
ನವದೆಹಲಿ (ಜು.20) ಫಿಫಾ ವಿಶ್ವಕಪ್ ಗೆದ್ದ ಸ್ಪೇನ್ ಭಾರಿ ಸದ್ದು ಮಾಡುತ್ತಿದೆ. ಭಾರತದಲ್ಲಿ ಅರ್ಜೆಂಟೀನಾ ಪರ ಅತೀ ಹೆಚ್ಚು ಅಭಿಮಾನಿಗಳಿದ್ದಾರೆ. ಆದರೆ ಸ್ಪೇನ್ ಗೆಲುವನ್ನು ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕಾರಣ ಸ್ಪೇನ್ ಗೆಲುವಿನ ಹಿಂದೆ ಟೀಂ ಇಂಡಿಯಾ ಟ್ರೋಫಿ ಸೀಕ್ರೆಟ್ ಅಡಗಿದೆ ಎನ್ನುತ್ತಿದ್ದಾರೆ. ಸ್ಫೇನ್ ಫಿಫಾ ವಿಶ್ವಕಪ್ ಗೆದ್ದರೆ ಮರು ವರ್ಷ ಭಾರತ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲಲಿದೆ ಎಂದು ಅಂಕಿ ಅಂಶಗಳನ್ನು ಅಭಿಮಾನಿಗಳು ನೀಡುತ್ತಿದ್ದಾರೆ.
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಪೇನ್ 2ನೇ ಟ್ರೋಫಿ ಗೆದ್ದುಕೊಂಡಿದೆ. 2010ರಲ್ಲಿ ಸ್ಪೇನ್ ನೆದರ್ಲೆಂಡ್ ವಿರುದ್ದ ಗೆದ್ದು ಫಿಫಾ ಫುಟ್ಬಾಲ್ ಟ್ರೋಫಿ ಗೆದ್ದುಕೊಂಡಿತ್ತು. ರೋಚಕ ಪಂದ್ಯದಲ್ಲಿ ಸ್ಪೇನ್ ಗೆಲುವು ದಾಖಲಿಸಿತ್ತು. ಜೊತೆಗೆ ಚೊಚ್ಚಲ ಫಿಫಾ ವಿಶ್ವಕಪ್ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು. ಸ್ಪೇನ್ 2010ರಲ್ಲಿ ಫಿಫಾ ವಿಶ್ವಕಪ್ ಗೆದ್ದರೆ 2011ರಲ್ಲಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ಎಂಎಸ್ ಧೋನಿ ನಾಯಕತ್ವದ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ಮೂಲಕ ಏರಡನೇ ಏಕದಿನ ವಿಶ್ವಕಪ್ ಟ್ರೋಫಿ ತನ್ನದಾಗಿಸಿತ್ತು.
2010ರಲ್ಲಿ ಸ್ಪೇನ್ ನೆದರ್ಲೆಂಡ್ಸ್ ವಿರುದ್ದ 1-0 ಅಂತರದಲ್ಲಿ ಫೈನಲ್ ಪಂದ್ಯ ಗೆದ್ದುಕೊಂಡಿತ್ತು. ಸ್ಪೇನ್ ಸಿಡಿಸಿದ 1 ಗೋಲಿನಿಂದ ಗೆಲುವಿನ ಇತಿಹಾಸ ಸೃಷ್ಟಿಯಾಗಿತ್ತು.ಫೈನಲ್ ಪಂದ್ಯದಲ್ಲಿ ನೆದರ್ಲೆಂಡ್ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಗೋಲು ಸಿಡಿಸಲು ಸಾಧ್ಯಾವಾಗದೆ, ಸ್ಪೇನ್ ಸಿಡಿಸಿದ ಗೋಲು ತಡೆಯಲು ಸಾಧ್ಯವಾಗದೇ ಸೋಲೊಪ್ಪಿಕೊಂಡಿತ್ತು. 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಪೇನ್ 1-0 ಅಂತರದಲ್ಲಿ ಅರ್ಜೆಂಟೀನಾ ತಂಡವನ್ನು ಮಣಿಸಿದೆ. ಈ ಬಾರಿ ಸ್ಪೇನ್ ಬಲಿಷ್ಠ ತಂಡವಾಗಿ ಫೈನಲ್ ಪಂದ್ಯದಲ್ಲಿ ಪ್ರದರ್ಶನ ನೀಡಿತ್ತು. ಆದರೆ ಅರ್ಜೆಂಟೀನಾ ಬಲಿಷ್ಠ ತಂಡವಾಗಿದ್ದರೂ ಫೈನಲ್ ಪಂದ್ಯದಲ್ಲಿ ಕಳಪೆಯಾಗಿತ್ತು.
ಇದೀಗ ಅಭಿಮಾನಿಗಳು ಸ್ಪೇನ್ ಟ್ರೋಫಿ ಗೆದ್ದ ಮರು ವರ್ಷ ಭಾರತ ಏಕದಿನ ವಿಶ್ವಕಪ್ ಗೆಲ್ಲಲಿದೆ ಎಂದು ಅಂಕಿ ಅಂಶ ತೆರೆದಿಟ್ಟಿದ್ದಾರೆ. ಸದ್ಯ ಪರಿಸ್ಥಿತಿಗಳು ಸೇಮ್ ಟು ಸೇಮ್ ಇದೆ. ಆದರೆ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಟೀಂ ಇಂಡಿಯಾಗೆ ಅತ್ಯಂತ ಸವಾಲಿನ ಟೂರ್ನಿಯಾಗಿದೆ. ಈಗಾಗಲೇ ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿ ಸೋತಿರುವ ಟೀಂ ಇಂಡಿಯಾ ಭಾರಿ ಟೀಕೆ ಏದುರಿಸುತ್ತಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ತಂಡದಲ್ಲಿರುತ್ತಾರೋ, ಹೊಸಬರಿಗೆ ಅವಕಾಶ ನೀಡುತ್ತಾರೋ ಅನ್ನೋ ಕುರಿತು ಚರ್ಚೆಗಳು ನಡೆಯುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸ್ಪೇನ್ ಗೆಲುವಿನಿಂದ ಭಾರತ ಏಕದಿನ ವಿಶ್ವಕಪ್ ಗೆಲ್ಲಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
Last time Spain won the FIFA World Cup
India won Cricket WC the next year💀 pic.twitter.com/vqtJuRTSOP— Dinda Academy (@academy_dinda) July 19, 2026
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.