ಕಠಿಣ ಪ್ರಯತ್ನ, ಶ್ರದ್ಧೆಯಿದ್ದರೂ ಯಾವುದೂ ಅಸಾಧ್ಯವಲ್ಲ ಎನ್ನುವ ಮತ್ತೊಂದು ಉದಾಹರಣೆಗೆ ಪ್ರಿಯಂ ಗರ್ಗ್ ಸಾಕ್ಷಿಯಾಗಿದ್ದಾರೆ. ಇದೀಗ ಪ್ರಿಯಂ ಗರ್ಗ್ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಕಡುಬಡತನದಲ್ಲಿ ಅಳಸಿದ ಗರ್ಗ್ ಬಗೆಗಿನ ಸ್ಫೂರ್ತಿದಾಯಕ ಕಥೆ ಇಲ್ಲಿದೆ ನೋಡಿ..
ಲಖನೌ[ಡಿ.04]: ಕ್ರಿಕೆಟ್ ಕಿಟ್ ಖರೀದಿಸಲು ಸಹ ಹಣವಿಲ್ಲದ ಕುಟುಂಬದ ಬಾಲಕನೊಬ್ಬ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾನೆ. ಸೋಮವಾರ ಬಿಸಿಸಿಐ, 2020ರ ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಿತು. ಉತ್ತರ ಪ್ರದೇಶದ ಪ್ರಿಯಂ ಗರ್ಗ್‌ರನ್ನು ನಾಯಕನನ್ನಾಗಿ ಹೆಸರಿಸಿತು.
ಅಂಡರ್ 19 ವಿಶ್ವಕಪ್: ಭಾರತ ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ!
undefined
ಕಳೆದ ರಣಜಿ ಋುತುವಿನಲ್ಲಿ ಉತ್ತರ ಪ್ರದೇಶ ಪರ ಗರಿಷ್ಠ ರನ್ ಕಲೆಹಾಕಿದ್ದ ಪ್ರಿಯಂ, ಭಾರತೀಯ ಕ್ರಿಕೆಟ್‌ನಲ್ಲಿ ಹೆಚ್ಚಾಗಿ ಸುದ್ದಿಯೇನು ಆಗಿರಲಿಲ್ಲ. ಆದರೆ ವಿಶ್ವಕಪ್ ತಂಡದ ನಾಯಕನಾಗುತ್ತಿದ್ದಂತೆ ಅವರ ಕ್ರಿಕೆಟ್ ಬದುಕಿನ ಹಲವು ರೋಚಕ ಕಥೆಗಳು ಹೊರಬೀಳುತ್ತಿವೆ. ಅವು ಹಲವು ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಲಿದೆ.
IPL ಹರಾಜಿನಿಂದ ಹಿಂದೆ ಸರಿದ RCB ಮಾಜಿ ವೇಗಿ!
ಪ್ರಿಯಂ ಮೀರಠ್ ಸಮೀಪದ ಕ್ವಿಲಾ ಪರೀಕ್ಷಿತ್ಗಢ ಎಂಬ ಊರಿನವರು. 6ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಬ್ಯಾಟ್ ಹಾಗೂ ಬಾಲ್ ಹಿಡಿದ ಪ್ರಿಯಂರ ತಂದೆ ಶಾಲಾ ವಾಹನ ಚಾಲಕ. ‘ನನ್ನ ತಂದೆ ನರೇಶ್ ಗರ್ಗ್ ಶಾಲಾ ವಾಹನ ಚಲಾಯಿಸುತ್ತಾರೆ. ಜೀವನ ನಿರ್ವಹಣೆಗಾಗಿ ಹಾಲು ಮಾರುತ್ತಾರೆ. ನನಗೆ ಒಬ್ಬ ಅಣ್ಣ ಹಾಗೂ ಮೂವರು ಅಕ್ಕಂದಿರಿದ್ದಾರೆ. ಕುಟುಂಬದಲ್ಲೇ ನಾನೇ ಕಿರಿಯ. ನಮ್ಮ ದೊಡ್ಡ ಕುಟುಂಬವನ್ನು ನಿಭಾಯಿಸಲು ಹಾಗೂ ನನ್ನ ಕ್ರಿಕೆಟ್ ವೃತ್ತಿಬದುಕಿಗೆ ನೆರವಾಗಲು ತಂದೆ ಬಳಿ ಹಣವಿರಲಿಲ್ಲ. ಆದರೆ ಕ್ರಿಕೆಟ್ ಮೇಲೆ ನನ್ನಗಿರುವ ಪ್ರೀತಿ ಹಾಗೂ ಶ್ರದ್ಧೆಯನ್ನು ನೋಡಿ, ಸ್ನೇಹಿತರಿಂದ ಸಾಲ ಪಡೆದು ನನಗೆ ಕ್ರಿಕೆಟ್ ಕಿಟ್ ಕೊಡಿಸಿದರು ಕೋಚಿಂಗ್‌ಗೂ ಸೇರಿಸಿದರು. ನನ್ನ ತಂದೆಯ ಪರಿಶ್ರಮದಿಂದಾಗಿ ನಾನು ಅಂಡರ್-19 ತಂಡದ ನಾಯಕನಾಗಿದ್ದೇನೆ’ ಎಂದು ಪ್ರಿಯಂ ಹೇಳಿದ್ದಾರೆ.
ಅಂಡರ್-19 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ಯಾರಿಗೆಲ್ಲ ಚಾನ್ಸ್..?
