2021ರ ಜೂನ್‌ವರೆಗೂ ಏಷ್ಯಾ​ಕಪ್‌ ಮುಂದೂ​ಡಿ​ಕೆ..! ಐಪಿಎಲ್ ಆಯೋಜನೆಗೆ ಮರುಜೀವ

By Suvarna NewsFirst Published Jul 10, 2020, 7:48 AM IST
Highlights

ನಿರೀಕ್ಷೆಯಂತೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಜೂನ್ 2021ರವರೆಗೆ ಮುಂದೂಡಲ್ಪಟ್ಟಿದೆ. ಗುರುವಾರವಷ್ಟೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಬಗ್ಗೆ ತುಟಿಬಿಚ್ಚಿದ್ದರು. ಇದೀಗ ಎಸಿಬಿ ಅಧಿಕೃತ ಹೇಳಿಕೆ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಜು.10): ಕೊರೋನಾ ಸೋಂಕು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಏಷ್ಯಾ​ಕಪ್‌ ಕ್ರಿಕೆಟ್‌ ಟೂರ್ನಿಯನ್ನು 2021ರ ಜೂನ್‌ವರೆಗೂ ಮುಂದೂ​ಡ​ಲಾ​ಗಿದೆ ಎಂದು ಏಷ್ಯನ್‌ ಕ್ರಿಕೆಟ್‌ ಸಮಿತಿ (ಎ​ಸಿ​ಸಿ) ಗುರುವಾರ ತಿಳಿ​ಸಿದೆ. ಬಿಸಿ​ಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಬುಧ​ವಾರವೇ ಈ ವಿಚಾರವನ್ನು ಬಹಿ​ರಂಗಗೊಳಿ​ಸಿ​ದ್ದರು. 
 
2020ರ ಏಷ್ಯಾಕಪ್ ಆಯೋಜನೆಯ ಆತಿಥ್ಯದ ಹಕ್ಕನ್ನು ಪಾಕಿಸ್ತಾನ ಪಡೆದುಕೊಂಡಿತ್ತು. ಭಾರತ ತಂಡವು ಪಾಕ್‌ಗೆ ಪ್ರಯಾಣ ಬೆಳೆಸುವುದಿಲ್ಲ ಎನ್ನುವುದು ದೃಢಪಟ್ಟ ಬಳಿಕ ಆತಿಥ್ಯದ ಹಕ್ಕನ್ನು ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿತ್ತು.  ಇದೀಗ ಜೂನ್ 2021ರಲ್ಲಿ ಲಂಕಾ ಏಷ್ಯಾಕಪ್ ಆಯೋಜಿಸಿದರೆ, 2022ರ ಏಷ್ಯಾಕಪ್‌ ಆತಿಥ್ಯವನ್ನು ಪಾಕಿಸ್ತಾನ ವಹಿಸಲಿದೆ.

⚠️ After careful consideration and evaluating the impact of the COVID-19 pandemic, the Executive Board of the ACC has decided to postpone the Asia Cup tournament that was scheduled for September 2020.

For more 👉 https://t.co/XBQFh3O1ZO pic.twitter.com/Sdduyzc8mM

— AsianCricketCouncil (@ACCMedia1)

ಈ ವರ್ಷದ ಏಷ್ಯಾಕಪ್‌ ಟಿ20 ರದ್ದು: ಗಂಗೂಲಿ

ಈ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಏಷ್ಯಾಕಪ್‌ ಟಿ20 ಟೂರ್ನಿ ರದ್ದುಗೊಂಡಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಗುರುವಾರ ಘೋಷಿಸಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡುವ ವೇಳೆ ಗಂಗೂಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. 

ಪ್ರಾಯೋಜಕರಿಲ್ಲದ ಪಾಕ್ ಕ್ರಿಕೆಟ್ ತಂಡಕ್ಕೆ ಅಫ್ರಿದಿ ನೆರವು..!

ಟೂರ್ನಿಯನ್ನು ಪಾಕಿಸ್ತಾನ ಆಯೋಜಿಸಬೇಕಿತ್ತು. ಭಾರತ ತಂಡ ಪಾಕ್‌ಗೆ ತೆರಳುವುದಿಲ್ಲ ಎನ್ನುವ ಕಾರಣಕ್ಕೆ ಶ್ರೀಲಂಕಾದಲ್ಲಿ ಟೂರ್ನಿ ನಡೆಸುವ ಬಗ್ಗೆ ಚಿಂತನೆ ಇತ್ತು. ಅಕ್ಟೋಬರ್‌-ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್‌ ಸಹ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದ್ದು, ಪೂರ್ಣ ಪ್ರಮಾಣದ ಐಪಿಎಲ್‌ ಆಯೋಜಿಸಲು ಬಿಸಿಸಿಐಗೆ ಅವಕಾಶ ಸಿಗಲಿದೆ.
 

click me!