ಒಳ್ಳೆಯ ಕೆಲಸಕ್ಕೆ ಅರ್ಧ ಗಡ್ಡ-ಮೀಸೆ ತೆಗೆದ ಜ್ಯಾಕ್ ಕಾಲಿಸ್..!

Published : Nov 29, 2019, 04:22 PM IST
ಒಳ್ಳೆಯ ಕೆಲಸಕ್ಕೆ ಅರ್ಧ ಗಡ್ಡ-ಮೀಸೆ ತೆಗೆದ ಜ್ಯಾಕ್ ಕಾಲಿಸ್..!

ಸಾರಾಂಶ

ಒಂದು ಒಳ್ಳೆಯ ಉದ್ದೇಶಕ್ಕಾಗಿ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಕ್ ಕಾಲಿಸ್ ಅರ್ಧ ಗಡ್ಡ-ಮೀಸೆ ಬೋಳಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವ​ದೆ​ಹ​ಲಿ[ನ.29]: ‘ಘೇಂ​ಡಾ​ಮೃಗ ಉಳಿ​ಸಿ ಚಾಲೆಂಜ್‌’ ಸ್ವೀಕ​ರಿ​ಸಿ​ದ ದಕ್ಷಿಣ ಆಫ್ರಿಕಾ ಆಲ್ರೌಂಡರ್‌ ಜಾಕ್‌ ಕಾಲಿಸ್‌ ತಮ್ಮ ಮೀಸೆ ಹಾಗೂ ಗಡ್ಡ​ವನ್ನು ಅರ್ಧ ಬೋಳಿ​ಸಿದ್ದು, ಇನ್‌​ಸ್ಟಾ​ಗ್ರಾ​ಮ್‌​ನಲ್ಲಿ ಫೋಟೋ ಅಪ್‌​ಲೋಡ್‌ ಮಾಡುವ ಮೂಲಕ 23 ಲಕ್ಷ ರು. ಸಹಾಯ ನಿಧಿ ಸಂಗ್ರ​ಹಿ​ಸಿ​ದ​ರು. 

ಜ್ಯಾಕ್ ಕಾಲಿಸ್’ಗೆ ಶುಭಕೋರಲು ಹೋಗಿ ಎಡವಟ್ಟು ಮಾಡಿಕೊಂಡ KP..!

ಘೇಂಡಾಮೃಗ ಉಳಿ​ಸಬೇಕೆಂದು ಜನ​ಜಾ​ಗೃತಿ ಮೂಡಿ​ಸು​ವು​ದ​ಕ್ಕಾಗಿ ದಕ್ಷಿಣ ಆಫ್ರಿ​ಕಾ​ದಲ್ಲಿ ಈ ಅಭಿ​ಯಾನ ಆರಂಭಿ​ಸ​ಲಾ​ಗಿ​ದೆ. ಘೇಂಡಾಮೃಗ ಉಳಿ​ಸಲು ಹಾಗೂ ಗಾಲ್ಫ್ ಅಭಿ​ವೃ​ದ್ಧಿ​ಗಾಗಿ ಅಭಿ​ಯಾ​ನ​ದಲ್ಲಿ ಭಾಗ​ವ​ಹಿ​ಸಿ​ದ್ದಾಗಿ ಕಾಲಿಸ್‌ ಟ್ವೀಟ್‌ ಮಾಡಿ​ದ್ದರು. ಈ ಫೋಟೋ ಹಾಕುವ ಮೂಲಕ ಇನ್‌ಸ್ಟಾ​ಗ್ರಾ​ಮ್‌​ನಲ್ಲಿ 23,30,794 ರುಪಾಯಿ ಸಹಾಯ ನಿಧಿ ಸಂಗ್ರ​ಹಿ​ಸಿ​ದ್ದಾಗಿ ತಿಳಿ​ಸಿ​ದ್ದಾರೆ.

KKR ತಂಡಕ್ಕೆ ಕೋಚ್ ಜಾಕ್ ಕಾಲಿಸ್ ಗುಡ್ ಬೈ!

ಆಧುನಿಕ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಆಲ್ರೌಂಡರ್’ಗಳಲ್ಲಿ ಒಬ್ಬರೆನಿಸಿರುವ ಜಾಕ್ ಕಾಲಿಸ್ ದಕ್ಷಿಣ ಆಫ್ರಿಕಾ ಪರ 166 ಟೆಸ್ಟ್, 328 ಏಕದಿನ ಹಾಗೂ 25 ಟಿ20 ಪಂದ್ಯಗಳನ್ನಾಡಿದ್ದಾರೆ. 44 ವರ್ಷದ ಮಾಜಿ ಕ್ರಿಕೆಟಿಗ ಈ ನಡೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಸಿಸಿಗೆ ಬಿಗ್ ಶಾಕ್ ಕೊಟ್ಟ ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಹಾಟ್‌ಸ್ಟಾರ್!
ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!