ನಾಟೌಟ್ ತೀರ್ಪಿಗೆ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತ ಕ್ರಿಸ್ ಗೇಲ್!

By Web Desk  |  First Published Nov 24, 2019, 7:27 PM IST

ಕ್ರಿಸ್ ಗೇಲ್ ಹಾಸ್ಯಗಳು, ಸೆಲೆಬ್ರೇಷನ್, ಸ್ಲೆಡ್ಜಿಂಗ್ ಎಲ್ಲವೂ ಭಿನ್ನ. ಆದರೆ ಗೇಲ್ ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದೆ. ಗೇಲ್ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಜೋಹಾನ್ಸ್‌ಬರ್ಗ್(ನ.24): ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ಬ್ಯಾಟಿಂಗ್ ಮಾತ್ರವಲ್ಲ, ಆನ್‌ಫೀಲ್ಡ್‌ನಲ್ಲಿನ ಡ್ಯಾನ್ಸ್, ಸೆಲೆಬ್ರೇಷನ್, ಫನ್ನಿ ಸ್ಲೆಡ್ಜಿಂಗ್ ಮೂಲಕವೂ ಗಮನಸೆಳೆದಿದ್ದಾರೆ. ಇದೀಗ ಕ್ರಿಲ್ ಗೇಲ್ MSL ಲೀಗ್ ಟೂರ್ನಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡಿದಿದೆ. ಸಾಮಾಜಿಕ ಜಾಲತಾಣದಲ್ಲಿ ಗೇಲ್ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಗೇಲ್ ಶತಕ ನೀರಲ್ಲಿ ಹೋಮ, ಪಂದ್ಯದಲ್ಲಿ ದಾಖಲಾಯ್ತು ಬರೋಬ್ಬರಿ 37 ಸಿಕ್ಸರ್..!

Tap to resize

Latest Videos

undefined

 MSL ಲೀಗ್ ಟೂರ್ನಿಯಲ್ಲಿ ಜೋಝಿ ಸ್ಟಾರ್ ಪರ ಆಡುತ್ತಿರುವ ಗೇಲ್, ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಪರ್ಲ್ ರಾಕ್ಸ್ ವಿರುದ್ದದ ಪಂದ್ಯದಲ್ಲಿ ಬೌಲಿಂಗ್ ಮಾಡಿದ ಗೇಲ್, ಹೆನ್ರಿ ಡೇವಿಡ್ಸ್ ವಿರುದ್ಧ ಎಲ್‌ಬಿ ಮನವಿ ಮಾಡಿದರು. ಆದರೆ ಅಂಪೈರ್ ನಾಟೌಟ್ ತೀರ್ಪು ನೀಡಿದರು. ಅಂಪೈರ್ ತೀರ್ಪಿಗೆ ಗೇಲ್ ಬಿಕ್ಕಿ ಬಿಕ್ಕಿ ಅಳೋ ರೀತಿಯಲ್ಲಿ ನಟಿಸಿದರು. ಗೇಲ್ ಹಾಸ್ಯ ನೋಡಿದ ಅಂಪೈರ್‌ಗೆ ನಗು ತಡೆಯಲಾಗಲಿಲ್ಲ.

 

. makes a 'cry-baby' face after umpire says 'no' pic.twitter.com/i01oPD5nsv

— CricTracker (@Cricketracker)

ಇದನ್ನೂ ಓದಿ: ಗೇಲ್-ಮಲ್ಯ ಮುಖಾಮುಖಿ: ಭಾರತಕ್ಕೆ ಕೊರಿಯರ್ ಮಾಡಿ ಎಂದ ಜನ..!

1 ಓವರ್‌ನಲ್ಲಿ ಕೇವಲ 5 ರನ್ ನೀಡಿ ಎದುರಾಳಿಗಳನ್ನು ನಿಯಂತ್ರಿಸಿದ ಗೇಲ್, ಬ್ಯಾಟಿಂಗ್‌ನಲ್ಲಿ ನಿರಾಸೆ ಮೂಡಿಸಿದ್ದಾರೆ. MSL ಲೀಗ್ ಟೂರ್ನಿಯ 5 ಇನಿಂಗ್ಸ್‌ಗಳಲ್ಲಿ ಕೇವಲ 47 ರನ್ ಸಿಡಿಸಿದ್ದಾರೆ. 18 ರನ್ ಗೇರ್ ಬೆಸ್ಟ್ ಸ್ಕೋರ್. ಇತ್ತೀಚೆಗೆ ಐಪಿಎಲ್ ಟೂರ್ನಿಯ ಆಟಗಾರರ ರಿಟೈನ್ನಲ್ಲಿ ಕ್ರಿಸ್ ಗೇಲ್‌ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಉಳಿಸಿಕೊಂಡಿದೆ.

click me!