ಟೀಂ ಇಂಡಿಯಾ ವಿರಾಟ್ ಕೊಹ್ಲಿ ನಿವಾಸದಿಂದ ಕೇವಲ ಅರ್ಧ ಕಿಲೋ ಮೀಟರ್ ದೂರದಲ್ಲಿರುವ ಶ್ರೇಯಸ್ ಅಯ್ಯರ್ ಅಮ್ಮ ಮಾಡಿಕೊಟ್ಟ ನೀರ್ ದೋಸೆಯನ್ನು ನೀಡಿದ್ದಾರೆ. ಇದರ ಮಧ್ಯೆ ಸ್ಪಿನ್ನರ್ ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ. ಈ ಕುರಿತಾಧ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಜು.09): ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಬಂಧಿಯಾಗಿದ್ದ ಭಾರತೀಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್, 3 ತಿಂಗಳ ಬಳಿಕ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಅದು ಊಟದ ವಿಚಾರಕ್ಕಾಗಿ.
ತಮ್ಮ ನಿವಾಸದಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿರುವ ವಿರಾಟ್‌ಗೆ ಶ್ರೇಯಸ್ ತಮ್ಮ ತಾಯಿ ಮಾಡಿದ ನೀರ್ ದೋಸೆಯನ್ನು ಕೊಟ್ಟಿದ್ದಾರೆ. ನೀರ್ ದೋಸೆ ಸವಿದ ವಿರಾಟ್, ‘ಇತ್ತೀಚಿನ ದಿನಗಳಲ್ಲಿ ಇಷ್ಟು ರುಚಿಯಾದ ದೋಸೆಯನ್ನು ತಿಂದೇ ಇರಲಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ಕೊಹ್ಲಿ ತಮ್ಮ ಮನೆಯಲ್ಲಿ ಮಾಡಿದ ಮಶ್ರೂಮ್ ಬಿರ್ಯಾನಿಯನ್ನು ಶ್ರೇಯಸ್ ಕುಟುಂಬಕ್ಕೆ ನೀಡಿದ್ದಾರೆ.
undefined
A post shared by Virat Kohli (@virat.kohli) on Jul 7, 2020 at 10:10pm PDT
ಈ ಟ್ವೀಟ್ ನೋಡುತ್ತಿದ್ದಂತೆ ಟೀಂ ಇಂಡಿಯಾ ಮಣಿಕಟ್ಟು ಸ್ಪಿನ್ನರ್ ಯುಜುವೇಂದ್ರ ಚಹಲ್ ನಾಯಕ ಕೊಹ್ಲಿಗೆ ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ. ಅಣ್ಣಾ ನಂಗೂ ಬಿರಿಯಾನಿ ಕಳಿಸಿ, ನಾನು ನಿಮ್ಮ ಮನೆಯಿಂದ ಕೇವಲ 1400 ಕಿಲೋ ಮೀಟರ್ ದೂರದಲ್ಲಿದ್ದೇನೆ ಅಷ್ಟೇ ಎಂದು ಕಮೆಂಟ್ ಮಾಡಿದ್ದಾರೆ.
ಇಂಗ್ಲೆಂಡ್-ವಿಂಡೀಸ್ ಮೊದಲ ಟೆಸ್ಟ್‌ಗೆ ಮಳೆ ಕಾಟ!
ಶ್ರೀಲಂಕಾ ವಿರುದ್ಧ 2008ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿರುವ ವಿರಾಟ್ ಕೊಹ್ಲಿ ಅತ್ಯಂತ ಸದೃಢ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 59.33ರ ಸರಾಸರಿಯಲ್ಲಿ 11,867 ರನ್ ಬಾರಿಸಿದ್ದಾರೆ. ಇನ್ನು 86 ಟೆಸ್ಟ್ ಪಂದ್ಯಗಳನ್ನಾಡಿ 27 ಶತಕ ಸಹಿತ 7240 ರನ್ ಚಚ್ಚಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲೂ 50.80 ಸರಾಸರಿಯಲ್ಲಿ 2794 ರನ್ ಸಿಡಿಸಿದ್ದಾರೆ.