ಆಸೀಸ್‌ ವಿರುದ್ಧದ ಸೋಲಿನ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ..!

By Suvarna NewsFirst Published Jan 16, 2020, 11:42 AM IST
Highlights

ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಾಣುವ ಮೂಲಕ ಹಿನ್ನಡೆ ಅನುಭವಿಸಿದೆ. ಇದರ ಬೆನ್ನಲ್ಲೇ ಎರಡನೇ ಪಂದ್ಯ ಆರಂಭಕ್ಕೂ ಮುನ್ನ ಭಾರತದ ಪಾಲಿಗೆ ಮತ್ತೊಂದು ಕಹಿ ಸುದ್ದಿ ಹೊರ ಬಿದ್ದಿದೆ. ಏನದು..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್...

ಮುಂಬೈ(ಜ.16): ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು. ಇದರ ಬೆನ್ನಲ್ಲೇ ವಿರಾಟ್ ಪಡೆಗೆ ಮತ್ತೊಂದು ಆಘಾರ ಎದುರಾಗಿದ್ದು, ರಾಜ್‌ಕೋಟ್‌ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ತಂಡದ ಪ್ರಮುಖ ಆಟಗಾರ ಹೊರಬಿದ್ದಿದ್ದಾರೆ. 

Wicket-keeper Rishabh Pant ruled out of 2nd ODI. After getting hit on his helmet while batting in 1st ODI, Rishabh got a concussion & took no further part in the game. His availability for final ODI will be based on how he responds during the rehabilitation protocol. pic.twitter.com/EMsUbLoHAc

— ANI (@ANI)

ಇಂಡೋ-ಆಸೀಸ್ ಮೊದಲ ಪಂದ್ಯದಲ್ಲಿ ವಿರಾಟ್ ಪಡೆ ಎಡವಿದ್ದೆಲ್ಲಿ..?

ಬ್ಯಾಟಿಂಗ್‌ ಮಾಡುವ ವೇಳೆ ಚೆಂಡು ತಲೆಗೆ ಅಪ್ಪಳಿಸಿ ಸುಪ್ತಾವಸ್ಥೆಗೆ ತಲುಪಿದ್ದ ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌, ಜ.17ರಂದು ರಾಜ್‌ಕೋಟ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆಯಲಿರುವ 2ನೇ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ. ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ತಂಡದೊಂದಿಗೆ ರಾಜ್‌ಕೋಟ್‌ಗೆ ಪ್ರಯಾಣಿಸಲಿಲ್ಲ. ಅವರು ಬೆಂಗಳೂರಿಗೆ ಆಗಮಿಸಲಿದ್ದು, ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ರಿಷಭ್‌ ಪಂತ್‌ ಸುಪ್ತಾವಸ್ಥೆಗೆ ಸಂಬಂಧಿಸಿದಂತೆ ಐಸಿಸಿ ನೂತನ ನಿಯಮಗಳನ್ನು ಹೊರತಂದ ಬಳಿಕ, ಪಂದ್ಯದಿಂದ ಹೊರಬಿದ್ದ ಭಾರತದ ಮೊದಲ ಆಟಗಾರ ಎನಿಸಿದ್ದಾರೆ. 

ರೋಹಿತ್, ಕೊಹ್ಲಿ ಪಾಲಾದ ICC ಪ್ರತಿಷ್ಠಿತ ಪ್ರಶಸ್ತಿಗಳು

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಿಷಭ್ ಪಂತ್ 28 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. 44ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ ಎಸೆದ ಬೌಲರ್ ಪಂತ್ ಬ್ಯಾಟ್ ಸವರಿ ಹೆಲ್ಮೆಟ್‌ಗೆ ಬಡಿದು ಚೆಂಡು ಆಸ್ಟನ್ ಟರ್ನರ್ ಕೈಸೇರಿತ್ತು. ಇನ್ನು ಪಂತ್ ವಿಕೆಟ್ ಕೀಪಿಂಗ್ ಮಾಡಲು ಮೈದಾನಕ್ಕೆ ಇಳಿದಿರಲಿಲ್ಲ. ಪಂತ್ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ವಿಕೆಟ್ ಕೀಪಿಂಗ್ ಮಾತ್ರ ನಿಭಾಯಿಸಿದ್ದರು. ಎರಡನೇ ಏಕದಿನ ಪಂದ್ಯದಲ್ಲೂ ರಾಹುಲ್ ವಿಕೆಟ್ ಕೀಪಿಂಗ್ ಪಾತ್ರ ನಿರ್ವಹಿಸುವ ಸಾಧ್ಯತೆಯಿದೆ. ಬೆಂಗಳೂರಲ್ಲಿ ಜ.19ರಂದು ನಡೆಯಲಿರುವ 3ನೇ ಏಕದಿನ ಪಂದ್ಯಕ್ಕೆ ಅವರ ಲಭ್ಯತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
 

click me!