ರೋಹಿತ್ ಶರ್ಮಾ ಫಿಟ್ನೆಸ್ ವಿಚಾರ ಇನ್ನು ಗೊಂದಲದ ಗೂಡಾಗಿರುವುದರಿಂದ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮುಂಬೈ ಇಂಡಿಯನ್ಸ್ ಆಟಗಾರ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಲಿ ಎನ್ನುವ ಕೂಗು ಕೇಳಿ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ನ.14): ಆಸ್ಪ್ರೇಲಿಯಾ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ರೋಹಿತ್ ಶರ್ಮಾ ಫಿಟ್ನೆಸ್ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ರೋಹಿತ್ ಫಿಟ್ನೆಸ್ ಬಗ್ಗೆ ಬಿಸಿಸಿಐ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೂ ರೋಹಿತ್‌ರನ್ನು ಆಸ್ಪ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿದೆ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಪ್ರಶ್ನಿಸಿದ್ದಾರೆ.
ಆಸೀಸ್ ಸರಣಿಗೆ ಮೊದಲು ಆಯ್ಕೆ ಮಾಡಿದ ತಂಡದಲ್ಲಿ ರೋಹಿತ್‌ಗೆ ಸ್ಥಾನ ನೀಡದಿರುವುದು ಆರಂಭದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕ್ರಿಕೆಟ್ ಮಂಡಳಿ ರೋಹಿತ್ ಗಾಯದ ಕಾರಣವನ್ನು ಮುಂದಿಟ್ಟಿತ್ತು. ಆ ಬಳಿಕ ಮತ್ತೆ ಪರಿಷ್ಕೃತ ಆಟಗಾರರ ಪಟ್ಟಿಯಲ್ಲಿ ರೋಹಿತ್‌ಗೆ ಟೆಸ್ಟ್ ತಂಡದಲ್ಲಿ ಅವಕಾಶ ನೀಡಿತು. ಆಟಗಾರರ ಆಯ್ಕೆಗೆ ಐಪಿಎಲ್ ಟೂರ್ನಿಯನ್ನೇ ಮಾನದಂಡ ವಾಗಿರಿಸಿಕೊಂಡಿದ್ದರೆ ಮುಂಬೈ ತಂಡದ ಸೂರ್ಯಕುಮಾರ್ ಯಾದವ್ ಅತ್ಯದ್ಭುತ ಪ್ರದರ್ಶನ ತೋರಿದ್ದರು. ಸೂರ್ಯರನ್ನು ಆಸೀಸ್ ಸರಣಿಗೆ ಯಾವ ಕಾರಣಕ್ಕೆ ಆಯ್ಕೆ ಮಾಡಲಿಲ್ಲ ಎಂದು ಮಂಜ್ರೇಕರ್ ಪ್ರಶ್ನೆ ಮಾಡಿದ್ದಾರೆ. ಈ ನಡುವೆ ಸೂರ್ಯಕುಮಾರ್ ಬ್ಯಾಟಿಂಗ್ ವೈಖರಿಯನ್ನು ಹರ್ಭಜನ್ ಸಿಂಗ್ ಹೊಗಳಿದ್ದಾರೆ. ಸೂರ್ಯ, ಭಾರತದ ಎಬಿ ಡಿವಲಿಯರ್ಸ್ ಎಂದು ಹರ್ಭಜನ್ ಹೇಳಿದ್ದಾರೆ.
undefined
ಆಸ್ಪ್ರೇಲಿಯಾ ಸರಣಿಗೆ ಟೀಂ ಇಂಡಿಯಾ ರೆಟ್ರೋ ಜೆರ್ಸಿ
ರೋಹಿತ್‌ರನ್ನು ಸೀಮಿತ ಓವರ್‌ಗಳ ಪಂದ್ಯಕ್ಕೆ ಆಯ್ಕೆ ಮಾಡದಿರುವ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ. ಸದ್ಯ ರೋಹಿತ್ ಶೇ.70 ರಷ್ಟು ಫಿಟ್ನೆಸ್ ಹೊಂದಿದ್ದಾರೆ. ಆಸೀಸ್ ವಿರುದ್ಧದ ಟೆಸ್ಟ್ ಸರಣಿ ವೇಳೆಗೆ ರೋಹಿತ್ ಸಂಪೂರ್ಣ ಚೇತರಿಕೆ ಕಾಣಲಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.