ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿರುವ ಆಸ್ಟ್ರೇಲಿಯಾ, ಟೀಂ ಇಂಡಿಯಾ ಗೆಲುವಿಗೆ ಬೃಹತ್ ಮೊತ್ತದ ಗುರಿ ನೀಡಿದೆ. ನಾಲ್ಕನೇ ದಿನಾದಾಟದಲ್ಲಿ ಭಾರತ ದಿಟ್ಟ ಹೋರಾಟ ನೀಡಿದೆ. ಆದರೆ ಅಂತಿಮ ದಿನ ಪಂದ್ಯದ ಚಿತ್ರಣ ಬದಲಾಗಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಸಿಡ್ನಿ(ಜ.10): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯ ಅಂತಿಮ ಘಟ್ಟ ತಲುಪಿದೆ. ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಆಸ್ಟ್ರೇಲಿಯಾ ಸಿಡ್ನಿ ಟೆಸ್ಟ್ ಪಂದ್ಯ ಗೆಲುವಿನ ವಿಶ್ವಾಸದಲ್ಲಿದೆ. ಭಾರತಕ್ಕೆ 407 ರನ್ ಟಾರ್ಗೆಟ್ ನೀಡಿರುವ ಆಸ್ಟ್ರೇಲಿಯಾ, ಈಗಾಗಲೇ 2 ವಿಕೆಟ್ ಕಬಳಿಸಿದೆ. ಅಂತಿಮ ದಿನ ಟೀಂ ಇಂಡಿಯಾ ಗೆಲುವಿಗೆ 309 ರನ್ ಅವಶ್ಯಕತೆ ಇದೆ.
ಸಿಡ್ನಿ ಟೆಸ್ಟ್ ನಡುವೆ ಆಘಾತ; ಟೀಂ ಇಂಡಿಯಾದ ಕೀ ಪ್ಲೇಯರ್ ಸರಣಿಯಿಂದ ಔಟ್..
4ನೇ ದಿದನಾಟದಲ್ಲಿ 2ನೇ ಇನ್ನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಾ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿತು. ಲಬುಶಾನೆ 73 ರನ್ ಸಿಡಿಸಿದರೆ, ಸ್ಟೀವ್ ಸ್ಮಿತ್ 81 ಹಾಗೂ ಗ್ರೀನ್ 84 ರನ್ ಸಿಡಿಸಿ ಔಟಾದರು. ಈ ಮೂಲಕ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 312 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು. ಇಷ್ಟೇ ಅಲ್ಲ ಭಾರತಕ್ಕೆ 40 7ರನ್ ಬೃಹತ್ ಟಾರ್ಗೆಟ್ ನೀಡಿತು.
ಆಸೀಸ್ ಅಭಿಮಾನಿಗಳ ವಿರುದ್ಧ ಬುಮ್ರಾ-ಸಿರಾಜ್ ದೂರು ; ಕಠಿಣ ಕ್ರಮಕ್ಕೆ ಆಗ್ರಹಿಸಿದ ಬಿಸಿಸಿಐ!
ಇದಕ್ಕುತ್ತರವಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶುಬ್‌ಮನ್ ಗಿಲ್ ಉತ್ತಮ ಆರಂಭ ನೀಡಿದರು. ರೋಹಿತ್ ಶರ್ಮಾ ಹಾಫ್ ಸೆಂಚುರಿ ಸಿಡಿಸಿದರು. ರೋಹಿತ್ 52 ರನ್ ಸಿಡಿಸಿದರೆ, ಗಿಲ್ 32 ರನ್ ಕಾಣಿಕೆ ನೀಡಿದರು. ಮೂಲಕ ಟೀಂ ಇಂಡಿಯಾ ದಿನದಾಟದ ಅಂತ್ಯದಲ್ಲಿ2 ವಿಕೆಟ್ ನಷ್ಟಕ್ಕೆ 98 ರನ್ ಸಿಡಿಸಿದೆ. ಅಂತಿಮ ದಿನದಲ್ಲಿ ಭಾರತದ ಗೆಲುವಿಗೆ 309 ರನ್ ಅವಶ್ಯಕತೆ ಇದೆ.