2011ರಲ್ಲಿ ತಾಯಿಯನ್ನು ಕಳೆದುಕೊಂಡ ಪ್ರಿಯಂ, ಮಾನಸಿಕ ಒತ್ತಡಗಳನ್ನು ಮೀರಿ ಕ್ರಿಕೆಟ್‌ನತ್ತ ಗಮನ ಹರಿಸಲು ಹೆಚ್ಚಿನ ಶ್ರಮ ವಹಿಸಿದ್ದಾಗಿ ಹೇಳಿದ್ದಾರೆ. 2018ರ ರಣಜಿ ಟ್ರೋಫಿಯಲ್ಲಿ ಪದಾರ್ಪಣಾ ಪಂದ್ಯದಲ್ಲೇ ಶತಕ ಬಾರಿಸಿದ್ದ ಪ್ರಿಯಂ, ಲಿಸ್ಟ್ ‘ಎ’ (ಏಕದಿನ) ಮಾದರಿಯಲ್ಲೂ ಶತಕ ಬಾರಿಸಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಆಗಿರುವ ಪ್ರಿಯಂ ಇತ್ತೀಚೆಗೆ ನಡೆದ ದೇವದರ್ ಟ್ರೋಫಿ ಟೂರ್ನಿಯಲ್ಲಿ ಭಾರತ ‘ಸಿ’ ತಂಡದಲ್ಲಿದ್ದರು. ‘ಶಾಲೆಗೆ ಹೋಗುತ್ತಿದ್ದ ಸಮಯದಲ್ಲೂ ದಿನಕ್ಕೆ 7ರಿಂದ 8 ಗಂಟೆ ಅಭ್ಯಾಸ ನಡೆಸುತ್ತಿದ್ದೆ. ನನ್ನ ಕೋಚ್ ಸಂಜಯ್ ರಸ್ತೋಗಿ ಹಾಗೂ ತಂದೆಯ ನೆರವಿನಿಂದ 2018ರಲ್ಲಿ ಉತ್ತರ ಪ್ರದೇಶ ರಣಜಿ ತಂಡಕ್ಕೆ ಆಯ್ಕೆಯಾದೆ’ ಎಂದು ಪ್ರಿಯಂ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಭುವಿ, ರೈನಾ ನೆರವು
ಉತ್ತರ ಪ್ರದೇಶದ ತಾರಾ ಆಟಗಾರರಾದ ಭುವನೇಶ್ವರ್ ಕುಮಾರ್ ಹಾಗೂ ಸುರೇಶ್ ರೈನಾ ಸಹ ಪ್ರಿಯಂ ಕ್ರಿಕೆಟ್ ಪಯಣದಲ್ಲಿ ನೆರವಾಗಿದ್ದಾರೆ. ಭುವನೇಶ್ವರ್ರ ಬಾಲ್ಯದ ಕೋಚ್ ನಡೆಸುವ ಅಕಾಡೆಮಿಯಲ್ಲೇ ಪ್ರಿಯಂ ಸಹ ತರಬೇತಿ ಪಡೆಯುತ್ತಿದ್ದರು. ಪ್ರಿಯಂಗೆ 15 ವರ್ಷ ವಯಸ್ಸಿದ್ದಾಗ ಒಮ್ಮೆ ಭುವನೇಶ್ವರ್ ಬೌಲ್ ಮಾಡುವಾಗ ಕ್ರೀಸ್‌ನಿಂದ ಸ್ವಲ್ಪ ಮುಂದೆ ನಿಂತು ಬ್ಯಾಟ್ ಮಾಡುತ್ತಿದ್ದರು. ಇದನ್ನು ಗಮನಿಸಿದ ಕೋಚ್ ಸಂಜಯ್ ಕಾರಣ ಕೇಳಿದಾಗ, ಭುವನೇಶ್ವರ್ರ ಸ್ವಿಂಗ್ ಬೌಲಿಂಗ್ ಎದುರಿಸಲು ಕ್ರೀಸ್‌ನಿಂದ ಮುಂದೆ ನಿಂತು ಆಡುತ್ತಿರುವುದಾಗಿ ಹೇಳಿದ್ದರು. ಚಿಕ್ಕ ವಯಸ್ಸಿನಲ್ಲೇ ಬ್ಯಾಟಿಂಗ್‌ನ ತಾಂತ್ರಿಕ ಅಂಶಗಳನ್ನು ತಿಳಿದುಕೊಂಡಿದ್ದ ಪ್ರಿಯಂ ಬಗ್ಗೆ ಭುವನೇಶ್ವರ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಿಡುವಿನ ಸಮಯದಲ್ಲಿ ಅಕಾಡೆಮಿಯ ನೆಟ್ಸ್‌ನಲ್ಲಿ ಪ್ರಿಯಂ ಜತೆ ಭುವನೇಶ್ವರ್ ಸಹ ಅಭ್ಯಾಸ ನಡೆಸುತ್ತಾರೆ ಎಂದು ಕೋಚ್ ಸಂಜಯ್ ಹೇಳಿದ್ದಾರೆ. ಕಳೆದ ರಣಜಿ ಋುತುವಿನಲ್ಲಿ ಉತ್ತರ ಪ್ರದೇಶ ತಂಡದ ಪರ ಆಡುವಾಗ ಸುರೇಶ್ ರೈನಾ, ಪ್ರಿಯಂ ಜತೆ ಹೆಚ್ಚಿನ ಸಮಯ ಕಳೆದು ಕೆಲ ಮಹತ್ವದ ಸಲಹೆಗಳನ್ನು ನೀಡಿದ್ದರು. ಈಗಲೂ ಬ್ಯಾಟಿಂಗ್ ಸಲಹೆಗಳಿಗೆ ರೈನಾರನ್ನು ಸಂಪರ್ಕಿಸುವುದಾಗಿ ಪ್ರಿಯಂ ಹೇಳಿಕೊಂಡಿದ್ದಾರೆ.