ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಗೆ ದಿನಗಣನೆ
ಚೇತೇಶ್ವರ್ ಪೂಜಾರ ಬದಲಿಗೆ ಕಣಕ್ಕಿಳಿಯಲು ಪ್ರತಿಭಾನ್ವಿತ ಆಟಗಾರ ರೆಡಿ
ವಿರಾಟ್ ಕೊಹ್ಲಿ ಬಳಿಕ ನಂ.3 ಸ್ಥಾನ ಭದ್ರಪಡಿಸಿಕೊಳ್ಳಲು ಗಿಲ್ ಸಿದ್ದತೆ?
ಬೆಂಗಳೂರು(ಜು.08): ಕ್ರಿಕೆಟ್ ತಂಡದಲ್ಲಿ ನಂಬರ್ 3 ಸ್ಲಾಟ್ ಬಹಳ ಮಹತ್ವ ಪಡೆದಿರುತ್ತೆ. ಓಪನರ್ಸ್ ಫಸ್ಟ್ ಓವರ್ನಲ್ಲೇ ಔಟಾದ್ರೆ ಆಗ ಆತನೇ ಓಪನರ್. ಮಿಡಲ್ ಓವರ್ನಲ್ಲಿ ಔಟಾದ್ರೆ ಆಗ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರ್ತಾನೆ. ಇಡೀ ತಂಡದ ಬಲವೇ 3ನೇ ಕ್ರಮಾಂಕದ ಬ್ಯಾಟರ್ ಮೇಲೆ ಇರುತ್ತೆ. ಈತನ ಆಟದ ಮೇಲೆಯೂ ಬಹುತೇಕ ಫಲಿತಾಂಶ ಡಿಸೈಡ್ ಆಗೋದು. ರಾಹುಲ್ ದ್ರಾವಿಡ್ ದಶಕಗಳ ಕಾಲ ಟೆಸ್ಟ್ ಮತ್ತು ಒನ್ಡೇಯಲ್ಲಿ ನಂಬರ್ 3 ಸ್ಲಾಟ್ ಆಕ್ರಮಿಸಿಕೊಂಡಿದ್ದರು. ಆದ್ರೆ ಅವರ ನಿವೃತ್ತಿ ಬಳಿಕ ಟೆಸ್ಟ್ನಲ್ಲಿ ಆ ಸ್ಲಾಟ್ ಚೇತೇಶ್ವರ್ ಪೂಜಾರ ಪಾಲಾಯ್ತು. ಒನ್ಡೇಯಲ್ಲಿ ಗೌತಮ್ ಗಂಭೀರ್ ಆಕ್ರಮಿಸಿಕೊಂಡು ಈಗ ವಿರಾಟ್ ಕೊಹ್ಲಿ ಆಡ್ತಿದ್ದಾರೆ.
ಚೇತೇಶ್ವರ್ ಪೂಜಾರ ಭಾರತ ಟೆಸ್ಟ್ ತಂಡದಿಂದ ಡ್ರಾಪ್ ಆಗಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರ ಸ್ಥಾನದಲ್ಲಿ ಆಡಲು ಯಶಸ್ವಿ ಜೈಸ್ವಾಲ್ ಮತ್ತು ಋತುರಾಜ್ ಗಾಯಕ್ವಾಡ್ ಫೈಟ್ ನಡೆಸ್ತಿದ್ದಾರೆ. ಇವರಿಬ್ಬರಲ್ಲಿ ಒಬ್ಬರು ಪೂಜಾರ ಬದಲಿಗೆ ಆಡ್ತಾರೆ. ಆದ್ರೆ ನಂಬರ್ 3 ಸ್ಲಾಟ್ನಲ್ಲಿ ಆಡಲ್ಲ. ಓಪನರ್ ಆಗಿ ಆಡ್ತಾರೆ. ಈಗ ಅವರ ನಡುವೆ ಫೈಟ್ ಬಿದ್ದಿರುವುದು ಅಷ್ಟೇ. ಆರಂಭಿಕ ಸ್ಥಾನಕ್ಕೆ. ಹಾಗಾದ್ರೆ ವಿಂಡೀಸ್ ಸರಣಿಯಲ್ಲಿ ನಂಬರ್ 3 ಸ್ಲಾಟ್ನಲ್ಲಿ ಆಡೋರು ಯಾರು ಗೊತ್ತಾ..? ಆತನೇ ಪಂಜಾಬ್ ಪುತ್ತರ್ ಶುಭ್‌ಮನ್ ಗಿಲ್.
undefined
ಗಿಲ್ಗೆ ನಂ.3 ಸ್ಲಾಟ್ ಫಿಕ್ಸ್ ಮಾಡಲು ಬಿಸಿಸಿಐ ಪ್ಲಾನ್..!
