ಧೋನಿ-ರೋಹಿತ್ ಜೊತೆಗಿನ ಆ ಐಕಾನಿಕ್ ಫೋಟೋದ ರಹಸ್ಯ ಬಿಚ್ಚಿಟ್ಟ ಸೂರ್ಯಕುಮಾರ್ ಯಾದವ್!

Published : Aug 25, 2026, 06:00 PM IST
Dhoni-Rohit-Suryakumar

ಸಾರಾಂಶ

ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡ ಐಕಾನಿಕ್ ಫೋಟೋ ಹಿಂದಿನ ಮಜಾದಾಯಕ ಕಥೆಯನ್ನು SKY ಹಂಚಿಕೊಂಡಿದ್ದಾರೆ. ರೋಹಿತ್ ಬಳಿಕ ಐಸ್ ಬಾತ್‌ಗೆ ಸಿದ್ಧವಾಗಿದ್ದ ಧೋನಿ ಬಳಿ ತೆರಳಿ ಫೋಟೋಗೆ ಮನವಿ ಮಾಡಿದ್ದರು. ಧೋನಿ ತಮಾಷೆಯ ಉತ್ತರ ನೀಡಿದ ಬಳಿಕ ಮೂವರ ಫೋಟೋ ಅಭಿಮಾನಿಗಳ ಮೆಚ್ಚುಗೆ ಗಳಿಸಿತು.

ಧೋನಿ-ರೋಹಿತ್–ಧೋನಿ-ಸೂರ್ಯಕುಮಾರ್ ಒಂದೇ ಫ್ರೇಮ್‌ಗೆ ಬಂದಿದ್ದು ಹೇಗೆ? SKY ಬಿಚ್ಚಿಟ್ಟ ಅಚ್ಚರಿ ಕಥೆ!

ಭಾರತ ಕ್ರಿಕೆಟ್‌ನ ಮೂವರು ಟಿ20 ವಿಶ್ವಕಪ್ ವಿಜೇತರು—ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ—ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದ ಫೋಟೋ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಇದೀಗ ಆ ಫೋಟೋ ಹೇಗೆ ಕ್ಲಿಕ್ ಆಯಿತು ಎಂಬುದರ ಹಿಂದಿನ ಮಜವಾದ ಕಥೆಯನ್ನು SKY ಹಂಚಿಕೊಂಡಿದ್ದಾರೆ.

ರೋಹಿತ್‌ಗೆ ಮೊದಲು ಮನವಿ ಮಾಡಿದ ಸೂರ್ಯಕುಮಾರ್ ಯಾದವ್

ಆಕಾಶ್ ಚೋಪ್ರಾ ಅವರ ಸಂದರ್ಶನದ ಪ್ರೋಮೋದಲ್ಲಿ ಸೂರ್ಯಕುಮಾರ್ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಐಪಿಎಲ್ ವೇಳೆ ಚೆನ್ನೈನಲ್ಲಿ ಇದ್ದಾಗ ರೋಹಿತ್ ಶರ್ಮಾ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು SKY ಬಯಸಿದ್ದರು.

ರೋಹಿತ್ ಬಳಿ ಈ ವಿಚಾರ ಪ್ರಸ್ತಾಪಿಸಿದಾಗ, ತಮ್ಮದೇ ಶೈಲಿಯಲ್ಲಿ “ಕ್ಯಾ ರೇ…” ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದರು ಎನ್ನಲಾಗಿದೆ. ಆದರೆ ರೋಹಿತ್ ಮನವೊಲಿದ ಬಳಿಕ SKYಗೆ ಇನ್ನೊಂದು ದೊಡ್ಡ ಕೆಲಸ ಬಾಕಿಯಿತ್ತು—ಎಂಎಸ್ ಧೋನಿಯನ್ನು ಫೋಟೋಗೆ ಕರೆತರುವುದು!

ಐಸ್ ಬಾತ್‌ಗೆ ಸಿದ್ಧವಾಗಿದ್ದ ಧೋನಿ ಬಳಿ ಹೋದ ಸೂರ್ಯಕುಮಾರ್ ಯಾದವ್!

ಅಭ್ಯಾಸ ಮುಗಿದ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ಧೋನಿ ಐಸ್ ಬಾತ್‌ಗೆ ಸಿದ್ಧರಾಗುತ್ತಿದ್ದರು. ಮೂಲೆಯಲ್ಲಿ ಕುಳಿತಿದ್ದ ಧೋನಿ ಬಳಿ ಹೋಗಿ ಮಾತನಾಡುವುದು ಸೂರ್ಯಕುಮಾರ್ ಯಾದವ್ ಗೆ ಸ್ವಲ್ಪ ಆತಂಕದ ಕ್ಷಣವಾಗಿತ್ತು.

