ಟಾಮ್‌ ಮೂಡಿ ಔಟ್‌, Sunrisers Hyderabad ತಂಡಕ್ಕೆ ಬ್ರಿಯಾನ್‌ ಲಾರಾ ಕೋಚ್‌!

Published : Sep 03, 2022, 12:10 PM ISTUpdated : Sep 03, 2022, 12:27 PM IST
ಟಾಮ್‌ ಮೂಡಿ ಔಟ್‌, Sunrisers Hyderabad ತಂಡಕ್ಕೆ ಬ್ರಿಯಾನ್‌ ಲಾರಾ ಕೋಚ್‌!

ಸಾರಾಂಶ

ಸನ್‌ರೈಸರ್ಸ್‌ ತಂಡದ ಅತ್ಯಂತ ಯಶಸ್ವಿ ಕೋಚ್‌ ಆಗಿದ್ದ ಟಾಮ್‌ ಮೂಡಿ 2013 ರಿಂದ 2019ರ ಅವಧಿಯಲ್ಲಿ ತಂಡವನ್ನು ಐದು ಬಾರಿ ಪ್ಲೇ ಆಫ್‌ಗೇರಿದ್ದು ಮಾತ್ರವಲ್ಲದೆ 2016ರಲ್ಲಿ  ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.  

ಬೆಂಗಳೂರು (ಸೆ.3): ಸನ್‌ರೈಸರ್ಸ್‌ ತಂಡದ ಕೋಚ್‌ ಆಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್‌ ಮೂಡಿ ಅವರ ಅವಧಿ ಮುಕ್ತಾಯ ಕಂಡಿದೆ. ಮುಂದಿನ ಐಪಿಎಲ್‌ ಸೀಸನ್‌ಅಲ್ಲಿ ಅವರು ತಂಡದ ಕೋಚ್ ಆಗಿ ಇರುವುದಿಲ್ಲ ಎಂದು ಸನ್‌ರೈಸರ್ಸ್‌ ಹೈದರಾಬಾದ್ ತಂಡ ತನ್ನ ಪ್ರಕಟಣೆಯಲ್ಲಿ ಶನಿವಾರ ತಿಳಿಸಿದೆ.  ಮುಂಬರುವ ಐಪಿಎಲ್ ಸೀಸನ್‌ಗೆ ಕ್ರಿಕೆಟ್‌ ದಿಗ್ಗಜ ವೆಸ್ಟ್‌ ಇಂಡೀಸ್‌ನ  ಬ್ರಿಯಾನ್ ಲಾರಾ ತಂಡದ ಕೋಚ್‌ ಆಗಿ ಇರಲಿದ್ದಾರೆ ಎಂದು ಸನ್‌ ಟಿವಿ ನೆಟ್‌ವರ್ಕ್‌ ಒಡೆತನದಲ್ಲಿರುವ ಫ್ರಾಂಚೈಸಿ ಪ್ರಕಟಿಸಿದೆ.ಮೂಡಿ 2013 ಮತ್ತು 2019 ರ ನಡುವೆ ಸನ್‌ರೈಸರ್ಸ್‌ನೊಂದಿಗೆ ಅತ್ಯಂತ ಯಶಸ್ವಿ ವರ್ಷಗಳನ್ನು ಕಳೆದಿದ್ದರು. ಈ ಅವಧಿಯಲ್ಲಿ ತಂಡವು ಐದು ಬಾರಿ ಪ್ಲೇಆಫ್‌ ಸಾಧನೆ ಮಾಡಿದ್ದಲ್ಲದೆ, 2016 ರಲ್ಲಿ ಆರ್‌ಸಿಬಿ ತಂಡವನ್ನು ಫೈನಲ್‌ನಲ್ಲಿ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಆಸ್ಟ್ರೇಲಿಯಾದಲ್ಲಿ ತಮ್ಮ ಸಹ ಆಟಗಾರನಾಗಿದ್ದ ಟ್ರೆವರ್‌ ಬೇಲೀಸ್‌ ಅವರನ್ನು ಸನ್‌ರೈಸರ್ಸ್‌ ತಂಡ 2020ರಲ್ಲಿ ಮುಖ್ಯ ಕೋಚ್‌ ಆಗಿ ನೇಮಿಸಿತ್ತು. ಆದರೆ, ಕಳೆದ ವರ್ಷ ತಂಡದ ಡೈರೆಕ್ಟರ್‌ ಆಫ್‌ ಕ್ರಿಕೆಟ್‌ ಎನ್ನುವ ಹುದ್ದೆಯಲ್ಲಿ ಟಾಮ್‌ ಮೂಡಿ ಸನ್‌ರೈಸರ್ಸ್‌ ತಂಡಕ್ಕೆ ವಾಪಸಾಗಿದ್ದರು.