ಶುಭ್‌ಮನ್ ಗಿಲ್ ಸದ್ಯ ಮೂರು ಮಾದರಿ ತಂಡದಲ್ಲಿ ಓಪನಿಂಗ್ ಬ್ಯಾಟರ್. ಅಂಡರ್-19 ಕ್ರಿಕೆಟ್ನಿಂದಲೂ ಗಿಲ್ ನಂಬರ್ 3 ಸ್ಲಾಟ್ನಲ್ಲಿ ಆಡುತ್ತಿದ್ದರೂ ಟೀಂ ಇಂಡಿಯಾದಲ್ಲಿ ಮಾತ್ರ ಅವರು ಓಪನಿಂಗ್ ಬ್ಯಾಟ್ಸ್ಮನ್. ಆರಂಭಿಕನಾಗಿ ಮೂರು ಫಾರ್ಮ್ಯಾಟ್ನಲ್ಲೂ ಸಕ್ಸಸ್ ಆಗಿದ್ದಾರೆ. ಆಡಿರೋ 46 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಓಪನರ್ ಆಗಿ ಮೂರು ಮಾದರಿಯಲ್ಲೂ ಶತಕ ಬಾರಿಸಿದ್ದಾರೆ. ಸದ್ಯ ಅವರ ಖಾತೆಯಲ್ಲಿ 7 ಇಂಟರ್ ನ್ಯಾಷನಲ್ ಸೆಂಚುರಿಗಳಿವೆ.
ಕಂಫರ್ಟ್ ಝೋನ್ನಿಂದ ಹೊರ ಬಂದು ಅಬ್ಬರಿಸಲು ವಿರಾಟ್ ಕೊಹ್ಲಿ ರೆಡಿ..!
ಕೊಹ್ಲಿಗೆ ಪರ್ಯಾಯವಾಗಿ ಗಿಲ್ ಬೆಳೆಸುತ್ತಿದೆ ಬಿಸಿಸಿಐ
ಆರಂಭಿಕನಾಗಿ ಇಷ್ಟೆಲ್ಲಾ ಸಾಧನೆ ಮಾಡಿದ್ರೂ ಗಿಲ್ ಅವರನ್ನ ನಂಬರ್ 3 ಸ್ಲಾಟ್ನಲ್ಲಿ ಆಡಿಸಲು ಬಿಸಿಸಿಐ ಪ್ಲಾನ್ ಮಾಡುತ್ತಿದೆ. ಯಾಕೆ ಗೊತ್ತಾ..? ವಿರಾಟ್ ಕೊಹ್ಲಿ ನಂತರ ಮತ್ತೊಬ್ಬ ಸ್ಟಾರ್ ಆಟಗಾರರನ್ನ ಹುಟ್ಟುಹಾಕಲು. ಸದ್ಯ ಟೀಂ ಇಂಡಿಯಾದಲ್ಲಿರುವ ಯುವ ಆಟಗಾರರ ಪೈಕಿ ಗಿಲ್ ಮಾತ್ರ ಮೂರು ಮಾದರಿ ತಂಡದಲ್ಲಿ ಸ್ಥಾನ ಪಡೆದು ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ವಿರಾಟ್ ಕೊಹ್ಲಿ ಸ್ಥಾನವನ್ನ ತುಂಬಬಲ್ಲ ಸೂಕ್ತ ವ್ಯಕ್ತಿ ಅಂದ್ರೆ ಅದು ಗಿಲ್ ಮಾತ್ರ. ಕೇವಲ ಕ್ರಿಕೆಟ್ನಲ್ಲಿ ಮಾತ್ರವಲ್ಲ, ಬಿಸಿಸಿಐಗೆ ಆದಾಯ ತಂದುಕೊಡೋದ್ರಲ್ಲಿ, ಜಾಹೀರಾತುದಾರರನ್ನ ತಮ್ಮತ್ತ ಸೆಳೆಯುವಲ್ಲೂ ಅವರು ಯಶಸ್ವಿಯಾಗಿದ್ದಾರೆ. ಹಾಗಾಗಿ ನಂಬರ್ 3 ಸ್ಲಾಟ್ನಲ್ಲಿ ಶುಭ್‌ಮನ್ ಗಿಲ್ ಆಡಿದ್ರೆ ತಂಡಕ್ಕೆ ಅನುಕೂಲವಾಗುತ್ತೆ ಅನ್ನೋ ಉದ್ದೇಶದಿಂದ ಆರಂಭಿಕ ಸ್ಥಾನದಿಂದ 3ನೇ ಸ್ಥಾನಕ್ಕೆ ಇಳಿಸಲು ಪ್ಲಾನ್ ಮಾಡಿದೆ.
