ವೀಸಾ ಅವಧಿ ಮುಗಿದಿದ್ದರೂ ಭಾರತದಲ್ಲಿ 2 ದಿನ ಹೆಚ್ಚುವರಿಯಾಗಿ ವಾಸ್ತವ್ಯ ಹೂಡಿದ್ದ ಬಾಂಗ್ಲಾ ಕ್ರಿಕೆಟಿಗನಿಂದ ದಂಡ ವಸೂಲಿ ಮಾಡಿ ತವರಿಗೆ ಕಳಿಸಿದ ಘಟನೆ ನಡೆದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕೋಲ್ಕತಾ(ನ.29): ಬಾಂಗ್ಲಾದೇಶ ಕ್ರಿಕೆಟಿಗ ಸೈಫ್ ಹಸನ್, ವೀಸಾ ಅವಧಿ ಪೂರ್ಣಗೊಂಡಿದ್ದರೂ ಭಾರತದಲ್ಲಿ ಉಳಿದ ಕಾರಣಕ್ಕೆ ದಂಡ ತೆತ್ತಿದ್ದಾರೆ. ಟಿ20 ಮತ್ತು ಟೆಸ್ಟ್ ಸರಣಿ ಸಲುವಾಗಿ ಭಾರತ ಪ್ರವಾಸ ಕೈಗೊಂಡಿದ್ದ ಬಾಂಗ್ಲಾ ತಂಡದಲ್ಲಿ ಹೆಚ್ಚುವರಿ ಆಟಗಾರನಾಗಿ ಕಾಣಿಸಿಕೊಂಡಿದ್ದ ಸೈಫ್ ಹಸನ್, ಬುಧವಾರ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ 21,600 ರುಪಾಯಿ ಮೊತ್ತವನ್ನು ದಂಡ ಕಟ್ಟಿದ್ದಾರೆ.
ಏಷ್ಯಾ-ವಿಶ್ವ ಇಲೆವನ್ ಟಿ20 ಸರಣಿಗೆ ಧೋನಿ?
ವೀಸಾ ಅವಧಿ ಮುಗಿದರೂ ಹೆಚ್ಚುವರಿಯಾಗಿ 2 ದಿನ ಭಾರತದಲ್ಲೇ ಇದ್ದಿದ್ದರಿಂದ ಈ ಮೊತ್ತವನ್ನು ಪಾವತಿಸಿದ್ದಾರೆ. ಹಸನ್ ಅವರ ವೀಸಾ ಅವಧಿ ಮುಕ್ತಾಯವಾಗಿರುವುದನ್ನು ಅವರು ಪರಿಶೀಲಿಸಿರಲಿಲ್ಲ. ವಿಮಾನ ನಿಲ್ದಾಣಕ್ಕೆ ಬಂದ ಮೇಲೆ ಅದನ್ನು ನೋಡಿಕೊಂಡಿದ್ದ ಹಸನ್, ಮುಂಚೆಯೇ ನಿಗದಿಯಾಗಿದ್ದ ವಿಮಾನದಲ್ಲಿ ಬಾಂಗ್ಲಾಗೆ ತೆರಳಲು ಸಾಧ್ಯವಾಗಿರಲಿಲ್ಲ. ಈ ವೇಳೆ ಭಾರತೀಯ ರಾಯಭಾರಿ ಕಚೇರಿ ಮಧ್ಯಪ್ರವೇಶಿಸಿ ಶೀಘ್ರವೇ ಈ ಸಮಸ್ಯೆಯನ್ನು ಬಗೆಹರಿಸಿದೆ ಎನ್ನಲಾಗಿದೆ.
ICC ರ‍್ಯಾಂಕಿಂಗ್ ಪ್ರಕಟ; ಟಾಪ್ 10 ಪಟ್ಟಿಯಲ್ಲಿ ಮಯಾಂಕ್ ಅಗರ್ವಾಲ್!
ಐಸಿಸಿ ಟೆಸ್ಟ್ ಚಾಂಪಿಯನ್ ಕೂಟದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 2-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಇಂದೋರ್’ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಪಡೆ ಇನಿಂಗ್ಸ್ ಗೆಲುವು ದಾಖಲಿಸಿತ್ತು. ಇನ್ನು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲೂ ಭಾರತ ಅನಾಯಾಸವಾಗಿ ಗೆಲುವಿನ ನಗೆ ಬೀರಿತ್ತು.