ವಿಕಲಚೇತನ ಪುಟ್ಟ ಅಭಿಮಾನಿ ಜತೆ ಕ್ರಿಕೆಟ್ ಆಡಿ ಆಸೆ ಪೂರೈಸಿದ ಸಂಜು ಸ್ಯಾಮ್ಸನ್..! ಇಲ್ಲಿದೆ ಹೃದಯಗೆದ್ದ ವಿಡಿಯೋ

By Naveen Kodase  |  First Published Mar 4, 2024, 2:52 PM IST

ವಿಕಲಚೇತನ ಬಾಲಕನಿಗೆ ಸಂಜು ಸ್ಯಾಮ್ಸನ್‌ ಅವರನ್ನು ಭೇಟಿಯಾಗಬೇಕೆನ್ನುವುದು ದೊಡ್ಡ ಕನಸಾಗಿತ್ತಂತೆ. ಈ ವಿಷಯ ಸ್ಯಾಮ್ಸನ್ ಅವರ ಗಮನಕ್ಕೆ ಬರುತ್ತಿದ್ದಂತೆ, ತಾವು ಕೇರಳಕ್ಕೆ ಬಂದ ಬಳಿಕ ಭೇಟಿಯಾಗುವುದಾಗಿ ಪ್ರಾಮೀಸ್ ಮಾಡಿದ್ದರು.


ತಿರುವನಂತಪುರ(ಮಾ.04): ಕ್ರಿಕೆಟ್ ಆಟದ ಮೂಲಕ ಮಾತ್ರವಲ್ಲದೇ ತಮ್ಮ ಸರಳ ನಡೆ-ನುಡಿ ಮೂಲಕ ಕೇರಳ ಮೂಲದ ಟೀಂ ಇಂಡಿಯಾ ಕ್ರಿಕೆಟಿಗ ಸಂಜು ಸಾಮ್ಸನ್ ಆಗಾಗ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಇದೀಗ ಸಂಜು ಸ್ಯಾಮ್ಸನ್‌, ವಿಕಲಚೇತನ ಅಭಿಮಾನಿಯ ಜತೆ ಕ್ರಿಕೆಟ್ ಆಡುವ ಮೂಲಕ ಆತನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ವಿಕಲಚೇತನ ಬಾಲಕನಿಗೆ ಸಂಜು ಸ್ಯಾಮ್ಸನ್‌ ಅವರನ್ನು ಭೇಟಿಯಾಗಬೇಕೆನ್ನುವುದು ದೊಡ್ಡ ಕನಸಾಗಿತ್ತಂತೆ. ಈ ವಿಷಯ ಸ್ಯಾಮ್ಸನ್ ಅವರ ಗಮನಕ್ಕೆ ಬರುತ್ತಿದ್ದಂತೆ, ತಾವು ಕೇರಳಕ್ಕೆ ಬಂದ ಬಳಿಕ ಭೇಟಿಯಾಗುವುದಾಗಿ ಪ್ರಾಮೀಸ್ ಮಾಡಿದ್ದರು. ಇದೀಗ ಸಂಜು ಸ್ಯಾಮ್ಸನ್, ಆ ಅಪ್ಪಟ ಅಭಿಯಾನಿಯನ್ನು ಭೇಟಿಯಾಗಿದ್ದು ಮಾತ್ರವಲ್ಲದೇ, ಆತನ ಜತೆ ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. 

Sanju immediately connected with this kid when he learnt about him and promised to meet him when he comes back to Kerala after the Ranji Trophy matches ❤️

That's our golden Sanju Samson for you 💎 https://t.co/pabm3Gcr3h pic.twitter.com/nrkimBNH7E

— Sanju Samson Fans Page (@SanjuSamsonFP)

Sanju immediately connected with this kid when he learnt about him and promised to meet him when he comes back to Kerala after the Ranji Trophy matches ❤️

That's our golden Sanju Samson for you 💎 https://t.co/pabm3Gcr3h pic.twitter.com/nrkimBNH7E

— Sanju Samson Fans Page (@SanjuSamsonFP)

Tap to resize

Latest Videos

ಸಂಜು ಸ್ಯಾಮ್ಸನ್ ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಆದರೆ ಸಂಜುಗೆ ಟೀಂ ಇಂಡಿಯಾದಲ್ಲಿ ಸಾಕಷ್ಟು ಅವಕಾಶಗಳು ಸಿಗುತ್ತಿಲ್ಲ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತಲೇ ಇವೆ. ಇದೆಲ್ಲದರ ಹೊರತಾಗಿ ಸಂಜು ಸ್ಯಾಮ್ಸನ್ ಅವರನ್ನು ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಲಾಗಿತ್ತು. ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಆಕರ್ಷಕ ಶತಕ ಸಿಡಿಸಿದ್ದರು. 

