
ಲಾರ್ಡ್ಸ್ (ಜು.20) ಇಂಗ್ಲೆಂಡ್ ವಿರುದ್ದದ ಮೂರನೇ ಏಕದಿನದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿ ಅಬ್ಬರಿಸಿದರು. ಭಾರತ ಪಂದ್ಯ ಗೆಲ್ಲಲಿಲ್ಲ. ಇತ್ತ ರೋಹಿತ್ ಶರ್ಮಾ ಸೆಂಚುರಿ ಸಿಡಿಸಿದರೂ ಸ್ಥಾನ ಖಚಿತವಾಗಲಿಲ್ಲ. ಲಾರ್ಡ್ಸ್ ಪಂದ್ಯ ರೋಹಿತ್ ಶರ್ಮಾ ಕೊನೆಯ ಪಂದ್ಯ ಅನ್ನೋ ಮಾತುಗಳು ದೂರವಾಗಿದೆ. ಆದರೆ ರೋಹಿತ್ ಶರ್ಮಾ ವಿದಾಯದ ಪಂದ್ಯ ಆಡದೇ ನಿವೃತ್ತಿಯಾಗುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಕಾರಣ ಮುಂದಿನ ವೆಸ್ಟ್ ಇಂಡೀಸ್ ಸರಣಿಗೆ ರೋಹಿತ್ ಶರ್ಮಾ ಆಯ್ಕೆ ಅನುಮಾನಗಳ ಗೂಡಾಗಿದೆ.
ಲಾರ್ಡ್ಸ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದರು.110 ಎಸೆತದಲ್ಲಿ ರೋಹಿತ್ ಶರ್ಮಾ 138 ರನ್ ಸಿಡಿಸಿದ್ದರು. ರೋಹಿತ್ ಶರ್ಮಾ ಟೀಂ ಇಂಡಿಯಾ ಪರ ಸೆಂಚುರಿ ಸಿಡಿಸಿದ ಅತೀ ಹಿರಿಯ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೋಹಿತ್ ಶರ್ಮಾ 39 ವರ್ಷ 80 ದಿನಕ್ಕೆ ಸೆಂಚುರಿ ದಾಖಲೆ ಬರೆದಿದ್ದಾರೆ. ಈ ಮೂಲಕ ಸಚಿನ್ ದಾಖಲೆ ಮುರಿದಿದ್ದಾರೆ. ಸಚಿನ್ ತೆಂಡೂಲ್ಕರ್ 2012ರಲ್ಲಿ ಬಾಂಗ್ಲಾದೇಶ ವಿರುದ್ಧ ಸೆಂಚುರಿ ಸಿಡಿಸಿದ್ದರು. ಅಂದು ಸಚಿನ್‌ಗೆ 38 ವರ್ಷ 327 ದಿನವಾಗಿತ್ತು. ಸಚಿನ್ ದಾಖಲೆ ಮುರಿದರೂ ರೋಹಿತ್ ಶರ್ಮಾ ಸ್ಥಾನಕ್ಕೆ ಯಾವುದೇ ಗ್ಯಾರೆಂಟಿ ಇಲ್ಲ.
ಭಾರತ ಹಾಗೂ ವೆಸ್ಟ್ ಇಂಡೀಸ್ ಸೆಪ್ಟೆಂಬರ್ 27ರಿಂದ ಮೂರು ಏಕದಿನ ಪಂದ್ಯ ಆಡಲಿದೆ. ಸರಣಿಗೆ ರೋಹಿತ್ ಶರ್ಮಾ ಆಯ್ಕೆಯಾಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಕಾರಣ ರೋಹಿತ್ ಶರ್ಮಾ ವಯಸ್ಸು. ಯುವ ಕ್ರಿಕೆಟಿಗರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ವೆಸ್ಟ್ ಇಂಡೀಸ್ ಸರಣಿ ರೋಹಿತ್ ಶರ್ಮಾ ಕೊನೆಯ ಏಕದಿನ ಸರಣಿ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ 3 ರಂದು ಚಂಡೀಘಡದಲ್ಲಿ ನಡೆಯಲಿರುವ 3ನೇ ಹಾಗೂ ಕೊನೆಯ ಏಕದಿನ ಪಂದ್ಯ ರೋಹಿತ್ ಶರ್ಮಾ ಅವರ ಕೊನೆಯ ಪಂದ್ಯ ಅನ್ನೋ ವಾದವೂ ಇದೆ.
ರೋಹಿತ್ ಶರ್ಮಾ ಲಾರ್ಡ್ಸ್ ಪಂದ್ಯದಲ್ಲಿ ಸೆಂಚುರಿ ದಾಖಲೆ ಬರೆದ ಬೆನ್ನಲ್ಲೇ ವಿಶ್ವದಾಖಲೆ ನಿರ್ಮಾಣವಾಗಿದೆ. ವಿದೇಶಿ ನೆಲದಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. ರೋಹಿತ್ ಶರ್ಮಾ ಇಂಗ್ಲೆಂಡ್ ನೆಲದಲ್ಲಿ 8 ಶತಕ ಸಿಡಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕ್ವಿಂಟನ್ ಡಿಕಾಕ್ ಭಾರತದಲ್ಲಿ 7 ಶತಕ ಸಾಧನೆ ಮಾಡಿದ್ದಾರೆ. ಎಬಿ ಡಿವಿಲಿಯರ್ಸ್ ಭಾರತದಲ್ಲಿ 7 ಸೆಂಚುರಿ ಸಿಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.