ಎಬಿಡಿ ಕಮ್‌ಬ್ಯಾಕ್ ವಿಚಾರ: ಕುತೂಹಲ ಹುಟ್ಟಿಸಿದ ನಾಯಕನ ಮಾತು..!

By Suvarna News  |  First Published Jan 16, 2020, 1:29 PM IST

ಆಧುನಿಕ ಕ್ರಿಕೆಟ್‌ನ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ನಿವೃತ್ತಿ ಹಿಂಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲಿದ್ದಾರೆ ಎನ್ನುವ ವಿಚಾರ ಬಿಸಿಬಿಸಿ ಚರ್ಚೆಯಾಗುತ್ತಿದೆ. ಈ ಕುರಿತಂತೆ ಹರಿಣಗಳ ನಾಯಕ ಫಾಫ್ ಡುಪ್ಲೆಸಿಸ್ ತುಟಿ ಬಿಚ್ಚಿದ್ದಾರೆ. ಫಾಫ್ ಹೇಳಿದ್ದೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...


ಪೋರ್ಟ್‌ ಎಲಿಜೆಬೆತ್‌(ಜ.16): ನಿವೃತ್ತಿ ಕೈಬಿಟ್ಟು ದಕ್ಷಿಣ ಆಫ್ರಿಕಾ ತಂಡ ಕೂಡಿಕೊಳ್ಳಲು ಇಚ್ಚಿಸಿರುವ ಎಬಿ ಡಿವಿಲಿಯರ್ಸ್ ಪಾಲಿಗೆ ಧನಾತ್ಮಕ ಸುದ್ದಿಯೊಂದು ಹೊರಬಿದ್ದಿದೆ.

ಟಿ20 ವಿಶ್ವಕಪ್‌ನಲ್ಲಿ ಆಡುವ ಉದ್ದೇಶದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಘೋಷಿಸಿರುವ ನಿವೃತ್ತಿಯನ್ನು ಹಿಂಪಡೆಯುವ ಬಗ್ಗೆ ಚಿಂತನೆ ನಡೆಸಿರುವ ಎಬಿ ಡಿವಿಲಿಯ​ರ್ಸ್‌ಗೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್‌ ಡು ಪ್ಲೆಸಿ ಬೆಂಬಲಿಸಿದ್ದಾರೆ. ವಿಲಿಯ​ರ್ಸ್ ತಂಡಕ್ಕೆ ವಾಪಸಾದರೆ ಅವರಿಗೆ ಭರ್ಜರಿ ಸ್ವಾಗತ ನೀಡುತ್ತೇವೆ ಎಂದು ಫಾಫ್ ಡು ಪ್ಲೆಸಿ ಬುಧವಾರ ಹೇಳಿದ್ದಾರೆ.

Latest Videos

ಕ್ರಿಕೆಟ್ ಅಭಿಮಾನಿಗಳಿಗೆ ಕೊನೆಗೂ ಗುಡ್ ನ್ಯೂಸ್ ಕೊಟ್ಟ ಎಬಿ ಡಿವಿಲಿಯರ್ಸ್..!

'ಕಳೆದ ವರ್ಷ ಏಕದಿನ ವಿಶ್ವಕಪ್‌ ಸಮಯದಲ್ಲೇ ಅವರು ತಂಡಕ್ಕೆ ವಾಪಸಾಗಬೇಕಿತ್ತು. ಆದರೆ ಕೋಚಿಂಗ್‌ ಸಿಬ್ಬಂದಿ ಜತೆಗಿನ ಸಂವಹನ ಸಮಸ್ಯೆಯಿಂದಾಗಿ ಆಗಲಿಲ್ಲ. ಆದರೆ ನೂತನ ಕೋಚ್‌ಗಳು ವಿಲಿಯರ್ಸ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಅವರ ಸೇರ್ಪಡೆ ತಂಡದ ಬಲ ಹಾಗೂ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಲಿದೆ’ಎಂದು ಡು ಪ್ಲೆಸಿ ಹೇಳಿದ್ದಾರೆ.

ಕ್ರಿಕೆಟ್ ಜಗತ್ತಿನ ಮಣ್ಣಿನ ಹುಡುಗ: ಬೌಲಿಂಗ್‌ಗೆ ನಿಂತರೆ ಸೈನಿ ಹಸಿದ ಗಿಡುಗ!

ಎಬಿ ಡಿವಿಲಿಯರ್ಸ್ ಮಾರ್ಚ್ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೆ ಟಿ20 ಫ್ರಾಂಚೈಸಿ ಲೀಗ್‌ಗಳಲ್ಲಿ ಕಾಣಿಸಿಕೊಂಡಿದ್ದರು. 2019ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 5 ಅರ್ಧಶತಕ ಸಹಿತ ಎರಡನೇ ಗರಿಷ್ಠ ರನ್ ಸ್ಕೋರರ್ ಆಗಿದ್ದರು. ಇದರ ಬೆನ್ನಲ್ಲೇ ಏಕದಿನ ವಿಶ್ವಕಪ್ ವೇಳೆಗೆ ಹರಿಣಗಳ ಪಡೆ ಕೂಡಿಕೊಳ್ಳಲು ಬಯಸಿದ್ದರು.  

 

click me!