ಸಿರಾಜ್ ಮೇಲೆ ಮತ್ತೆ ಜನಾಂಗೀಯ ನಿಂದನೆ; 6 ಪ್ರೇಕ್ಷಕರ ಹೊರದಬ್ಬಿದ ಸಿಬ್ಬಂದಿ!

Published : Jan 10, 2021, 06:17 PM ISTUpdated : Jan 10, 2021, 07:01 PM IST
ಸಿರಾಜ್ ಮೇಲೆ ಮತ್ತೆ ಜನಾಂಗೀಯ ನಿಂದನೆ; 6 ಪ್ರೇಕ್ಷಕರ ಹೊರದಬ್ಬಿದ ಸಿಬ್ಬಂದಿ!

ಸಾರಾಂಶ

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರನ್ ಹಾಗೂ ವಿಕೆಟ್‌ಗಿಂತ ಹೆಚ್ಚು ಜನಾಂಗಿಯ ನಿಂದನೆ ಸದ್ದು ಮಾಡುತ್ತಿದೆ. ಭಾರತೀಯ ಕ್ರಿಕೆಟಿಗರ ಗುರಿಯಾಗಿಸಿ ಸಿಡ್ನಿ ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿದ್ದಾರೆ. ಈ ಕುರಿತು ಟೀಂ ಇಂಡಿಯಾ ದೂರು ನೀಡಿದೆ. ತನಿಖೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಮತ್ತೆ ಮೊಹಮ್ಮದ್ ಸಿರಾಜ್‌ಗೆ ಜನಾಂಗೀಯ ನಿಂದನೆ ಮಾಡಲಾಗಿದೆ. ಹೀಗಾಗಿ 6 ಪ್ರೇಕ್ಷಕರನ್ನು ಸಿಬ್ಬಂದಿ ಹೊರದಬ್ಬಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಸಿಡ್ನಿ(ಜ.10): ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್‌ಗೆ ಜನಾಂಗೀಯ ನಿಂದನೆ ಮಾಡಿದ ಕಾರಣಕ್ಕೆ ಸಿಡ್ನಿ ಟೆಸ್ಟ್ ಪಂದ್ಯ ಇದೀಗ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಬಿಸಿಸಿಐ ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಐಸಿಸಿಗೆ ದೂರು ನೀಡಿದ್ದು ತನಿಖೆ ನಡೆಯುತ್ತಿದೆ. ಈ ಪ್ರಕರಣದ ಬೆನ್ನಲ್ಲೇ ನಾಲ್ಕನೇ ದಿನ ಮತ್ತೆ ವೇಗಿ ಮೊಹಮ್ಮದ್ ಸಿರಾಜ್‌ಗೆ ಸಿಡ್ನಿ ಪ್ರೇಕ್ಷಕರು ನಿಂದನೆ ಮಾಡಿದ್ದಾರೆ. 

ಟೀಂ ಇಂಡಿಯಾ ಬಳಿ ಕ್ಷಮೆ ಕೇಳಿದ ಕ್ರಿಕೆಟ್ ಆಸ್ಟ್ರೇಲಿಯಾ; ಕಠಿಣ ಕ್ರಮದ ಭರವಸೆ!...

4ನೇ ದಿನದಾಟದ ಟಿ ವಿರಾಮಕ್ಕೂ ಮುನ್ನ ಆಸ್ಟ್ರೇಲಿಯಾ ಅಭಿಮಾನಿಗಳು, ಫೀಲ್ಡಿಂಗ್ ಮಾಡುತ್ತಿದ್ದ ಮೊಹಮ್ಮದ್ ಸಿರಾಜ್‌ಗೆ ಜನಾಂಗೀಯ ನಿಂದನೆ ಮಾಡಿದ್ದಾರೆ. ಕೆಲ ಹೊತ್ತು ಸುಮ್ಮನಿದ್ದ ಸಿರಾಜ್, ಅಭಿಮಾನಿಗಳ ವರ್ತನೆ ತಾರಕಕ್ಕೇರಿದಾಗ ನಾಯಕ ಅಜಿಂಕ್ಯ ರಹಾನೆಗೆ ಹೇಳಿದ್ದಾರೆ. ತಕ್ಷಣವೇ ರಹಾನೆ ಮ್ಯಾಚ್ ಅಂಪೈರ್ ಹಾಗೂ ರೆಫ್ರಿಗೆ ದೂರು ನೀಡಿದ್ದಾರೆ.

 

ಆಸೀಸ್ ಅಭಿಮಾನಿಗಳ ವಿರುದ್ಧ ಬುಮ್ರಾ-ಸಿರಾಜ್ ದೂರು ; ಕಠಿಣ ಕ್ರಮಕ್ಕೆ ಆಗ್ರಹಿಸಿದ ಬಿಸಿಸಿಐ!.

ದೂರು ಗಮನಿಸಿದ ಭದ್ರತಾ ಸಿಬ್ಬಂಧಿಗಳು ಸಿಸಿಟಿವಿ ಪರಿಶೀಲಿಸಿದ್ದಾರೆ. ಬಳಿಕ ನೇರವಾಗಿ ಪ್ರೇಕ್ಷಕರ ಬಳಿ ಬಂದ ಭದ್ರತಾ ಸಿಬ್ಬಂದಿ 6 ಮಂದಿಯನ್ನು ಹೊರದಬ್ಬಿದ್ದಾರೆ. ಇಷ್ಟೇ ಅಲ್ಲ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮ್ಯಾಚ್ ರೆಫ್ರಿ ಕೂಡ ಬೌಂಡರಿ ಲೈನ್ ಬಳಿ ತೆರಳಿ ಪರಿಸ್ಥಿತಿ ಕುರಿತು ಮಾಹಿತಿ ಕಲೆಹಾಕಿದ್ದಾರೆ. 

ಕ್ರಿಕೆಟ್ ಆಸ್ಟ್ರೇಲಿಯಾ ಈ ಘಟನೆಗೆ ಟೀಂ ಇಂಡಿಯಾ ಕ್ರಿಕೆಟಿಗರ ಬಳಿ ಕ್ಷಮೆ ಕೇಳಿದೆ. ಆದರೆ ಮತ್ತೆ ಮತ್ತೆ ಈ ಘಟನೆಗಳು ಮರುಕಳಿಸುತ್ತಿದೆ. ಇದೀಗ ಪ್ರೇಕ್ಷಕರ ಈ ವರ್ತನೆಯಿಂದ ಕ್ರಿಕೆಟ್ ಆಸ್ಟ್ರೇಲಿಯಾ, ಐಸಿಸಿಗೆ ಉತ್ತರ ನೀಡಬೇಕಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?