ್ಲಾಟ್ ಮಾತ್ರ. ಇನ್ನೊಂದು ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ ಇದೇ ಕ್ರಮಾಂಕದಲ್ಲೇ ರಾಹುಲ್, ಅದ್ಭುತ ಸ್ಟ್ರೈಕ್​ರೇಟ್ ಹೊಂದಿದ್ದಾರೆ.

ಒನ್​ಡೇ ಕ್ರಿಕೆಟ್​ನಲ್ಲಿ ಪಾಂಡ್ಯ ಜೊತೆ ಸೇರಿಕೊಂಡು ಮ್ಯಾಚ್ ಫಿನಿಶ್ ಮಾಡೋರು ಯಾರೂ ಇಲ್ಲ. ಹಾಗಾಗಿ ರಾಹುಲ್​ಗೆ ನಂಬರ್ 5 ಸ್ಲಾಟ್ ಕೊಹ್ಲಿ ಕ್ಯಾಪ್ಟನ್ ಆಗಿದ್ದಾಗಲೇ ಫಿಕ್ಸ್ ಆಗಿತ್ತು. ರೋಹಿತ್ ಶರ್ಮಾ - ಶಿಖರ್ ಧವನ್ ಅನುಪಸ್ಥಿತಿಯಲ್ಲಿ ರಾಹುಲ್ ಮತ್ತೆ ಕೆಲ ಪಂದ್ಯಗಳಲ್ಲಿ ಓಪನರ್ ಆದ್ರು. ಆದ್ರೆ ಈಗ ಗಬ್ಬರ್ ಸಿಂಗ್ ಉತ್ತಮ ಫಾರ್ಮ್​ನಲ್ಲಿದ್ದು, ಅವರನ್ನ ಡ್ರಾಪ್ ಮಾಡೋ ಮಾತೇ ಇಲ್ಲ. ಹಾಗಾಗಿ ರಾಹುಲ್​ಗೆ ನಂಬರ್ 5 ಸ್ಲಾಟೇ ಗತಿ.

ಜಿಂಬಾಬ್ವೆ ಪ್ರವಾಸಕ್ಕೂ ಮುನ್ನ ಭುಜದ ನೋವಿಗೆ ತುತ್ತಾದ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್..!

ನಂಬರ್ 5 ಸ್ಲಾಟ್​ನಲ್ಲಿ KL ರಾಹುಲ್ 10 ಒನ್​ಡೇ ಇನ್ನಿಂಗ್ಸ್​ಗಳನ್ನಾಡಿದ್ದು, 56.82ರ ಸರಾಸರಿಯಲ್ಲಿ 453 ರನ್ ಹೊಡೆದಿದ್ದಾರೆ. 113.81ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿ, ಒಂದು ಶತಕ, 4 ಅರ್ಧಶತಕಗಳನ್ನ ದಾಖಲಿಸಿದ್ದಾರೆ. ನಂಬರ್ 5ನಲ್ಲಿ ಬಿಟ್ಟು ರಾಹುಲ್ ಬೇರೆ ಯಾವ್ದೇ ಕ್ರಮಾಂಕದಲ್ಲೂ 100 ಪ್ಲಸ್ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿಯೇ ಇಲ್ಲ.

ರಾಹುಲ್ ಒಳ್ಳೆ ಫಿನಿಶರ್​. 10ರಲ್ಲಿ ಐದು ಪಂದ್ಯಗಳನ್ನ ಅದ್ಭುತವಾಗಿ ಫಿನಿಶ್ ಮಾಡಿದ್ದಾರೆ. ಹಾಗಾಗಿ ಜಿಂಬಾಬ್ವೆಯಲ್ಲಿ ರಾಹುಲ್ ನಂಬರ್ 5 ಸ್ಲಾಟ್​ನಲ್ಲಿ ಆಡಿ ಏಕದಿನ ವಿಶ್ವಕಪ್​ಗೆ ಈಗಿನಿಂದಲೇ ತಯಾರಿ ನಡೆಸೋ ಸಾಧ್ಯತೆ ಇದೆ.

click me!