ಯುಜುವೇಂದ್ರ ಚಹಲ್ ಸದ್ಯ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ಲೆಗ್‌ಸ್ಪಿನ್ನರ್ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದಲೂ ಹೊರಬೀಳುವ ಆಘಾತ ಅನುಭವಿಸಿದ್ದರು. ಇದೆಲ್ಲದರ ನಡುವೆ, ತಮ್ಮ ಪತ್ನಿ ಧನಶ್ರೀ ವರ್ಮಾ ಪಾಲ್ಗೊಂಡಿರುವ 'ಝಲಕ್ ದಿಕಲಾಜ' ಎನ್ನುವ ಸೋನಿ ಟಿವಿ ಡ್ಯಾನ್ಸ್ ಶೋದಲ್ಲಿ ಪಾಲ್ಗೊಂಡಿದ್ದನ್ನು ಕ್ರಿಕೆಟಿಗ ಚಹಲ್ ಬೆಂಬಲಿಸುತ್ತಾ ಬಂದಿದ್ದಾರೆ.
ಬೆಂಗಳೂರು(ಮಾ.04): ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಪತ್ನಿ ಧನಶ್ರೀ ವರ್ಮಾ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡ ಒಂದು ಪೋಸ್ಟ್ ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ. ಧನಶ್ರೀ ವರ್ಮಾ ಕೊರಿಯೋಗ್ರಾಫರ್ ಪ್ರತೀಕ್ ಉತ್ಕೇಕರ್ ಅವರೊಂದಿಗಿರುವ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದಷ್ಟೇ ಅಲ್ಲದೇ ನೆಟ್ಟಿಗರು ಚಹಲ್ ಅವರನ್ನು ಟ್ರೋಲ್ ಮಾಡಲಾರಂಭಿಸಿದ್ದಾರೆ.
ಯುಜುವೇಂದ್ರ ಚಹಲ್ ಸದ್ಯ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ಲೆಗ್‌ಸ್ಪಿನ್ನರ್ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದಲೂ ಹೊರಬೀಳುವ ಆಘಾತ ಅನುಭವಿಸಿದ್ದರು. ಇದೆಲ್ಲದರ ನಡುವೆ, ತಮ್ಮ ಪತ್ನಿ ಧನಶ್ರೀ ವರ್ಮಾ ಪಾಲ್ಗೊಂಡಿರುವ 'ಝಲಕ್ ದಿಕಲಾಜ' ಎನ್ನುವ ಸೋನಿ ಟಿವಿ ಡ್ಯಾನ್ಸ್ ಶೋದಲ್ಲಿ ಪಾಲ್ಗೊಂಡಿದ್ದನ್ನು ಕ್ರಿಕೆಟಿಗ ಚಹಲ್ ಬೆಂಬಲಿಸುತ್ತಾ ಬಂದಿದ್ದಾರೆ. ತಾತ್ಕಾಲಿಕವಾಗಿ ಮೈದಾನದಿಂದ ಹೊರಗುಳಿದಿರುವ ಚಹಲ್, ತಮ್ಮ ಪತ್ನಿಗೆ ಸಪೋರ್ಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲೂ ಮನವಿ ಮಾಡಿಕೊಂಡಿದ್ದರು.
What will be the Dhanashree Verma reaction if Yuzvendra Chahal does this constantly with his ladies friends ?
We all are human and any husband who loves his wife will be hurt by these incidents. This is utter nonsense, and needs to be stopped. pic.twitter.com/xKW2tf7K9v
ವಿಕಲಚೇತನ ಪುಟ್ಟ ಅಭಿಮಾನಿ ಜತೆ ಕ್ರಿಕೆಟ್ ಆಡಿ ಆಸೆ ಪೂರೈಸಿದ ಸಂಜು ಸ್ಯಾಮ್ಸನ್..! ಇಲ್ಲಿದೆ ಹೃದಯಗೆದ್ದ ವಿಡಿಯೋ
ಕಹಾನಿಯಲ್ಲಿ ಹೊಸ ಟ್ವಿಸ್ಟ್..?
