ಸಿಡ್ನಿ ಟೆಸ್ಟ್; ಆಸ್ಟ್ರೇಲಿಯಾ ನಾಯಕ ಟಿಮ್ ಪೈನೆಗೆ ದಂಡ!

By Suvarna News  |  First Published Jan 10, 2021, 9:48 PM IST

ಸಿಡ್ನಿ ಟೆಸ್ಟ್ ಪಂದ್ಯ ವಿವಾದಗ ಗೂಡಾಗಿದೆ. ಭಾರತೀಯ ಆಟಗಾರರ ಮೇಲೆ ಪ್ರೇಕ್ಷಕರು ಜನಾಂಗಿಯ ನಿಂದನೆ ಮಾಡಲಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಈ ಕುರಿತು ತನಿಖೆ ನಡೆಸುತ್ತಿದೆ. ಇತ್ತ ಟೆಸ್ಟ್ ಅಂತಿಮ ಘಟ್ಟ ತಲುಪಿದೆ. ಇದರ ನಡುವೆ ಆಸೀಸ್ ನಾಯಕ ಟಿಮ್ ಪೈನೆಗೆ ದಂಡ ಹಾಕಲಾಗಿದೆ.
 


ಸಿಡ್ನಿ(ಜ.10): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಪಂದ್ಯ ಅಂತಿಮ ಘಟ್ಟ ತಲುಪಿದೆ. ಭಾರತಕ್ಕೆ ಬೃಹತ್ ಗುರಿ ನೀಡಿರುವ ಆಸ್ಟ್ರೇಲಿಯಾ ಗೆಲುವಿನ ವಿಶ್ವಾಸದಲ್ಲಿದೆ. ಆದರೆ ಸಿಡ್ನಿ ಟೆಸ್ಟ್ ಪಂದ್ಯ ವಿವಾದಗಳಿಂದಲೇ ಹೆಚ್ಚು ಸುದ್ದಿಗಾಯುತ್ತಿದೆ. ಟೀಂ ಇಂಡಿಯಾ ಕ್ರಿಕೆಟಿಗರ ಮೇಲಿನ ಜನಾಂಗೀಯ ನಿಂದನೆ ವಿರುದ್ಧ ಬಿಸಿಸಿಐ ಅಖಾಡಕ್ಕಿಳಿದಿದೆ. ಇದರ ನಡುವೆ ಆಸ್ಟ್ರೇಲಿಯಾ ನಾಯಕ ಟಿಮ್‌ ಪೈನೆಗೆ ಐಸಿಸಿ ದಂಡ ವಿಧಿಸಿದೆ.

ಸಿರಾಜ್ ಮೇಲೆ ಮತ್ತೆ ಜನಾಂಗೀಯ ನಿಂದನೆ; 6 ಪ್ರೇಕ್ಷಕರ ಹೊರದಬ್ಬಿದ ಸಿಬ್ಬಂದಿ!..

Latest Videos

undefined

ಸಿಡ್ನಿ ಟಸ್ಟ್ ಪಂದ್ಯದ ತೃತೀಯ ದಿನ ಅಂಪೈರ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸೋ ಮೂಲಕ ಐಸಿಸಿ ಕೋಡ್ ಆಫ್ ಕಂಡಕ್ಟ್ ಆರ್ಟಿಕಲ್ 2.8 ನಿಯಮ ಉಲ್ಲಂಘಿಸಿದ್ದಾರೆ. ಲೆವಲ್ 1 ಉಲ್ಲಂಘನೆ ಇದಾಗಿದ್ದು, ಪಂದ್ಯದ ಶೇಕಡಾ 15 ರಷ್ಟು ಸಂಭಾವನೆಯನ್ನು ದಂಡದ ರೂಪದಲ್ಲಿ ಐಸಿಸಿಗೆ ಪಾವತಿಸಬೇಕಿದೆ. ಇದರ ಜೊತೆಗೆ 1 ಡಿಮೆರಿಟ್ ಅಂಕ ವಿದಿಸಿದೆ.

ಚೇತೇಶ್ವರ್ ಪೂಜಾರ ಔಟ್‌ಗಾಗಿ ಆಸೀಸ್ ತಂಡ ಮನವಿ ಮಾಡಿತು. ಸತತ ಮನವಿಯನ್ನು ಅಂಪೈರ್ ಪುರಸ್ಕರಿಲಿಲ್ಲ. ಔಟ್‌ಗಾಗಿ ಅತೀಯಾಗಿ ಮನವಿಯನ್ನು ತಿರಸ್ಕರಿಸಿದ ಅಂಪೈರ್ ನಾಟೌಟ್ ಎಂದರು. ಇದು ನಾಯಕ ಟಿಮ್ ಪೈನೆ ಅಸಮಾಧಾನಕ್ಕೆ ಕಾರಣವಾಗಿತ್ತು. ಇಷ್ಟೇ ಅಲ್ಲ ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಂತಾರಾಷ್ಟ್ರೀಯ ಅಂಪೈರ್ ತೀರ್ಪಿಗೆ ಅಸಮಾಧಾನ ತೋರಿದ ಕಾರಣಕ್ಕೆ ಟಿಮ್ ಪೈನೆಗೆ ದಂಡ ಹಾಕಲಾಗಿದೆ

click me!