ಲಂಕಾ ಎದುರು ಹರಿಣಗಳ ಪಡೆಗೆ ಇನಿಂಗ್ಸ್‌ ಜಯ

By Suvarna NewsFirst Published Dec 30, 2020, 8:23 AM IST
Highlights

ಪ್ರವಾಸಿ ಶ್ರೀಲಂಕಾ ಎದುರು ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಇನಿಂಗ್ಸ್‌ ಹಾಗೂ 45 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಸೆಂಚೂರಿಯನ್(ಡಿ.30)‌: ಬೌಲರ್‌ಗಳ ಅತ್ಯದ್ಭುತ ಪ್ರದರ್ಶನದ ನೆರವಿನಿಂದ ದಕ್ಷಿಣ ಆಫ್ರಿಕಾ, ಶ್ರೀಲಂಕಾ ವಿರುದ್ಧ ಇಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ ಮತ್ತು 45 ರನ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಫ್ರಿಕಾ 1-0 ಮುನ್ನಡೆ ಪಡೆದಿದೆ. 

4ನೇ ದಿನವಾದ ಮಂಗಳವಾರ 2 ವಿಕೆಟ್‌ಗೆ 65 ರನ್‌ಗಳಿಂದ ಇನ್ನಿಂಗ್ಸ್‌ ಮುಂದುವರಿಸಿದ ಶ್ರೀಲಂಕಾ 180 ರನ್‌ಗಳಿಗೆ ಆಲೌಟ್‌ ಆಯಿತು. ಆಫ್ರಿಕಾ ಪರ ಎನ್‌ಗಿಡಿ, ನೋಕಿಯೆ, ಮುಲ್ಡರ್‌ ಹಾಗೂ ಸಿಪಮ್ಲಾ ತಲಾ 2 ವಿಕೆಟ್‌ ಪಡೆಯುವ ಮೂಲಕ ಜಯ ತಂದುಕೊಟ್ಟರು. 

ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತ್ತು. ದಿನೇಶ್ ಚಾಂಡಿಮಲ್‌, ಶನಕ ಹಾಗೂ ಧನಂಜಯ ಡಿಸಿಲ್ವಾ ಅವರ ಆಕರ್ಷಕ  ಅರ್ಧಶತಕದ ನೆರನಿಂದ 396 ರನ್‌ ಕಲೆಹಾಕಿತ್ತು. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಫಾಫ್‌ ಡು ಪ್ಲೆಸಿ ಅವರ 199 ರನ್‌ಗಳಿಂದಾಗಿ 621 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತ್ತು.

ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ದಾಖಲಾದ 5 ಅಪರೂಪದ ದಾಖಲೆಗಳಿವು..!

ಕೇವಲ ಒಂದು ರನ್‌ನಿಂದ ದ್ವಿಶತಕ ವಂಚಿತರಾದ ಫಾಫ್ ಡುಪ್ಲೆಸಿಸ್ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು. ಇನ್ನು ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಜನವರಿ 03ರಿಂದ ಜೊಹಾನ್ಸ್‌ಬರ್ಗ್‌ನ ದ ವಾಂಡರಸ್ ಮೈದಾನದಲ್ಲಿ ಜರುಗಲಿದೆ.

ಸ್ಕೋರ್‌:

ಶ್ರೀಲಂಕಾ 396 ಮತ್ತು 180/10
ದಕ್ಷಿಣ ಆಫ್ರಿಕಾ 621

ಪಂದ್ಯಶ್ರೇಷ್ಠ: ಫಾಫ್‌ ಡುಪ್ಲೆಸಿ

click me!