ಇದು ಬೆಲೆ ಕಟ್ಟಲಾಗದ ಉಡುಗೊರೆ; ಪತ್ನಿಗೆ ಧನ್ಯವಾದ ಹೇಳಿದ ಹಾರ್ದಿಕ್ ಪಾಂಡ್ಯ!

Published : Aug 03, 2020, 07:44 PM IST
ಇದು ಬೆಲೆ ಕಟ್ಟಲಾಗದ ಉಡುಗೊರೆ; ಪತ್ನಿಗೆ ಧನ್ಯವಾದ ಹೇಳಿದ ಹಾರ್ದಿಕ್ ಪಾಂಡ್ಯ!

ಸಾರಾಂಶ

ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಂದೆಯಾದ ಸಂಭ್ರಮದಲ್ಲಿದ್ದಾರೆ. ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಇದರ ಜೊತೆಗೆ ಪತ್ನಿ ನತಾಶ ಸ್ಟಾಂಕೋವಿಚ್‌ಗೆ ಬೆಲೆ ಕಟ್ಟಲಾಗದ ಉಡುಗೊರೆ ನೀಡಿದ್ದ ಧನ್ಯವಾದ ಹೇಳಿದ್ದಾರೆ.

ಸೂರತ್(ಆ.03):  ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪತ್ನಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಹಾಗೂ ನಟಿ ನತಾಶ ಸ್ಟಾಂಕೋವಿಚ್ ಸಂಭ್ರಮ ಇಮ್ಮಡಿಯಾಗಿದೆ. ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ನತಾಶ ಇದೀಗ ಸುಂದರ ಕುಟಂಬದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪಾಂಡ್ಯ ಮಗುವಿನ್ನು ಎತ್ತಿಕೊಂಡಿದ್ದರೆ, ನತಾಶ ಹೂಗುಚ್ಚ ಹಿಡಿದಿರುವ ಫೋಟೋ ವೈರಲ್ ಆಗಿದೆ.

 

ತಂದೆಯಾದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ!

ನತಾಶ ಫೋಟೋ ಹಂಚಿಕೊಂಡ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಪ್ರತಿಯಾಗಿ ಮತ್ತೊಂದು ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ ಬೆಲೆ ಕಟ್ಟಲಾಗದ ಉಡುಗೊರೆ ನೀಡಿದ್ದ ಧನ್ಯವಾದ ಹೇಳಿದ್ದಾರೆ. 

ಜುಲೈ 30 ರಂದು ಹಾರ್ದಿಕ್ ಪಾಂಡ್ಯ ತಂದೆಯಾಗಿರುವ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಮ್ಮ ಬುದುಕಿನ ಪಯಣದಲ್ಲಿ ಮುದ್ದಾದ ಗಂಡು ಮಗುವಿನ ಆಗಮನವಾಗಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದರು. 

ಕೊರೋನಾ ವೈರಸ್ ಲಾಕ್‌ಡೌನ್ ವೇಳೆ ಹಾರ್ದಿಕ್ ಪಾಂಡ್ಯ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಮೇ ತಿಂಗಳಲ್ಲಿ ಪಾಂಡ್ಯ ನಮ್ಮ ಕುಟುಂಬದ ಕುಡಿಯನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ ಎಂದಿದ್ದರು. ಬಳಿಕ ಪ್ರೆಗ್ನೆಸಿ ಫೋಟೋ ಶೂಟ್ ಸೇರಿದಂತೆ ಹಲವು ಫೋಟೋಗಳನ್ನು ಪಾಂಡ್ಯ ರಿವೀಲ್ ಮಾಡಿದ್ದರು.

2020ರ ಹೊಸ ವರ್ಷದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಸ್ಟಾಂಕೋವಿಚ್ ದಿಢೀರ್ ಎಂಗೇಜ್ಮೆಂಟ್ ಮಾಡಿಕೊಂಡು ಅಚ್ಚರಿ ನೀಡಿದ್ದರು. ದುಬೈನಲ್ಲಿ ಇವರಿಬ್ಬರು ನಿಶ್ಚಿತಾರ್ಥ್ ಮಾಡಿಕೊಂಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐರ್ಲೆಂಡ್ ಎದುರಿನ ಸೋಲಿನ ಬೆನ್ನಲ್ಲೇ ಎರಡನೇ ಮ್ಯಾಚ್‌ಗೆ 3 ಬದಲಾವಣೆ ಫಿಕ್ಸ್..! ವೈಭವ್ ಸೂರ್ಯವಂಶಿಗೆ ಸಿಗುತ್ತಾ ಚಾನ್ಸ್?
ಕ್ರಿಕೆಟ್‌ ಬಿಟ್ಟು ಬೇಸ್‌ಬಾಲ್‌ ಪ್ಲೇಯರ್‌ ಅದ ಏಕದಿನ ವಿಶ್ವಕಪ್‌ ವಿಜೇತ IPL ಆಟಗಾರ!