ಫರ್ಹಾ ಖಾನ್ ಘೋಷಿಸಿರುವ ಝಲಕ್ ದಿಕಲಾಜಾ ಸೀಸನ್ 11ರ ಫೈನಲ್ ವೇಳೆಯಲ್ಲಿಯಲ್ಲಿ ಧನಶ್ರೀ ವರ್ಮಾ ಹಾಗೂ ಯುಜುವೇಂದ್ರ ಚಹಲ್ ಇಬ್ಬರೂ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ತೆರೆಯ ಮೇಲೆ ಧನಶ್ರೀ ವರ್ಮಾ ಹಾಗೂ ಕೊರಿಯೋಗ್ರಾಫರ್ ಪ್ರತಿಕ್ ಜತೆಯಾಗಿರುವ ಫೋಟೋ ಬಿತ್ತರಗೊಂಡಿದೆ. ಇದು ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ. ಆ ಬಳಿಕ ಧನಶ್ರೀ ವರ್ಮಾ ಹಾಗೂ ಚಹಲ್ ಅವರನ್ನು ಟ್ರೋಲ್ ಮಾಡಲಾರಂಭಿಸಿದ್ದಾರೆ.
ಹೀಗಿವೆ ನೋಡಿ ನೆಟ್ಟಿಗರ ಪ್ರತಿಕ್ರಿಯೆ:
Feeling bad for Chahal.
It's difficult to be a man 💔 pic.twitter.com/ITJcnowd3d
Sapna toota hai to , Dil kabhi jalta hai 😭 pic.twitter.com/i2uL1P35tr
— 𝐀𝐌𝐑𝐈𝐓 🔱 (@AmritICT)I wouldn't post such an intimate pic on instagram even if it was with my wife pic.twitter.com/9pEhXEmtAi
— brigadier (Modi Ka Parivar) (@brigadierdude)Honestly, feeling Bad for Yuzi Chahal 💔 yuzi bhai ❤️🩹 pic.twitter.com/PKKZ2pNel1
— ROMAN_KLR (@Royshib69)ಇನ್ನು ಯುಜುವೇಂದ್ರ ಚಹಲ್ ಅವರ ಕ್ರಿಕೆಟ್ ಬದುಕಿನ ಬಗ್ಗೆ ಹೇಳುವುದಾದರೇ, ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಸ್ಪಿನ್ನರ್ ಎನಿಸಿಕೊಂಡಿರುವ ಚಹಲ್, ಆಯ್ಕೆ ಸಮಿತಿಯ ಮನ ಗೆಲ್ಲುವಲ್ಲಿ ಪದೇ ಪದೇ ವಿಫಲವಾಗುತ್ತಾ ಬಂದಿದ್ದಾರೆ. ಚಹಲ್ ಇತ್ತೀಚೆಗಷ್ಟೇ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದಲೂ ಹೊರಬಿದ್ದಿದ್ದರು. ಚಹಲ್ 2023ರ ಆಗಸ್ಟ್‌ನಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು.
IPL ಟ್ರೋಫಿ ಗೆಲ್ಲಲು ಸನ್‌ರೈಸರ್ಸ್ ಮಾಸ್ಟರ್ ಪ್ಲಾನ್; ಚಾಂಪಿಯನ್ ನಾಯಕನಿಗೆ ಪಟ್ಟ ಕಟ್ಟಿದ ಆರೆಂಜ್ ಆರ್ಮಿ..!
ಸದ್ಯ ಯುಜುವೇಂದ್ರ ಚಹಲ್ ಮುಂಬರುವ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಸಜ್ಜಾಗುತ್ತಿದ್ದು, ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿಯಲಿದ್ದಾರೆ. 2024ರ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.