MS Dhoni ಕೂಲ್ ಕ್ಯಾಪ್ಟನ್ ಅಲ್ವೇ ಅಲ್ಲ..! ಧೋನಿಯ ಇನ್ನೊಂದು ಮುಖ ಅನಾವರಣ ಮಾಡಿದ ಟೀಂ ಇಂಡಿಯಾ ಸ್ಟಾರ್ ಆಟಗಾರ
ನಂ. 3 ಸ್ಲಾಟ್ನಲ್ಲಿ ಆಡಲು ಗಿಲ್ ಒಲವು
ಸದ್ಯಕ್ಕೆ ಟೆಸ್ಟ್ನಲ್ಲಿ ಮಾತ್ರ ನಂಬರ್ 3 ಸ್ಲಾಟ್ ಅನ್ನ ಶುಭ್‌ಮನ್ ಗಿಲ್ಗೆ ಕೊಡಲು ಮುಂದಾಗಿದೆ. ಒನ್ಡೇಯಲ್ಲಿ ಕೊಹ್ಲಿ ಇನ್ನೂ ಆಡುತ್ತಿದ್ದಾರೆ. ಟಿ20 ಬಗ್ಗೆ ಈ ವರ್ಷದ ಕೊನೆಯಲ್ಲಿ ಗೊತ್ತಾಗಲಿದೆ. ಟೆಸ್ಟ್ನಲ್ಲಿ ಹೇಗಿದ್ದರು ಅವರು ನಂಬರ್ 4 ಸ್ಲಾಟ್ನಲ್ಲಿ ಆಡ್ತಿದ್ದಾರೆ. ವಿರಾಟ್ ಕೊಹ್ಲಿ ಆಡುವವರೆಗೂ ಒನ್ಡೇ-ಟಿ20ಯಲ್ಲಿ ಅವರೇ ನಂಬರ್ 3 ಬ್ಯಾಟರ್. ಇನ್ನು ನಂಬರ್ 3 ಸ್ಲಾಟ್ನಲ್ಲಿ ಆಡಲು ಗಿಲ್ ಸಹ ಇಚ್ಚಿಸಿದ್ದಾರೆ ಎನ್ನಲಾಗಿದೆ. ನಂಬರ್ 3 ಸ್ಲಾಟ್ನಲ್ಲಿ ಆಡುತ್ತೇನೆ ಎಂದು ಕೋಚ್ ರಾಹುಲ್ ದ್ರಾವಿಡ್ ಬಳಿ ಗಿಲ್ ಹೇಳಿಕೊಂಡಿದ್ದಾರೆ ಕೂಡ. ಹೀಗಾದಲ್ಲಿ ಚೇತೇಶ್ವರ್ ಪೂಜಾರ ಮತ್ತೆ ಟೆಸ್ಟ್ ಟೀಂಗೆ ಕಮ್‌ಬ್ಯಾಕ್ ಮಾಡೋ ಕನಸು ನುಚ್ಚು ನೂರಾಗಲಿದೆ. ಕಿಂಗ್ ಕೊಹ್ಲಿ ಜಾಗದಲ್ಲಿ ಪ್ರಿನ್ಸ್ ಗಿಲ್ ಉಗಮವಾಗಲಿದೆ.