ಟೀಂ ಇಂಡಿಯಾ ಲಂಕಾ ಪ್ರವಾಸ; 90 ಕೋಟಿ ರೂ ಗಳಿಸಲಿದೆ ಲಂಕಾ ಕ್ರಿಕೆಟ್ ಮಂಡಳಿ

By Suvarna News  |  First Published Jul 8, 2021, 3:40 PM IST

* ಟೀಂ ಇಂಡಿಯಾ ಲಂಕಾ ಪ್ರವಾಸದಿಂದ ದ್ವೀಪರಾಷ್ಟ್ರಕ್ಕೆ ಭರ್ಜರಿ ಲಾಭ

* ಲಂಕಾದಲ್ಲಿ ಸೀಮಿತ ಓವರ್‌ಗಳ ಸರಣಿ ಆಡಲಿರುವ ಶಿಖರ್ ಧವನ್ ಪಡೆ

* ಲಂಕಾ ಎದುರಿನ ಸೀಮಿತ ಓವರ್‌ಗಳ ಸರಣಿ ಜುಲೈ 13ರಿಂದ ಆರಂಭ


ಕೊಲಂಬೊ(ಜು.08): ದ್ವೀಪರಾಷ್ಟ್ರ ಶ್ರೀಲಂಕಾ ವಿರುದ್ದ ಸೀಮಿತ ಓವರ್‌ಗಳ ಸರಣಿಯನ್ನಾಡಲು ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಲಂಕಾಗೆ ಬಂದಿಳಿದೆ. ಜುಲೈ 13ರಿಂದ ಆರಂಭವಾಗಲಿರುವ ಈ ಸರಣಿಯಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಅಂದಾಜು 12 ಮಿಲಿಯನ್ ಡಾಲರ್(89.7 ಕೋಟಿ ರುಪಾಯಿ) ಗಳಿಸಲಿದೆ ಎಂದು ವರದಿಯಾಗಿದೆ.

ಮೊದಲಿಗೆ ಕೇವಲ ಮೂರು ಪಂದ್ಯಗಳ ಸರಣಿ ನಡೆಸಲು ಯೋಚಿಸಲಾಗಿತ್ತು. ಆದರೆ ಬಿಸಿಸಿಐ ಜತೆ 6 ಮನವಿ ಮಾಡಿಕೊಂಡ ಬಳಿಕ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಆಡಲು ತೀರ್ಮಾನಿಸಲಾಯಿತು ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಮ್ಮಿ ಸಿಲ್ವಾ ತಿಳಿಸಿದ್ದಾರೆ. ನಾವು ಆರಂಭದಲ್ಲಿ ಪಂದ್ಯಗಳ ಸರಣಿ ನಡೆಸಲು ತೀರ್ಮಾನಿಸಿದ್ದೆವು. ಇದಾದ ಬಳಿಕ ಭಾರತ ಕ್ರಿಕೆಟ್ ಮಂಡಳಿಯ ಜತೆ ಜತೆ ಚರ್ಚಿಸಿ ಪಂದ್ಯಗಳ ಸಂಖ್ಯೆಯನ್ನು 6ಕ್ಕೇರಿಸುವಲ್ಲಿ ಯಶಸ್ವಿಯಾದೆವು. ಹೀಗಾಗಿ ಇನ್ನೂ ಹೆಚ್ಚುವರಿಯಾಗಿ 6 ಮಿಲಿಯನ್ ಡಾಲರ್ ಆದಾಯ ಗಳಿಸಲಿದ್ದೇನೆ. ಕ್ರೀಡೆಯ ಮೂಲಕ ಬಲಿಷ್ಠ ಆರ್ಥಿಕತೆಯನ್ನು ಕಟ್ಟುವ ಕ್ರೀಡಾ ಸಚಿವನಮಲ್ ರಾಜಪಕ್ಷಾ ಅವರ ದೂರಾಲೋಚನೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ದೊಡ್ಡ ಪ್ರಮಾಣದಲ್ಲಿ ಆದಾಯವನ್ನು ಒದಗಿಸುತ್ತಿದೆ ಎಂದು ಶಮ್ಮಿ ಸಿಲ್ವಾ ಹೇಳಿದ್ದಾರೆ.

🇱🇰 vs 🇮🇳 Match Fixture pic.twitter.com/EwItvZIetF

— Sri Lanka Cricket 🇱🇰 (@OfficialSLC)

Tap to resize

Latest Videos

undefined

ಶಿಖರ್ ಧವನ್ ಪಡೆಯನ್ನು 'ಭಾರತ ಬಿ' ಟೀಂ ಎಂದ ರಣತುಂಗ; ನೆಟ್ಟಿಗರು ಗರಂ

ಶ್ರೀಲಂಕಾಗೆ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಅರ್ಜುನ ರಣತುಂಗ ಕೆಲ ದಿನಗಳ ಹಿಂದಷ್ಟೇ ಟಿವಿ ಜಾಹಿರಾತು ಗಳಿಸುವ ಉದ್ದೇಶದಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಭಾರತದ 'ಬಿ' ತಂಡದ ಜತೆ ಕ್ರಿಕೆಟ್ ಆಡಲು ಒಪ್ಪಿಕೊಂಡಿದೆ. ದ್ವೀಪರಾಷ್ಟ್ರಕ್ಕೆ ಬಿಸಿಸಿಐ ಭಾರತ 'ಬಿ' ಕ್ರಿಕೆಟ್ ತಂಡವನ್ನು ಕಳಿಸಿಕೊಟ್ಟಿದ್ದು ಶ್ರೀಲಂಕಾ ಕ್ರಿಕೆಟ್‌ಗೆ ಮಾಡಿದ ಅವಮಾನ ಎಂದು ರಣತುಂಗ ತಮ್ಮ ಆಕ್ರೋಶ ಹೊರಹಾಕಿದ್ದರು.

ಶ್ರೀಲಂಕಾ ಕ್ರಿಕೆಟ್ ತಂಡದ ಪ್ರದರ್ಶನ ಇತ್ತೀಚಿನ ದಿನಗಳಲ್ಲಿ ಅಷ್ಟೇನು ಉತ್ತಮವಾಗಿಲ್ಲ. ಕಳೆದ ಮೂರು ಸೀಮಿತ ಓವರ್‌ಗಳ ಸರಣಿಯಲ್ಲಿ(ಒಂದು ಬಾಂಗ್ಲಾದೇಶ ವಿರುದ್ದ, ಮತ್ತೆರಡು ಇಂಗ್ಲೆಂಡ್‌ ವಿರುದ್ದ) ಸೋಲುಂಡು ನಿರಾಸೆ ಅನುಭವಿಸಿದೆ. ಇನ್ನು ಭಾರತ ವಿರುದ್ದದ ಶ್ರೀಲಂಕಾ ಕ್ರಿಕೆಟ್ ತಂಡದ ಪ್ರದರ್ಶನವು ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ. ಈ ಹಿಂದಿನ 10 ಏಕದಿನ ಪಂದ್ಯಗಳ ಮುಖಾಮುಖಿಯಲ್ಲಿ ಭಾರತದ ಎದುರು ಶ್ರೀಲಂಕಾ 8 ಬಾರಿ ಸೋಲು ಕಂಡು ಕೇವಲ 2 ಬಾರಿ ಮಾತ್ರ ಗೆಲುವಿನ ನಗೆ ಬೀರಿದೆ.
 

click me!