IPL ಟ್ರೋಫಿ ಗೆಲ್ಲಲು ಸನ್‌ರೈಸರ್ಸ್‌ ಮಾಸ್ಟರ್ ಪ್ಲಾನ್; ಚಾಂಪಿಯನ್ ನಾಯಕನಿಗೆ ಪಟ್ಟ ಕಟ್ಟಿದ ಆರೆಂಜ್ ಆರ್ಮಿ..!

ಕಳೆದೆರಡು ವರ್ಷಗಳಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಸಂಜು ಸ್ಯಾಮ್ಸನ್ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದರೂ ಸಹಾ ತವರಿನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಇದೀಗ ಇದೇ ವರ್ಷದ ಜೂನ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಂಜು ಭಾರತ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಸದ್ಯ ಸಂಜು ಸ್ಯಾಮ್ಸನ್ ಮುಂಬರುವ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಈ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಸಂಜು, ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ಬಿಸಿಸಿಐ ಪ್ರಕಟಿಸಿದ ಕೇಂದ್ರ ಗುತ್ತಿಗೆಯಲ್ಲಿ ಸಂಜು ಸ್ಯಾಮ್ಸ್ 'ಸಿ' ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. 'ಸಿ' ಗ್ರೇಡ್ ಹೊಂದಿದವರು ವಾರ್ಷಿಕ ಒಂದು ಕೋಟಿ ರುಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ.

IPL 2024 Breaking: RCB ಎದುರಿನ ಉದ್ಘಾಟನಾ ಪಂದ್ಯಕ್ಕೂ ಮುನ್ನ CSK ಪಡೆಗೆ ಬಿಗ್‌ ಶಾಕ್..!

ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿ

‘ಎ+’ ದರ್ಜೆ (ವಾರ್ಷಿಕ 7 ಕೋಟಿ ರು.): ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಜಸ್‌ಪ್ರೀತ್‌ ಬೂಮ್ರಾ, ರವೀಂದ್ರ ಜಡೇಜಾ.

‘ಎ’ ದರ್ಜೆ (ವಾರ್ಷಿಕ 5 ಕೋಟಿ ರು.): ಆರ್‌.ಅಶ್ವಿನ್‌, ಮೊಹಮದ್‌ ಶಮಿ, ಮೊಹಮದ್‌ ಸಿರಾಜ್‌, ಕೆ.ಎಲ್‌.ರಾಹುಲ್‌, ಶುಭ್‌ಮನ್‌ ಗಿಲ್‌, ಹಾರ್ದಿಕ್‌ ಪಾಂಡ್ಯ.

‘ಬಿ’ ದರ್ಜೆ (ವಾರ್ಷಿಕ 3 ಕೋಟಿ ರು.): ಸೂರ್ಯಕುಮಾರ್‌, ರಿಷಭ್‌ ಪಂತ್‌, ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ಯಶಸ್ವಿ ಜೈಸ್ವಾಲ್‌.

‘ಸಿ’ ದರ್ಜೆ (ವಾರ್ಷಿಕ 1 ಕೋಟಿ ರು.): ರಿಂಕು ಸಿಂಗ್‌, ತಿಲಕ್‌ ವರ್ಮಾ, ಋತುರಾಜ್‌ ಗಾಯಕ್ವಾಡ್‌, ಶಾರ್ದೂಲ್‌ ಠಾಕೂರ್‌, ಶಿವಂ ದುಬೆ, ರವಿ ಬಿಷ್ಣೋಯ್‌, ಜಿತೇಶ್‌ ಶರ್ಮಾ, ವಾಷಿಂಗ್ಟನ್‌ ಸುಂದರ್‌, ಮುಕೇಶ್‌ ಕುಮಾರ್‌, ಸಂಜು ಸ್ಯಾಮ್ಸನ್‌, ಅರ್ಶ್‌ದೀಪ್‌ ಸಿಂಗ್‌, ಕೆ.ಎಸ್‌.ಭರತ್‌, ಪ್ರಸಿದ್ಧ್‌ ಕೃಷ್ಣ, ಆವೇಶ್‌ ಖಾನ್‌, ರಜತ್‌ ಪಾಟೀದಾರ್‌.

click me!