ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ನೇತೃತ್ವದ ತಮಿಳುನಾಡು ತಂಡ ಸೆಮಿಫೈನಲ್ ಪ್ರವೇಶಿಸಿದೆ. ಇದರೊಂದಿಗೆ ಹಾಲಿ ಚಾಂಪಿಯನ್ ಕರ್ನಾಟಕ ತಂಡದ ಸೆಮೀಸ್ ಕನಸು ಜೀವಂತವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಸೂರತ್[ನ.27]: ದಿನೇಶ್ ಕಾರ್ತಿಕ್ ನೇತೃತ್ವದ ತಮಿಳು ನಾಡು ತಂಡ ಜಾರ್ಖಂಡ್ ತಂಡವನ್ನು ಅನಾಯಾಸವಾಗಿ ಮಣಿಸಿ 2019-20ನೇ ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಇದೀಗ ’ಬಿ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಮುಂಬೈ ತಂಡ ಪಂಜಾಬ್ ವಿರುದ್ಧ ಭಾರೀ ಅಂತರದಲ್ಲಿ ಜಯಿಸಿದರೆ ಎರಡನೇ ತಂಡವಾಗಿ ಅಂತಿಮ ನಾಲ್ಕರಘಟ್ಟ ಪ್ರವೇಶಿಸಲಿದೆ. ಇಲ್ಲದಿದ್ದರೆ ಹಾಲಿ ಚಾಂಪಿಯನ್ ಕರ್ನಾಟಕ ಸುಲಭವಾಗಿ ಸೆಮೀಸ್ ಪ್ರವೇಶಿಸಲಿದೆ.
Tamil Nadu Won by 8 Wicket(s) Scorecard:https://t.co/ilYAoZN51E
— BCCI Domestic (@BCCIdomestic)ಸಯ್ಯದ್ ಮುಷ್ತಾಕ್ ಅಲಿ ಟಿ20: ಕರ್ನಾಟಕಕ್ಕೆ ‘ಸನ್’ ಸ್ಟ್ರೋಕ್!
undefined
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಾರ್ಖಂಡ ತಂಡಕ್ಕೆ ತಮಿಳುನಾಡು ಸ್ಪಿನ್ನರ್’ಗಳು ಆಘಾತ ನೀಡಿದರು. ಎಂ. ಸಿದ್ದಾರ್ಥ್ ಹಾಗೂ ವಾಷಿಂಗ್ಟನ್ ಸುಂದರ್ ಮಾರಕ ದಾಳಿಗೆ ತತ್ತರಿಸಿದ ಜಾರ್ಖಂಡ್ 18.1 ಓವರ್’ಗಳಲ್ಲಿ ಕೇವಲ 85 ರನ್ ಬಾರಿಸಿ ಆಲೌಟ್ ಆಯಿತು. ಎಡಗೈ ಸ್ಪಿನ್ನರ್ ಸಿದ್ದಾರ್ಥ್ 18 ರನ್ ನೀಡಿ 4 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ 10 ರನ್ ನೀಡಿ 3 ವಿಕೆಟ್ ಪಡೆದರು.
ಇನ್ನು ತಮಿಳುನಾಡು ತಂಡ ಸೆಮೀಸ್ ಪ್ರವೇಶಿಸಬೇಕಿದ್ದರೆ 15 ಓವರ್ ಒಳಗಾಗಿ 86 ರನ್ ಬಾರಿಸಬೇಕಿತ್ತು. ಆದರೆ ವಾಷಿಂಗ್ಟನ್ ಸುಂದರ್ ಅಜೇಯ ಸ್ಫೋಟಕ ಬ್ಯಾಟಿಂಗ್[38 ರನ್ 22 ಎಸೆತ] ಹಾಗೂ ಶಾರುಕ್ ಖಾನ್[24] ಮತ್ತು ದಿನೇಶ್ ಕಾರ್ತಿಕ್ [13*] ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 13.5 ಓವರ್’ಗಳಲ್ಲಿ ಗೆಲುವಿನ ನಗೆ ಬೀರಿತು.
ಮುಷ್ತಾಕ್ ಅಲಿ ಟ್ರೋಫಿ: ಪಂತ್ ಫೇಲ್, ಡೆಲ್ಲಿಗೆ ಸೋಲು..!
ಕರ್ನಾಟಕದ ಆಸೆ ಜೀವಂತ: ಬುಧವಾರ ಸಂಜೆ 6.30ಕ್ಕೆ ಮುಂಬೈ ಹಾಗೂ ಪಂಜಾಬ್ ತಂಡಗಳು ಸೆಣಸಾಡಲಿದ್ದು, ಮುಂಬೈ ತಂಡ ಸೆಮೀಸ್ ಪ್ರವೇಶಿಸಬೇಕಿದ್ದರೆ ಪಂಜಾಬ್ ತಂಡದ ವಿರುದ್ಧ 90ಕ್ಕೂ ಹೆಚ್ಚು ರನ್’ಗಳಿಂದ ಜಯ ಸಾಧಿಸಬೇಕು. ಇಲ್ಲವೇ 10 ಓವರ್ ಉಳಿಸಿ ಗೆದ್ದರಷ್ಟೇ ಮುಂಬೈ ಅಂತಿಮಘಟ್ಟ ಪ್ರವೇಶಿಸಬಹುದಾಗಿದೆ. ಇವರೆಡು ಮುಂಬೈ ಪಾಲಿಗೆ ಕಠಿಣ ಸವಾಲಾಗಲಿದ್ದು, ಹಾಲಿ ಚಾಂಪಿಯನ್ ಕರ್ನಾಟಕ ಸೆಮೀಸ್ ಆಸೆ ಜೀವಂತವಾಗಿದೆ. ಒಂದು ವೇಳೆ ಮುಂಬೈ ಮಣಿಸಿ ಪಂಜಾಬ್ ಗೆದ್ದರೂ ಸಹಾ ಕರ್ನಾಟಕ ಅನಾಯಾಸವಾಗಿ ಸೆಮೀಸ್ ಪ್ರವೇಶಿಸಲಿದೆ.