
ಕೊಲಂಬೊ(ಏ.11): ಈ ವರ್ಷ ಆಗಸ್ಟ್ 27ರಿಂದ ಸೆಪ್ಟೆಂಬರ್ 11ರ ವರೆಗೂ ಶ್ರೀಲಂಕಾದಲ್ಲಿ ನಡೆಯಬೇಕಿರುವ ಏಷ್ಯಾಕಪ್ ಟಿ20 ಟೂರ್ನಿಯು (Asia Cup 2022) ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಶ್ರೀಲಂಕಾದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ ಪಂದ್ಯಾವಳಿಯನ್ನು ಆಯೋಜಿಸುವ ಪರಿಸ್ಥಿತಿಯಲ್ಲಿ ದ್ವೀಪ ರಾಷ್ಟ್ರ ಇಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಸಂಬಂಧ ಏಷ್ಯನ್ ಕ್ರಿಕೆಟ್ ಸಮಿತಿ(ಎಸಿಸಿ) (Asian Cricket Council) ಸದ್ಯದಲ್ಲೇ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. 15ನೇ ಆವೃತ್ತಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಟಿ20 ಮಾದರಿಯಲ್ಲಿ ನಡೆಯಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತೀರ್ಮಾನಿಸಿತ್ತು. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು, ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಟಿ20 ಮಾದರಿಯಲ್ಲಿ ನಡೆಸಲು ಆಯೋಜಕರು ತೀರ್ಮಾನಿಸಿದ್ದರು.
2020ರ ಟೂರ್ನಿ ಕೋವಿಡ್‌ನಿಂದ (COVID 19) ಮುಂದೂಡಿಕೆಯಾಗಿತ್ತು. ಬಳಿಕ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಪಂದ್ಯಾವಳಿಯನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಗಿತ್ತು. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಟೂರ್ನಿಗೂ ಮುನ್ನ ರಾಜಪಕ್ಸಾ ನೇತೃತ್ವದ ಶ್ರೀಲಂಕಾ ಸರ್ಕಾರವು ಆರ್ಥಿಕ ದಿವಾಳಿತನವಾಗುವತ್ತ ಸಾಗುತ್ತಿದೆ. ಲಂಕಾದಲ್ಲಿ ಜನರು ಜೀವನ ನಡೆಸುವುದು ಕೂಡಾ ದುಸ್ತರ ಎನಿಸಿದೆ. ಲಂಕಾ ಸರ್ಕಾರದ ಬಳಿ ವಿದೇಶಿ ವಿನಿಮಯಕ್ಕೂ ಕೊಡಾ ಕೊರತೆ ಉಂಟಾಗಿದೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಏಷ್ಯಾದ ಆರು ಕ್ರಿಕೆಟ್ ತಂಡಗಳು ಪಾಲ್ಗೊಳ್ಳುತ್ತಿವೆ. ಈಗಾಗಲೇ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹಾಲಿ ಚಾಂಪಿಯನ್ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ತಂಡಗಳು ಅರ್ಹತೆಯಯನ್ನು ಗಿಟ್ಟಿಸಿಕೊಂಡಿವೆ. ಇನ್ನೊಂದು ತಂಡವು ಅಹರ್ತಾ ಸುತ್ತಿನಲ್ಲಿ ವಿಜೇತರಾಗಿ ಪ್ರಧಾನ ಸುತ್ತಿಗೆ ಪ್ರವೇಶ ಪಡೆಯಲಿದೆ. ಅರ್ಹತಾ ಸುತ್ತಿನ ಪಂದ್ಯಗಳು ಆಗಸ್ಟ್ 20ರಿಂದ ಆರಂಭವಾಗಲಿದೆ.
ಈ ಮೊದಲು 2018ರಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ (Team India), ಬಾಂಗ್ಲಾದೇಶ ತಂಡವನ್ನು ಬಗ್ಗುಬಡಿಯುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಏಷ್ಯಾಕಪ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ಕ್ರಿಕೆಟ್ ತಂಡವಾಗಿ ಗುರುತಿಸಿಕೊಂಡಿದೆ.
