ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಸೂಪರ್ ಲೀಗ್ ವೇಳಾಪಟ್ಟಿ ಪ್ರಕಟಗೊಂಡಿದ್ದು, ಹಾಲಿ ಚಾಂಪಿಯನ್ ಕರ್ನಾಟಕ ತಂಡಕ್ಕೆ ಕಠಿಣ ಪೈಪೋಟಿ ಎದುರಾಗಲಿದೆ. ಸೂಪರ್ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡವು ನ.21ರಂದು ರಾಜಸ್ಥಾನ ತಂಡವನ್ನು ಎದುರಿಸಲಿದೆ.
ಬೆಂಗಳೂರು(ನ.19): ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಗುಂಪು ಹಂತ ಮುಕ್ತಾಯಗೊಂಡಿದ್ದು, ಸೂಪರ್ ಲೀಗ್ ಹಂತದ ವೇಳಾಪಟ್ಟಿ ಸಿದ್ಧಗೊಂಡಿದೆ. ಹಾಲಿ ಚಾಂಪಿಯನ್ ಕರ್ನಾಟಕಕ್ಕೆ ಕಠಿಣ ಸವಾಲು ಎದುರಾಗಲಿದೆ.
ಮುಷ್ತಾಕ್ ಅಲಿ ಟ್ರೋಫಿ: ಗೋವಾ ಮಣಿಸಿ ಸೂಪರ್ ಲೀಗ್ ಪ್ರವೇಶಿಸಿದ ಕರ್ನಾಟಕ
undefined
ನ.21ರಿಂದ ಆರಂಭಗೊಳ್ಳಲಿರುವ ಸೂಪರ್ ಲೀಗ್‌ನ ಮೊದಲ ಪಂದ್ಯದಲ್ಲಿ ಕರ್ನಾಟಕ, ‘ಬಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದ ರಾಜಸ್ಥಾನ ತಂಡವನ್ನು ಎದುರಿಸಲಿದೆ. 2ನೇ ಪಂದ್ಯದಲ್ಲಿ ‘ಇ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ದೆಹಲಿ, 3ನೇ ಪಂದ್ಯದಲ್ಲಿ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಮಹಾರಾಷ್ಟ್ರ, 4ನೇ ಪಂದ್ಯದಲ್ಲಿ ‘ಡಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದ ಹರ್ಯಾಣ ತಂಡಗಳನ್ನು ಎದುರಿಸಲಿದೆ. ಮತ್ತೊಂದು ಗುಂಪಿನಲ್ಲಿ ಬರೋಡಾ, ತಮಿಳುನಾಡು, ಪಂಜಾಬ್, ಮುಂಬೈ ಹಾಗೂ ಜಾರ್ಖಂಡ್ ತಂಡಗಳು ಸ್ಥಾನ ಪಡೆದಿವೆ.
ಸೂಪರ್ ಲೀಗ್ ಮಾದರಿ ಹೇಗೆ?: ನ.21ರಿಂದ ಆರಂಭಗೊಳ್ಳಲಿರುವ ಸೂಪರ್ ಲೀಗ್‌ನಲ್ಲಿ ಒಟ್ಟು 10 ತಂಡಗಳು ಸೆಣಸಲಿವೆ. ಟೂರ್ನಿಗೆ ಪ್ರವೇಶಿಸಿದ್ದ 38 ತಂಡಗಳನ್ನು 5 ಗುಂಪುಗಳಾಗಿ ವಿಂಗಡಿಸಲಾಗಿತ್ತು. ‘ಎ’ ಹಾಗೂ ‘ಬಿ’ ಗುಂಪಿನಲ್ಲಿ ತಲಾ 7, ‘ಸಿ’, ‘ಡಿ’ ಹಾಗೂ ‘ಇ’ ಗುಂಪಿನಲ್ಲಿ ತಲಾ 8 ತಂಡಗಳಿದ್ದವು. 5 ಗುಂಪುಗಳಲ್ಲಿ ಅಗ್ರ 2 ಸ್ಥಾನಗಳನ್ನು ಪಡೆದ ತಂಡಗಳು ಸೂಪರ್ ಲೀಗ್‌ಗೆ ಪ್ರವೇಶಿಸಿವೆ. ಸೂಪರ್ ಲೀಗ್‌ನಲ್ಲಿ ತಲಾ 5 ತಂಡಗಳ 2 ಗುಂಪುಗಳನ್ನು ಮಾಡಲಾಗಿದ್ದು, ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿವೆ. ಸೂಪರ್ ಲೀಗ್ ಹಂತದಲ್ಲಿ ಪ್ರತಿ ತಂಡ 4 ಪಂದ್ಯಗಳನ್ನು ಆಡಲಿದೆ.
ನ.27ಕ್ಕೆ ಸೂಪರ್ ಲೀಗ್ ಹಂತ ಮುಕ್ತಾಯಗೊಳ್ಳಲಿದ್ದು, ನ.29ಕ್ಕೆ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಡಿ.1ರಂದು ಫೈನಲ್ ಪಂದ್ಯ ನಡೆಯಲಿದೆ.
ಕರ್ನಾಟಕದ ಸೂಪರ್ ಲೀಗ್ ವೇಳಾಪಟ್ಟಿ
ದಿನಾಂಕ ಎದುರಾಳಿ
ನ.21 ರಾಜಸ್ಥಾನ
ನ.22 ದೆಹಲಿ
ನ.24 ಮಹಾರಾಷ್ಟ್ರ
ನ.25 ಹರ್ಯಾಣ
ಗೌತಮ್ ಬದಲು ತಂಡಕ್ಕೆ ಅನಿರುದ್ಧ್
ಸೂಪರ್ ಲೀಗ್‌ನ 4 ಪಂದ್ಯಗಳಿಗೆ ಸೋಮವಾರ ಕರ್ನಾಟಕ ತಂಡವನ್ನು ಪ್ರಕಟಿಸಲಾಯಿತು. ವೈಯಕ್ತಿಕ ಕಾರಣಗಳಿಂದ ಆಲ್ರೌಂಡರ್ ಕೆ.ಗೌತಮ್ ತಂಡದಿಂದ ಹೊರಗುಳಿದಿದ್ದು, ಅವರ ಬದಲಿಗೆ ಅನಿರುದ್ಧ್ ಜೋಶಿಗೆ ಸ್ಥಾನ ನೀಡಲಾಗಿದೆ.
ತಂಡ: ಮನೀಶ್ ಪಾಂಡೆ (ನಾಯಕ), ಕರುಣ್ ನಾಯರ್, ಕೆ.ಎಲ್. ರಾಹುಲ್, ದೇವದತ್ ಪಡಿಕ್ಕಲ್, ರೋಹನ್ ಕದಂ, ಪವನ್ ದೇಶಪಾಂಡೆ, ಲುವ್ನಿತ್ ಸಿಸೋಡಿಯಾ, ಶ್ರೇಯಸ್ ಗೋಪಾಲ್, ಜೆ. ಸುಚಿತ್, ಅಭಿಮನ್ಯು ಮಿಥುನ್, ಪ್ರವೀಣ್ ದುಬೆ, ವಿ. ಕೌಶಿಕ್, ರೋನಿತ್ ಮೋರೆ, ಮನೋಜ್ ಎಂ. ಅನಿರುದ್ಧ್ ಜೋಶಿ.