ಧೈರ್ಯ ಮಾಡಿಕೊಂಡು ಸೂರ್ಯ, “ಮಹಿ ಭಾಯ್, ಒಂದು ನಿಮಿಷ. ಒಂದು ವಿನಂತಿ ಇದೆ. ನಿಮ್ಮ ಜೊತೆ ಮತ್ತು ರೋಹಿತ್ ಭಾಯ್ ಜೊತೆ ಫೋಟೋ ತೆಗೆದುಕೊಳ್ಳಬೇಕು. ನೀವು ಬಲಭಾಗದಲ್ಲಿ, ರೋಹಿತ್ ಭಾಯ್ ಎಡಭಾಗದಲ್ಲಿ, ನಾನು ಮಧ್ಯದಲ್ಲಿ ನಿಲ್ಲುತ್ತೇನೆ” ಎಂದು ಕೇಳಿಕೊಂಡರು.

ಧೋನಿಯ ಕಾಮಿಡಿ ಪಂಚ್!

SKYಯ ಮನವಿಗೆ ಧೋನಿ ತಮ್ಮ ಎಂದಿನ ಹಾಸ್ಯಮಯ ಶೈಲಿಯಲ್ಲಿ ಪ್ರತಿಕ್ರಿಯಿಸಿದರು. “ನೀವು ಫೋಟೋ ತೆಗೆದುಕೊಂಡು Instagramನಲ್ಲಿ ಹಾಕುತ್ತೀರಿ… ನಾವು ಬಾಲ್ ಆಗಿ ಬರುತ್ತೇವೆ” ಎಂಬ ರೀತಿಯಲ್ಲಿ ತಮಾಷೆ ಮಾಡಿದ್ದಾರೆ ಎಂದು ಸೂರ್ಯ ನೆನಪಿಸಿಕೊಂಡಿದ್ದಾರೆ.

ಅಂತಿಮವಾಗಿ ಮೂವರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿ ಅಭಿಮಾನಿಗಳಿಂದ ಅಪಾರ ಪ್ರೀತಿ ಗಳಿಸಿತು.

BCCI ಕೊಟ್ಟ ಹೆಸರು: ‘The Captains’

SKY ಈ ಫೋಟೋವನ್ನು Instagramನಲ್ಲಿ ಹಂಚಿಕೊಂಡು, “Group DP found. Suggest a group name” ಎಂದು ಬರೆದಿದ್ದರು. ಇದಕ್ಕೆ BCCI ಕೂಡ ಪ್ರತಿಕ್ರಿಯಿಸಿ “The Captains” ಎಂಬ ಹೆಸರನ್ನು ಸೂಚಿಸಿತು.

ರೋಹಿತ್, ಧೋನಿ ಮತ್ತು SKY—ಮೂವರೂ ಟಿ20 ಕ್ರಿಕೆಟ್‌ನೊಂದಿಗೆ ವಿಶೇಷವಾಗಿ ಗುರುತಿಸಿಕೊಂಡ ನಾಯಕರು. ಹೀಗಾಗಿ ಈ ಫೋಟೋ ಕೇವಲ ಒಂದು ಸೆಲ್ಫಿ ಅಥವಾ ಗ್ರೂಪ್ ಫೋಟೋ ಆಗಿರದೆ, ಭಾರತೀಯ ಟಿ20 ಕ್ರಿಕೆಟ್‌ನ ಹಲವು ನೆನಪುಗಳನ್ನು ಒಂದೇ ಫ್ರೇಮ್‌ನಲ್ಲಿ ಕಟ್ಟಿಕೊಟ್ಟ ಕ್ಷಣವಾಗಿ ಅಭಿಮಾನಿಗಳ ಮನದಲ್ಲಿ ಉಳಿದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

BCCIನಲ್ಲಿ ಕೆಲಸ ಮಾಡಬೇಕಾ? ಇಲ್ಲಿದೆ ನೋಡಿ ಸುವರ್ಣಾವಕಾಶ, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿ ಮಿಂಚಿದ ವೈಭವ್ ಸೂರ್ಯವಂಶಿ..! ವಿಡಿಯೋ ವೈರಲ್