"ನಮ್ಮೊಂದಿಗಿನ ಅವರ ಅವಧಿಯು ಅಂತ್ಯಗೊಳ್ಳುತ್ತಿದ್ದಂತೆ, ಎಸ್‌ಆರ್‌ಎಚ್‌ಗೆ ಟಾಮ್ ಅವರ ಕೊಡುಗೆಗಳಿಗಾಗಿ ನಾವು ಧನ್ಯವಾದಗಳನ್ನು ಬಯಸುತ್ತೇವೆ. ನಮ್ಮ ಅತ್ಯಂತ ಸ್ಮರಣೀಯ ವರ್ಷಗಳು ಇದಾಗಿದ್ದವು. ಭವಿಷ್ಯದ ಅವರ ಪ್ರಯತ್ನಗಳಿಗೆ ನಾವು ಶುಭ ಹಾರೈಸುತ್ತೇವೆ ಎಂದು ಎಸ್‌ಆರ್‌ಎಚ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

2022ರ ಐಪಿಎಲ್‌ ಸೀಸನ್‌ನಲ್ಲಿ ಬ್ರಿಯಾನ್‌ ಲಾರಾ, ಎಸ್‌ಆರ್‌ಎಚ್‌ ಟೀಮ್‌ ಮ್ಯಾನೇಜ್‌ಮೆಂಟ್‌ನಲ್ಲಿ ಸ್ಟ್ಯಾಟರ್ಜಿಕ್‌ ಅಡ್ವೈಸರ್‌ ಹಾಗೂ ಬ್ಯಾಟಿಂಗ್‌ ಕೋಚ್ ಆಗಿದ್ದರು. ಯಾವುದೇ ಟಿ20 ತಂಡದ ಕೋಚ್‌ ಆಗಿ ಬ್ರಿಯಾನ್‌ ಲಾರಾ ಅವರಿಗೆ ಇದು ಮೊದಲ ಜವಾಬ್ದಾರಿಯಾಗಿದೆ. ಟಾಮ್‌ ಮೂಡಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಪರಸ್ಪರ ಒಪ್ಪಿಗೆ ಮೇರೆಗೆ ಬೇರೆ-ಬೇರೆ ಆಗೊದ್ದಾರೆ. ಇತ್ತಿಚೆಗೆ ಟಾಮ್‌ ಮೂಡಿ, ಐಎಲ್‌ಟ20ಯ ಆರು ಫ್ರಾಂಚೈಸಿಗಳಲ್ಲಿ ಒಂದಾದ ಡೆಸಾರ್ಟ್‌ ವೈಪರ್ಸ್‌ನ ಕ್ರಿಕೆಟ್‌ ಡೈರೆಕ್ಟರ್‌ ಆಗಿ ನೇಮಕವಾಗಿದ್ದರು. ಈ ಟೂರ್ನಿಯಲ್ಲಿ ಯುಎಇಯಲ್ಲಿ 2023ರ ಜನವರಿಯಲ್ಲಿ ಆರಂಭವಾಗಲಿದೆ.

ಉಮ್ರಾನ್‌ ಮಲಿಕ್‌ರಷ್ಟು ವೇಗವಾಗಿ ಬೌಲಿಂಗ್‌ ಮಾಡಲು ನನಗೆ ಸಾಧ್ಯವಿಲ್ಲವೆಂದ ಹರ್ಷಲ್‌ ಪಟೇಲ್‌..!

