ರಿಂಕು ಸಿಂಗ್ ಕಟ್ಟುಮಸ್ತಾದ ಫಿಗರ್‌ಗೆ ಶುಭ್‌ಮನ್ ಗಿಲ್ ಸಹೋದರಿ ಫಿದಾ..! ಕಮೆಂಟ್ ವೈರಲ್

By Naveen Kodase  |  First Published Jun 6, 2023, 4:57 PM IST

* ರಿಂಕು ಸಿಂಗ್ ಹಂಚಿಕೊಂಡ ಫೋಟೋ ವೈರಲ್‌
* ಓ ಹೀರೋ ಎಂದು ಕಾಮೆಂಟ್ ಮಾಡಿದ ಶುಭ್‌ಮನ್ ಗಿಲ್ ಸಹೋದರಿ


ನವದೆಹಲಿ(ಜೂ.06): ಕೋಲ್ಕತಾ ನೈಟ್ ರೈಡರ್ಸ್‌ ತಂಡದ ಮ್ಯಾಚ್ ಫಿನಿಶರ್‌ ರಿಂಕು ಸಿಂಗ್, 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಐಪಿಎಲ್ ಮುಗಿದ ಬಳಿಕ ರಿಂಕು ಸಿಂಗ್ ಇದೀಗ ತಮ್ಮ ಬಿಡುವಿನ ಸಮಯವನ್ನು ಮಾಲ್ಡೀವ್ಸ್‌ನ ಕಡಲ ಕಿನಾರೆಯಲ್ಲಿ ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. 

ಹೌದು, 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕವೇ ಮನೆಮಾತಾಗಿರುವ ರಿಂಕು ಸಿಂಗ್ ಸಿಂಗ್, ಇದೀಗ ರಜೆಯ ದಿನಗಳನ್ನು ಮಾಲ್ಡೀವ್ಸ್‌ನಲ್ಲಿ ಸಕ್ಕತ್ತಾಗಿಯೇ ಎಂಜಾಯ್ ಮಾಡುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದಷ್ಟೇ ರಿಂಕು ಸಿಂಗ್, ತಮ್ಮ ಶರ್ಟ್‌ ಕಳಚಿದ ಕಟ್ಟುಮಸ್ತಾದ ಬಾಡಿ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ತಿಳಿ ನೀಲಿ ಸಮುದ್ರದ ಮಧ್ಯದಲ್ಲಿನ ರೆಸಾರ್ಟ್‌ ಬದಿಯಲ್ಲಿ ನಿಂತು ಕ್ಲಿಕ್ಕಿಸಿಕೊಂಡ ಫೋಟೋ ಯಾವ ಮಾಡೆಲ್‌ಗೂ ಕಡಿಮೆಯಿಲ್ಲ ಎನ್ನುವಂತೆ ಕಾಣುತ್ತಿತ್ತು. ಈ ಫೋಟೋ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

 
 
 
 
 
 
 
 
 
 
 
 
 
 
 

Latest Videos

undefined

A post shared by Rinku 🧿 (@rinkukumar12)

ರಿಂಕು ಸಿಂಗ್ ತಮ್ಮ ಫೋಟೋದ ಜತೆಗೆ ಎಚ್ಚರಿಕೆ: ವ್ಯಸನಕಾರಿಯಾಗುವಂತಹ ಕಂಟೆಂಟ್ ಮುಂದಿದೆ ಎಂದು ಕ್ಯಾಪ್ಷನ್ ಬರೆದಿದ್ದರು. ಇನ್ನು ಈ ಫೋಟೋ ನೋಡಿದ ಶುಭ್‌ಮನ್ ಗಿಲ್ ಸಹೋದರಿ ಶಾನೀಲ್ ಗಿಲ್‌ 'ಓ ಹೀರೋ' ಎಂದು ಕಮೆಂಟ್ ಮಾಡಿದ್ದು, ಈ ಕಾಮೆಂಟ್ ಸಾಕಷ್ಟು ವೈರಲ್ ಆಗಿದೆ.

ಸುಂದರಿ ನಿಹಾರಿಕಾಳ ಜತೆ ಶುಭ್‌ಮನ್ ಗಿಲ್‌ ರೊಮ್ಯಾಂಟಿಕ್ ಡೇಟ್..! ಸಾರಾ ಕಥೆ ಏನು?

ಶಾನೀಲ್ ಗಿಲ್‌ ಕೆಲ ದಿನಗಳ ಹಿಂದಷ್ಟೇ ಬೇಡದ ಕಾರಣಕ್ಕಾಗಿ ಸುದ್ದಿಗೆ ಗ್ರಾಸವಾಗಿದ್ದರು. ಶಾನೀಲ್ ಗಿಲ್‌ ಅವರು ಅನಾವಶ್ಯಕವಾಗಿ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದರು. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಸ್ಪೋಟಕ ಶತಕ ಸಿಡಿಸುವ ಮೂಲಕ ಗುಜರಾತ್ ಟೈಟಾನ್ಸ್‌ ತಂಡವನ್ನು ಗೆಲುವಿನ ಡದ ಸೇರಿಸಲು ನೆರವಾಗಿದ್ದರು. ಈ ಸೋಲಿನೊಂದಿಗೆ ಆರ್‌ಸಿಬಿ ತಂಡವು ಪ್ಲೇ ಆಫ್‌ ಗೇರುವ ಅವಕಾಶವನ್ನು ಕೈಚೆಲ್ಲಿತ್ತು.  ಇದರ ಬೆನ್ನಲ್ಲೇ ನೆಟ್ಟಿಗರು ಶುಭ್‌ಮನ್ ಗಿಲ್ ಅವರ ಸಹೋದರಿಯನ್ನು ಸಾಕಷ್ಟು ಟ್ರೋಲ್ ಮಾಡಿದ್ದರು.

ರಿಂಕು ಸಿಂಗ್‌ ಕೆಕೆಆರ್ ಪರ ಗರಿಷ್ಠ ರನ್ ಸರದಾರ:

2023ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಿಂಕು ಸಿಂಗ್ 14 ಪಂದ್ಯಗಳನ್ನಾಡಿ 149.52ರ ಸ್ಟ್ರೈಕ್‌ರೇಟ್‌ನಲ್ಲಿ 4 ಅರ್ಧಶತಕ ಸಹಿತ 474 ರನ್ ಬಾರಿಸುವ ಮೂಲಕ ಕೋಲ್ಕತಾ ನೈಟ್‌ ರೈಡರ್ಸ್‌ ಪರ ಗರಿಷ್ಠ ರನ್‌ ಸರದಾರರಾಗಿ ಹೊರಹೊಮ್ಮಿದ್ದಾರೆ. 

2022ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಿಂಕು ಸಿಂಗ್‌, 7 ಪಂದ್ಯಗಳನ್ನಾಡಿ ಕೇವಲ 174 ರನ್‌ ಬಾರಿಸಿದ್ದರು. ಹೀಗಿದ್ದೂ ಕೋಲ್ಕತಾ ನೈಟ್‌ ರೈಡರ್ಸ್‌ ಫ್ರಾಂಚೈಸಿಯು ಕೇವಲ 55 ಲಕ್ಷ ರುಪಾಯಿಗೆ ರೀಟೈನ್ ಮಾಡಿಕೊಂಡಿತ್ತು. ಸದ್ಯ ಅದ್ಭುತ ಫಾರ್ಮ್‌ನಲ್ಲಿರುವ ರಿಂಕು ಸಿಂಗ್ ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದರೂ ಅಚ್ಚರಿ ಪಡುವಂತಿಲ್ಲ.

click me!