ರವೀಂದ್ರ ಜಡೇಜಾ 21ನೇ ಶತಮಾನದ ಭಾರತದ ಮೌಲ್ಯಯುತ ಕ್ರಿಕೆಟಿಗ..!

Suvarna News   | Asianet News
Published : Jul 02, 2020, 02:11 PM IST
ರವೀಂದ್ರ ಜಡೇಜಾ 21ನೇ ಶತಮಾನದ ಭಾರತದ ಮೌಲ್ಯಯುತ ಕ್ರಿಕೆಟಿಗ..!

ಸಾರಾಂಶ

ಟೀಂ ಇಂಡಿಯಾದ ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ, ರೋಹಿತ್ ಶರ್ಮಾ ಅವರಂತಹ  ದಿಗ್ಗಜ ಕ್ರಿಕೆಟಿಗರನ್ನು ಹಿಂದಿಕ್ಕೆ ಭಾರತದ ವ್ಯಾಲ್ಯೂಯೇಬಲ್ ಕ್ರಿಕೆಟರ್ ಎನ್ನುವ ಗೌರವಕ್ಕೆ ರವೀಂದ್ರ ಜಡೇಜಾ ಪಾತ್ರರಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವ​ದೆ​ಹ​ಲಿ(ಜು.02): ಭಾರತೀಯ ಆಲ್ರೌಂಡರ್‌ ರವೀಂದ್ರ ಜಡೇಜಾ 21ನೇ ಶತಮಾನ​ದಲ್ಲಿ ಭಾರ​ತದ ಅತ್ಯಂತ ಮೌಲ್ಯ​ಯುತ ಕ್ರಿಕೆ​ಟಿಗ ಎಂದು ಪ್ರತಿ​ಷ್ಠಿತ ವಿಸ್ಡನ್‌ ನಿಯ​ತ​ಕಾ​ಲಿಕ ನಡೆ​ಸಿ​ರುವ ಸಮೀಕ್ಷೆಯಲ್ಲಿ ತಿಳಿ​ದು​ಬಂದಿದೆ. 

ಟೀಂ ಇಂಡಿಯಾದ ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ, ರೋಹಿತ್ ಶರ್ಮಾ ಅವರಂತಹ  ದಿಗ್ಗಜ ಕ್ರಿಕೆಟಿಗರನ್ನು ಹಿಂದಿಕ್ಕೆ ಭಾರತದ ವ್ಯಾಲ್ಯೂಯೇಬಲ್ ಕ್ರಿಕೆಟರ್ ಎನ್ನುವ ಗೌರವಕ್ಕೆ ಸೌರಾಷ್ಟ್ರ ಮೂಲದ ಕ್ರಿಕೆಟಿಗ ಭಾಜನರಾಗಿದ್ದಾರೆ. 2009ರಲ್ಲಿ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಜಡ್ಡು, ಇಲ್ಲಿಯವರೆಗೆ 49 ಟೆಸ್ಟ್, 165 ಏಕದಿನ ಹಾಗೂ 49 ಟಿ20 ಪಂದ್ಯಗಳನ್ನಾಡಿದ್ದಾರೆ. 31 ವರ್ಷದ ಜಡೇಜಾ 24.62ರ ಬೌಲಿಂಗ್ ಸರಾಸರಿಯನ್ನು ಹೊಂದಿದ್ದು, ಶೇನ್ ವಾರ್ನ್‌ಗಿಂತ ಉತ್ತಮವಾಗಿದೆ. ಇನ್ನು ಬ್ಯಾಟಿಂಗ್ ಸರಾಸರಿ 35.26 ಹೊಂದಿದ್ದು ಶೇನ್‌ ವಾಟ್ಸನ್‌ಗಿಂತ ಉತ್ತಮವಾಗಿದೆ.  

ಸಾರ್ವಕಾಲಿಕ ಶ್ರೇಷ್ಠ IPL ತಂಡ ಪ್ರಕಟಿಸಿದ ಎಬಿ ಡಿವಿಲಿಯರ್ಸ್..!

ಸಮೀಕ್ಷೆಯಲ್ಲಿ 97.3 ರೇಟಿಂಗ್‌ ಪಡೆದ ಜಡೇಜಾ, ವಿಶ್ವಮಟ್ಟ​ದಲ್ಲಿ 2ನೇ ಅತಿ ಹೆಚ್ಚು ಮೌಲ್ಯ ಹೊಂದಿ​ರುವ ಕ್ರಿಕೆ​ಟಿಗ ಎನಿ​ಸಿ​ಕೊಂಡಿ​ದ್ದಾರೆ. ಶ್ರೀಲಂಕಾದ ದಿಗ್ಗಜ ಸ್ಪಿನ್ನರ್‌ ಮುತ್ತಯ್ಯ ಮುರ​ಳಿ​ಧ​ರನ್‌ಗೆ ಮೊದಲ ಸ್ಥಾನ ಸಿಕ್ಕಿದೆ. ತಂಡದ ಯಶ​ಸ್ಸಿ​ಗೆ ಹಲವು ರೀತಿ​ಗ​ಳಲ್ಲಿ, ಕಠಿಣ ಪರಿ​ಸ್ಥಿ​ತಿ​ಗ​ಳಲ್ಲಿ ನೆರ​ವಾ​ಗಿ​ರುವ ಅಂಕಿ-ಅಂಶಗಳ​ನ್ನಿ​ಟ್ಟು​ಕೊಂಡು ಸಮೀಕ್ಷೆ ನಡೆ​ಲಾ​ಗಿದೆ. ಕ್ರಿಕ್‌ವಿಜ್‌ ಎನ್ನುವ ಸಂಸ್ಥೆ ಸಮೀಕ್ಷೆ ನಡೆ​ಸಲು ಅಂಕಿ-ಅಂಶಗಳನ್ನು ಪೂರೈ​ಸಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!
ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!