ಕಳೆದ ಎರಡು ವರ್ಷಗಳಲ್ಲಿ ಕಳಪೆ ನಿರ್ವಹಣೆ ತೋರಿದ್ದ ತಂಡ: 2021ರಲ್ಲಿ ಮೂಡಿ ಸನ್‌ರೈಸರ್ಸ್‌ (Sunrisers) ತಂಡದ ಕ್ರಿಕೆಟ್‌ ಡೈರಕ್ಟರ್ ಆಗಿದ್ದರೆ, ಟ್ರೆವರ್‌ ಬೇಲೀಸ್‌ ಮುಖ್ಯ ಕೋಚ್ (Head Coach) ಆಗಿದ್ದರು. ಆದರೆ, 2021ರಲ್ಲಿ ಸನ್‌ರೈಸರ್ಸ್‌ ತಂಡ ಕೇವಲ 3 ಗೆಲುವು ಕಂಡು ನಿರಾಶಾದಾಯಕವಾಗಿ ಐಪಿಎಲ್‌ (IPL) ಮುಗಿಸಿದ ಬಳಿಕ, ಟ್ರೆವರ್‌ ಬೇಲಿಸ್‌ ಸ್ಥಾನಕ್ಕೆ ಕೋಚ್‌ ಆಗಿ ಮೂಡಿ ವಾಪಸಾಗಿದ್ದರು. ಆದರೆ, 2022ರಲ್ಲಿ ಅವರ ಕೋಚ್‌ ಅವಧಿ ಉತ್ತಮವಾಗಿರಲಿಲ್ಲ. 10 ತಂಡಗಳ ಸ್ಪರ್ಧೆಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ (SRH) ಕೇವಲ 6 ಗೆಲುವು ಕಂಡರೆ, 8 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಕಳೆದ ಎರಡು ಋತುವಿನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್‌ನಲ್ಲಿ ಅತ್ಯಂತ ನಿಕೃಷ್ಟ ಪ್ರದರ್ಶನ ತೋರಿದ ತಂಡವಾಗಿ. ಆಡಿದ 28 ಪಂದ್ಯಗಳಲ್ಲಿ ಕೇವಲ 9ರಲ್ಲಿ ಗೆಲುವು ಕಂಡಿದ್ದರೆ, 18 ಪಂದ್ಯಗಳಲ್ಲ ಸೋಲು ಹಾಗೂ ಒಂದು ಪಂದ್ಯದಲ್ಲಿ ಟೈ ಫಲಿತಾಂಶ ಕಂಡಿದೆ.

 

IPLನಲ್ಲಿ ಹಲ್​ಚಲ್​ ಎಬ್ಬಿಸಿದ ‘ಜಮ್ಮು ಎಕ್ಸ್​ಪ್ರೆಸ್​​​’ ಉಮ್ರಾನ್​ ಮಲಿಕ್​​​..!

ಹರಾಜಿನಲ್ಲಿ ಸನ್‌ರೈಸರ್ಸ್ ಉತ್ತಮ ಸಮತೋಲಿತ ತಂಡವನ್ನು ಒಟ್ಟುಗೂಡಿಸಿದರೂ ಮೈದಾನದಲ್ಲಿ ಇದರ ಫಲ ಸಿಗಲಿಲ್ಲ. ಹರಾಜಿಗೂ ಮುನ್ನ ಸನ್‌ರೈಸರ್ಸ್‌ ಮೂರು ಆಟಗಾರರನ್ನು ಉಳಿಸಿಕೊಂಡಿತ್ತು. ನಾಯಕ ಕೇನ್ ವಿಲಿಯಮ್ಸನ್ ಮತ್ತು ಭಾರತದ ಜೋಡಿ ಉಮ್ರಾನ್ ಮಲಿಕ್ ಮತ್ತು ಅಬ್ದುಲ್ ಸಮದ್ ರನ್ನು ರಿಟೇನ್‌ ಮಾಡಿತ್ಉತ. ಋತುವಿನ ಮೊದಲಾರ್ಧದಲ್ಲಿ, ವಿಲಿಯಮ್ಸನ್ ಟಾಸ್‌ನಲ್ಲಿ ಅದೃಷ್ಟ ಪಡೆದಿದ್ದರು. ಇದು ಸನ್ರೈಸರ್ಸ್ ಸತತ ಐದು ಪಂದ್ಯಗಳನ್ನು ಗೆಲ್ಲುವಲ್ಲಿ ದೊಡ್ಡ ಪಾತ್ರವನ್ನು ವಹಿಸಿತು. ಆದರೆ, ಸತತ ಐದು ಸೋಲಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಷ್ಟೇ ವೇಗವಾಗಿ ತಂಡ ಕುಸಿಯಿತು. ವಿಲಿಯಮ್ಸನ್ ಅವರ ಕಳಪೆ ಬ್ಯಾಟಿಂಗ್ ಫಾರ್ಮ್ ಇಬ್ಬರು ಪ್ರಮುಖ ಭಾರತೀಯ ಆಟಗಾರರಾದ ಟಿ ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ನಿರ್ವಹಣೆ ಸನ್ ರೈಸರ್ಸ್ ಹಿನ್ನಡೆಗೆ ಕಾರಣವಾಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!
IPL 2026 ಮಿನಿ ಹರಾಜು: 2 ಕೋಟಿ ಮೂಲ ಬೆಲೆ ಹೊಂದಿದ 5 ಸ್ಟಾರ್ ಆಟಗಾರರಿವರು!