
ನವದೆಹಲಿ(ಆ.04): ಭಾರತೀಯ ಕ್ರಿಕೆಟ್‌ನಲ್ಲಿ ವಯೋ ವಂಚನೆ ಬಿಸಿಸಿಐ ಹೊಸ ಯೋಜನೆ ರೂಪಿಸಿದೆ.
2020-21ರ ಋುತುವಿನಿಂದ ವಯೋ ವಂಚನೆ ಪ್ರಕರಣಗಳಲ್ಲಿ ಸಿಕ್ಕಿ ಬೀಳುವ ಆಟಗಾರರನ್ನು 2 ವರ್ಷ ನಿಷೇಧಕ್ಕೆ ಗುರಿಪಡಿಸಲು ನಿರ್ಧರಿಸಿರುವ ಕ್ರಿಕೆಟ್ ಮಂಡಳಿ, ಅಂತಹ ಆಟಗಾರರಿಗೆ ಯಾವುದೇ ವಯೋಮಿತಿಯ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದೇ ವೇಳೆ ಈ ಹಿಂದೆ ಅಕ್ರಮ ದಾಖಲೆ ನೀಡಿ ಟೂರ್ನಿಗಳಲ್ಲಿ ಆಡಿದ್ದ ಆಟಗಾರರಿಗೆ ತಪ್ಪೊಪ್ಪಿಕೊಳ್ಳಲು ಬಿಸಿಸಿಐ ಅವಕಾಶ ಕಲ್ಪಿಸಿದೆ. ಸೆ.15ರೊಳಗೆ ಪತ್ರ/ಇಮೇಲ್ ಮೂಲಕ ಅಕ್ರಮದ ಬಗ್ಗೆ ತಿಳಿಸಿದರೆ ಅವರ ವಿರುದ್ಧ ಕ್ರಮಕೈಗೊಳ್ಳುವುದಿಲ್ಲ, ಮಾಹಿತಿ ನೀಡದೆ ಭವಿಷ್ಯದಲ್ಲಿ ಸಿಕ್ಕಿ ಬಿದ್ದರೆ ನಿಷೇಧಕ್ಕೆ ಒಳಪಡಿಸುವುದಾಗಿ ಎಚ್ಚರಿಸಿದೆ.
ಈ ನಿರ್ಧಾರದಿಂದ ಅಂಡರ್ 16 ಕ್ರಿಕೆಟ್ ಟೂರ್ನಮೆಂಟ್‌ಗಳಲ್ಲಿ 14ರಿಂದ 16 ವರ್ಷದವರನ್ನು ಮಾತ್ರ ಪರಿಗಣಿಸಲಾಗುವುದು. ವಯೋಮಿತಿ ಸುಳ್ಳು ಹೇಳಿ ವಂಚನೆ ಮಾಡಿ ಮುಂದೆ ಸಿಕ್ಕಿಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಎಚ್ಚರಿಕೆಯನ್ನು ಬಿಸಿಸಿಐ ರವಾಸಿದೆ. ಈ ವಿಚಾರವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ನ್ಯಾಷನಲ್ ಕ್ರಿಕೆಟ್ ಅಕಾಡಮಿಯ ಮುಖ್ಯಸ್ಥ ರಾಹುಲ್ ದ್ರಾವಿಡ್ ಗಂಬೀರವಾಗಿ ಪರಿಗಣಿಸಿದ್ದಾರೆ.
ದೇಸಿ ಕ್ರಿಕೆಟ್: ಬಿಸಿಸಿಐನಿಂದ 100 ಪುಟ ಮಾರ್ಗಸೂಚಿ
ಇನ್ನು ವಯಸ್ಸಿನ ವಂಚನೆ ಬಗ್ಗೆ ಮಾಹಿತಿ ಬಿಚ್ಚಿಡಲು ಬಿಸಿಸಿಐ 24*7 ಹೆಲ್ಪ್ ಲೈನ್ ತೆರೆಯುವ ಮೂಲಕ ಒಂದು ವೇದಿಕೆ ಒದಗಿಸಿದೆ. ಸುಳ್ಳು ವಯಸ್ಸಿನ ಪ್ರಮಾಣ ಪತ್ರ ನೀಡಿದ ಆಟಗಾರರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಸ್ವಯಂ ಪ್ರೇರಿತವಾಗಿ ತಪ್ಪೊಪ್ಪಿಕೊಂಡು ಸರಿಯಾದ ಮಾಹಿತಿ ಒದಗಿಸಿ ಎಂದು ರಾಹುಲ್ ದ್ರಾವಿಡ್ ಮನವಿ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.