ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆದ್ದಿದ್ದ ಆಸ್ಟ್ರೇಲಿಯಾಗೆ 2ನೇ ಪಂದ್ಯದಲ್ಲಿ ಸೋಲಿನ ಆಘಾತ ಎದುರಾಗಿದೆ. ಮೆಲ್ಪೋರ್ನ್ ಪಂದ್ಯದಲ್ಲಿ ಆಸೀಸ್ ಹೀನಾಯ ಸೋಲು ಕಂಡಿದೆ. ಈ ಸೋಲಿನ ಬೆನ್ನಲ್ಲೇ ಮತ್ತೆರಡು ಆಘಾತ ಆಸ್ಟ್ರೇಲಿಯಾ ತಂಡಕ್ಕೆ ಎದುರಾಗಿದೆ. ಈ ಕುರಿತ ವಿವರ ಇಲ್ಲಿದೆ.
ಮೆಲ್ಬೋರ್ನ್(ಡಿ.29): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಕಮ್‌ಬ್ಯಾಕ್ ಮಾಡಿದೆ. ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಗೆಲುವು ದಾಖಲಿಸೋ ಮೂಲಕ ತಿರುಗೇಟು ನೀಡಿದೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯ ಗೆದ್ದು ಬೀಗಿದ ಆಸ್ಟ್ರೇಲಿಯಾ, ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಗೆಲ್ಲೋ ವಿಶ್ವಾಸದಲ್ಲಿತ್ತು. ಆದರೆ ಟೀಂ ಇಂಡಿಯಾ ಪ್ರದರ್ಶನದ ಮುಂದೆ ಕಾಂಗರೂಗಳು ಸೋಲೊಪ್ಪಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಮತ್ತೆರಡು ಆಘಾತ ಎದುರಾಗಿದೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ದಿಗ್ವಿಜಯ
undefined
ಭಾರತದ ವಿರುದ್ಧ ಸೋಲಿನ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ಐಸಿಸಿ ಎರಡೆರಡು ಶಾಕ್ ನೀಡಿದೆ. 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಆಸ್ಟ್ರೇಲಿಯಾಗೆ ದಂಡ ಹಾಕಲಾಗಿದೆ. ಪಂದ್ಯದ ಶೇಕಡಾ 40 ರಷ್ಟು ಸಂಭಾವನೆಯನ್ನು ದಂಡದ ರೂಪಯದಲ್ಲಿ ಐಸಿಸಿಗೆ ನೀಡಬೇಕಿದೆ. ಇದು ಮೊದಲನೇ ಆಘಾತವಾಗಿದೆ.
ಗಾಯಗೊಂಡ ಹುಲಿಯನ್ನು ಕೆಣಕದಿರಿ; ಟೀಂ ಇಂಡಿಯಾ ಗೆಲುವನ್ನು ಕೊಂಡಾಡಿದ ನೆಟ್ಟಿಗರು
ಇನ್ನು ಐಸಿಸಿ ದಂಡ ಇಲ್ಲಿಗೆ ಮುಗಿದಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದ 4 ಅಂಕಗಳನ್ನು ಕಡಿತಗೊಳಿಸಲಾಗಿದೆ. ಇದು ಎರಡನೇ ಆಘಾತವಾಗಿದೆ. ಐಸಿಸಿ ನಿಯಮ ಆರ್ಟಿಕಲ್ 2.22 ಪ್ರಕಾರ, ಆಟಗಾರ ಪಂದ್ಯದ ಸಂಭಾವನೆಯ ಶೇಕಡಾ 20 ರಷ್ಟು, ಅಥವಾ ತಂಡ ಶೇಕಡಾ 40 ರಷ್ಟು ಸಂಭಾವನೆ ದಂಡದ ರೂಪದಲ್ಲಿ ನೀಡಬೇಕು.
ಆಸ್ಟ್ರೇಲಿಯಾ ಪಂದ್ಯ ಮುಗಿಸಬೇಕಿದ್ದ ನಿಗದಿತ ಸಮಯದಲ್ಲಿ ಇನ್ನೂ 2 ಓವರ್ ಬಾಕಿ ಇಟ್ಟುಕೊಂಡಿತ್ತು. ಹೀಗಾಗಿ ಮ್ಯಾಚ್ ರೆಫ್ರಿಗೆ ಆಸೀಸ್ ತಂಡಕ್ಕೆ ದಂಡ ಹಾಕಿದ್ದಾರೆ. ಸೋಲಿನ ಬೆನ್ನಲ್ಲೇ ಎರಡೆರಡು ದಂಡ ಆಸೀಸ್ ತಂಡಕ್ಕೆ ತೀವ್ರ ಹಿನ್ನಡೆಯನ್ನುಂಟುಮಾಡಿದೆ.