ಸೈಮಂಡ್ಸ್, ಫ್ರಾಂಕ್ಲಿನ್ ನನ್ನ ಕೈಕಾಲು ಕಟ್ಟಿ ಕೂಡಿಹಾಕಿದ್ದರು..! ಆಘಾತಕಾರಿ ಘಟನೆ ಬಿಚ್ಚಿಟ್ಟ ಚಹಲ್
ಸೋಲಿನ ಸುಳಿಯಲ್ಲಿ ಬಾಂಗ್ಲಾ
ಪೋರ್ಚ್ ಎಲೆಜಿಬೆತ್: 2ನೇ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ಸೋಲಿನ ಸುಳಿಗೆ ಸಿಲುಕಿದ್ದು, ದ.ಆಫ್ರಿಕಾ ಸರಣಿ ಜಯದ ಹೊಸ್ತಿಲಲ್ಲಿದೆ. ಗೆಲುವಿಗೆ 413 ರನ್ ಗುರಿ ಪಡೆದಿರುವ ಬಾಂಗ್ಲಾ 3 ವಿಕೆಟ್‌ಗೆ 27 ರನ್ ಗಳಿಸಿದ್ದು, ಇನ್ನೂ 386 ರನ್ ಬೇಕಿದೆ. ಮೊದಲ ಇನ್ನಿಂಗ್ಸಲ್ಲಿ ದ.ಆಫ್ರಿಕಾದ 453 ರನ್‌ಗೆ ಉತ್ತರವಾಗಿ ಬಾಂಗ್ಲಾ 217 ರನ್‌ಗೆ ಆಲೌಟಾದರೆ, ದ.ಆಫ್ರಿಕಾ 2ನೇ ಇನ್ನಿಂಗ್ಸಲ್ಲಿ 6 ವಿಕೆಟ್‌ಗೆ 176 ರನ್ ಗಳಿಸಿ ಇನ್ನಿಂಗ್‌್ಸ ಡಿಕ್ಲೇರ್ ಮಾಡಿತು.
ಅಶ್ವಿನ್ ರಿಟೈರ್ ಔಟ್: ಐಪಿಎಲ್‌ನಲ್ಲಿ ಇದೇ ಮೊದಲು
ಮುಂಬೈ: ರಾಜಸ್ಥಾನ ತಂಡದ ರವಿಚಂದ್ರನ್ ಅಶ್ವಿನ್ (Ravichandran Ashwin), ಭಾನುವಾರ ಲಖನೌ ವಿರುದ್ಧದ ಪಂದ್ಯದಲ್ಲಿ ರಿಟೈರ್-ಔಟ್ ಆದರು. ಐಪಿಎಲ್‌ನಲ್ಲಿ (IPL 2022) ಬ್ಯಾಟರ್ ಒಬ್ಬ ಈ ರೀತಿ ಸ್ವಯಂ ಪ್ರೇರಣೆ ಯಿಂದ ಔಟಾಗಿ ಹೊರನಡೆದಿದ್ದು ಇದೇ ಮೊದಲು. 6ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿ ದಿದ್ದ ಅಶ್ವಿನ್, 23 ಎಸೆತದಲ್ಲಿ 28 ರನ್ ಗಳಿಸಿ ಇನ್ನಿಂಗ್‌್ಸನ 19ನೇ ಓವರ್‌ನ 2ನೇ ಎಸೆತದಲ್ಲಿ ಹೊರನಡೆದರು. ಫ್ರಾಂಚೈಸಿ ಟಿ20ಯಲ್ಲಿ ರಿಟೈರ್ ಔಟ್ ಆಗಿದ್ದು 2ನೇ ಬಾರಿ. 2019ರ ಬಾಂಗ್ಲಾ ಲೀಗ್‌ನಲ್ಲಿ ಸುನ್ಜುಮುಲ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.