ಟಿ20 ವಿಶ್ವಕಪ್‌ ಬಳಿಕ ಕಿವೀಸ್‌ ವನಿತಾ ತಂಡ ಭಾರತಕ್ಕೆ

By Kannadaprabha NewsFirst Published Oct 8, 2024, 9:40 AM IST
Highlights

ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಬಳಿಕ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡವು ಭಾರತ ಪ್ರವಾಸ ಮಾಡಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ 

ನವದೆಹಲಿ: ನ್ಯೂಜಿಲೆಂಡ್‌ ಮಹಿಳಾ ಕ್ರಿಕೆಟ್‌ ತಂಡ ಟಿ20 ವಿಶ್ವಕಪ್‌ ಬಳಿಕ ಭಾರತ ಪ್ರವಾಸ ಕೈಗೊಳ್ಳಲಿದೆ. ಸದ್ಯ ಯುಎಇಯಲ್ಲಿ ವಿಶ್ವಕಪ್‌ ನಡೆಯುತ್ತಿದ್ದು, ಅ.20ಕ್ಕೆ ಮುಕ್ತಾಯಗೊಳ್ಳಲಿದೆ. ಬಳಿಕ ಭಾರತಕ್ಕೆ ಆಗಮಿಸಲಿರುವ ಕಿವಿಸ್‌ ತಂಡ ಅ.24, 27 ಹಾಗೂ 29ರಂದು ಭಾರತದ ವಿರುದ್ಧ ಅಹಮದಾಬಾದ್‌ನಲ್ಲಿ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಕಿವೀಸ್‌ ತಂಡ ಕಳೆದ ವರ್ಷವೇ ಭಾರತಕ್ಕೆ ಆಗಮಿಸಬೇಕಿತ್ತು. ಆದರೆ ಭಾರತ ತಂಡದ ನಿರಂತರ ಕ್ರಿಕೆಟ್‌ನಿಂದಾಗಿ ಪ್ರವಾಸ ಮುಂದೂಡಲಾಗಿತ್ತು.

ಕಿವೀಸ್‌ ವಿರುದ್ಧ ಸರಣಿ ಹಿನ್ನೆಲೆಯಲ್ಲಿ ಸ್ಮೃತಿ ಮಂಧನಾ ಸೇರಿ ಭಾರತದ 6 ಆಟಗಾರರು ಈ ಬಾರಿ ಮಹಿಳಾ ಬಿಗ್‌ಬ್ಯಾಶ್‌ ಲೀಗ್‌ನ ಕೆಲ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಬಿಗ್‌ಬ್ಯಾಶ್‌ ಅ.27ಕ್ಕೆ ಆರಂಭಗೊಳ್ಳಲಿದೆ.

Latest Videos

ಟಿ20 ವಿಶ್ವಕಪ್‌: ದ.ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ ಗೆಲುವು

ಶಾರ್ಜಾ: 9ನೇ ಆವೃತ್ತಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸೋಮವಾರ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ 7 ವಿಕೆಟ್‌ ಗೆಲುವು ಸಾಧಿಸಿತು. ಇಂಗ್ಲೆಂಡ್‌ ಸತತ 2ನೇ ಜಯ ದಾಖಲಿಸಿದರೆ, ಆಫ್ರಿಕಾ ಮೊದಲ ಸೋಲು ಕಂಡಿತು.

ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ 20 ಓವರಲ್ಲಿ 6 ವಿಕೆಟ್‌ ನಷ್ಟದಲ್ಲಿ 124 ರನ್‌ ಗಳಿಸಿತು. ನಾಯಕಿ ಲಾರಾ ವೊಲ್ವಾರ್ಟ್‌ 39 ಎಸೆತಗಳಲ್ಲಿ 42, ಮಾರಿಯನೆ ಕಾಪ್‌ 26, ಅನ್ನೇರಿ ಡರ್ಕ್‌ಸೆನ್‌ ಔಟಾಗದೆ 20 ರನ್‌ ಗಳಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 19.1 ಓವರ್‌ಗಳಲ್ಲಿ ಜಯಗಳಿಸಿತು. ಶೀವರ್‌ ಬ್ರಂಟ್‌ 36 ಎಸೆತಗಳಲ್ಲಿ ಔಟಾಗದೆ 48, ಡೇನಿಲ್‌ ವ್ಯಾಟ್‌ 43 ರನ್‌ ಸಿಡಿಸಿದರು.

ಮಿಂಚಿನ ವೇಗ, ಮೊದಲ ಓವರ್ ಮೇಡನ್; ಪದಾರ್ಪಣಾ ಪಂದ್ಯದಲ್ಲೇ ಮಯಾಂಕ್ ದಾಖಲೆ!

ಇಂದು ಆಸೀಸ್ vs ಕಿವೀಸ್‌

ಮಂಗಳವಾರ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ಮುಖಾಮುಖಿಯಾಗಲಿವೆ. ಉಭಯ ತಂಡಗಳು ಆರಂಭಿಕ ಪಂದ್ಯಗಳಲ್ಲಿ ಗೆದ್ದಿದ್ದು, ಸತತ 2ನೇ ಗೆಲುವಿಗೆ ಕಾತರಿಸುತ್ತಿವೆ.

ಶಫೀಖ್‌, ಮಸೂದ್‌ ಶತಕ: ಮೊದಲ ದಿನ ಪಾಕ್‌ 328/4

ಮುಲ್ತಾನ್‌: ನಾಯಕ ಶಾನ್‌ ಮಸೂದ್‌ ಹಾಗೂ ಅಬ್ದುಲ್ಲಾ ಶಫೀಖ್‌ ಶತಕದ ನೆರವಿನಿಂದ ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನ ಪಾಕಿಸ್ತಾನ ಉತ್ತಮ ಮೊತ್ತ ಕಲೆಹಾಕಿದೆ. ತಂಡ ಮೊದಲ ದಿನದಂತ್ಯಕ್ಕೆ 4 ವಿಕೆಟ್‌ಗೆ 328 ರನ್‌ ಕಲೆಹಾಕಿತು. 8 ರನ್‌ಗೆ ಮೊದಲ ವಿಕೆಟ್‌ ಕಳೆದುಕೊಂಡರೂ, 2ನೇ ವಿಕೆಟ್‌ಗೆ ಶಫೀಖ್‌-ಮಸೂದ್‌ 253 ರನ್ ಜೊತೆಯಾಟವಾಡಿದರು. ಮಸೂದ್‌ 177 ಎಸೆತಗಳಲ್ಲಿ 151 ರನ್‌, ಶಫೀಖ್‌ 184 ಎಸೆತಗಳಲ್ಲಿ 102 ರನ್‌ ಸಿಡಿಸಿದರು. ಬಾಬರ್‌ ಆಜಂ 30ಕ್ಕೆ ವಿಕೆಟ್‌ ಒಪ್ಪಿಸಿದ್ದು, ಸೌದ್‌ ಶಕೀಲ್‌(ಔಟಾಗದೆ 35) 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಗಸ್‌ ಆಟ್ಕಿನ್ಸನ್‌ 2 ವಿಕೆಟ್‌ ಕಿತ್ತರು.

click me!