ವಿಶ್ವ​ಕಪ್‌ನಲ್ಲಿ ಫಿಕ್ಸಿಂಗ್‌: 6 ಗಂಟೆಗಳ ಕಾಲ ಡಿ ಸಿಲ್ವಾ, ತರಂಗಾ ವಿಚಾರಣೆ

By Suvarna News  |  First Published Jul 2, 2020, 3:46 PM IST

ವಿಶ್ವ​ಕಪ್‌ ತಂಡ​ವನ್ನು ಆಯ್ಕೆ ಮಾಡಿದ್ದ ಪ್ರಧಾನ ಆಯ್ಕೆಗಾರ ಅರ​ವಿಂದ ಡಿ ಸಿಲ್ವಾ ಅವ​ರನ್ನು ಸುದೀರ್ಘ 6 ಗಂಟೆಗಳ ಕಾಲ ವಿಚಾ​ರಣೆ ನಡೆ​ಸಿದೆ. ಇದರ ಬೆನ್ನಲ್ಲೇ ಲಂಕಾ ಆರಂಭಿಕ ಬ್ಯಾಟ್ಸ್‌ಮನ್ ಉಪುಲ್ ತರಂಗಾ ಅವರನ್ನು ವಿಚಾರಣೆ ನಡೆಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಕೊಲಂಬೊ(ಜು.02): ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾ​ನಂದ ಅಲು​ತ್ಗಾ​ಮಗೆ, 2011ರ ಐಸಿಸಿ ಏಕ​ದಿನ ವಿಶ್ವ​ಕಪ್‌ ಫೈನಲ್‌ನಲ್ಲಿ ಫಿಕ್ಸಿಂಗ್‌ ನಡೆ​ದಿದೆ ಎಂದು ಆರೋ​ಪಿ​ಸಿ​ರುವ ಹಿನ್ನೆಲೆಯಲ್ಲಿ ಲಂಕಾ ಪೊಲೀ​ಸರು ತನಿಖೆ ಆರಂಭಿಸಿದ್ದಾರೆ. 

ಮಂಗ​ಳ​ವಾರ ಮಾಜಿ ನಾಯಕ, ವಿಶ್ವ​ಕಪ್‌ ತಂಡ​ವನ್ನು ಆಯ್ಕೆ ಮಾಡಿದ್ದ ಪ್ರಧಾನ ಆಯ್ಕೆಗಾರ ಅರ​ವಿಂದ ಡಿ ಸಿಲ್ವಾ ಅವ​ರನ್ನು ಸುದೀರ್ಘ 6 ಗಂಟೆಗಳ ಕಾಲ ವಿಚಾ​ರಣೆ ನಡೆ​ಸಿದ್ದ ಪೊಲೀ​ಸರು, ಅವರು ನೀಡಿದ ಮಾಹಿತಿಯ ಆಧಾ​ರದ ಮೇಲೆ ಬುಧ​ವಾರ, ವಿಶ್ವ​ಕಪ್‌ ತಂಡ​ದ​ಲ್ಲಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಉಪುಲ್‌ ತರಂಗ ಅವ​ರನ್ನು ವಿವಾರಣೆಗೆ ಕರೆ​ದಿ​ದ್ದರು. 

Latest Videos

undefined

ವಿಶ್ವಕಪ್ ಫೈನಲ್‌ನಲ್ಲಿ 20 ಎಸೆ​ತ​ಗ​ಳಲ್ಲಿ 2 ರನ್‌ ಗಳಿ​ಸಿದ್ದ ತರಂಗರನ್ನು 2 ಗಂಟೆಗೂ ಹೆಚ್ಚು ಕಾಲ ಪೊಲೀ​ಸರು ವಿಚಾ​ರಣೆ ಮಾಡಿ​ದರು. ಇದೇ ವೇಳೆ ವಿಶ್ವ​ಕಪ್‌ ತಂಡದ ನಾಯ​ಕ​ರಾ​ಗಿದ್ದ ಕುಮಾರ ಸಂಗ​ಕ್ಕಾರ ಅವ​ರನ್ನು ಹೇಳಿಕೆ ನೀಡಲು ಬರು​ವಂತೆ ಪೊಲೀ​ಸರು ಸೂಚಿಸಿ​ದ್ದಾರೆ ಎಂದು ಮೂಲ​ಗಳು ತಿಳಿ​ಸಿವೆ.

2011ರ ವಿಶ್ವ​ಕಪ್‌ ಫೈನಲ್‌ನ​ಲ್ಲಿ ಫಿಕ್ಸಿಂಗ್‌; ತನಿಖೆ ಆರಂಭ

2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವು ಭಾರತ ವಿರುದ್ಧ 6 ವಿಕೆಟ್‌ಗಳಿಂದ ಶರಣಾಗಿತ್ತು.  ಇದರೊಂದಿಗೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ 28 ವರ್ಷಗಳ ಬಳಿಕ ವಿಶ್ವಕಪ್ ಎತ್ತಿಹಿಡಿದು ಸಂಭ್ರಮಿಸಿತ್ತು. 

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!