ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆ ಶ್ರೇಯಸ್ ಅಯ್ಯರ್ ಇಂಜುರಿಯಾಗಿ ಐಪಿಎಲ್ ಟೂರ್ನಿಯಿಂದಲೂ ಹೊರಬಿದ್ದಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಯ್ಯರ್‌ಗೆ ಸಂಪೂರ್ಣ ಐಪಿಎಲ್ ವೇತನ ಸಿಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ
ನವದೆಹಲಿ(ಎ.04): ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭುಜಕ್ಕೆ ಗಾಯಮಾಡಿಕೊಂಡ ಶ್ರೇಯಸ್ ಅಯ್ಯರ್ ಏಕದಿನ ಸರಣಿಯಿಂದ ಮಾತ್ರವಲ್ಲ ಸಂಪೂರ್ಣ ಐಪಿಎಲ್ ಟೂರ್ನಿಯಿಂದಲೂ ಹೊರಬಿದ್ದಿದ್ದರು. ನಾಯಕ ಸೇವೆ ಅಲಭ್ಯಗೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ತೀವ್ರ ಹಿನ್ನಡೆ ತಂದಿತ್ತು. ಇದೀಗ ಶ್ರೇಯಸ್ ಅಯ್ಯರ್ ಸಂಪೂರ್ಣ ಐಪಿಎಲ್ ಟೂರ್ನಿಯಿಂದ ಹೊರಗುಳಿದರೂ, ಐಪಿಎಲ್ ವೇತನ ಯಾವ ಕಡಿತವೂ ಇಲ್ಲದೆ ಸಿಗಲಿದೆ.
IPL 2021 ಟೂರ್ನಿ ಆರಂಭಕ್ಕೂ ಮುನ್ನವೇ ಡೆಲ್ಲಿಗೆ ಆಘಾತ; ನಾಯಕ ಸರಣಿಯಿಂದ ಔಟ್!
undefined
ಬಿಸಿಸಿಐ ವಿಮಾ ನಿಯಮದ ಪ್ರಕಾರ ಶ್ರೇಯಸ್ ಅಯ್ಯರ್‌ಗೆ ಸಂಪೂರ್ಣ ಐಪಿಎಲ್ ಸ್ಯಾಲರಿ ಸಿಗಲಿದೆ. ಕಾರಣ ಟೀಂ ಇಂಡಿಯಾ ಪ್ರತಿನಿಧಿಸುವ ವೇಳೆ, ಅಂತಾರಾಷ್ಟ್ರೀಯ ಪಂದ್ಯದ ವೇಳೆ ಟೀಂ ಇಂಡಿಯಾ ಕ್ರಿಕೆಟಿಗ ಗಾಯಗೊಂಡು, ಐಪಿಎಲ್ ಟೂರ್ನಿಯಿಂದ ಹೊರಬಿದ್ದರೆ ಆತನಿಗೆ ನಿಗದಿತ ಐಪಿಎಲ್ ವೇತನವನ್ನು ಯಾವುದೇ ಕಡಿತ ಮಾಡದೆ ನೀಡಬೇಕಿದೆ.
2011ರಲ್ಲಿ ಬಿಸಿಸಿಐ ಜಾರಿಗೆ ತಂಡ ಆಟಗಾರರ ವಿಮೆ ಪಾಲಿಸಿ ಅಡಿಯಲ್ಲಿ ಈ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಬಿಸಿಸಿಐ ಕೇಂದ್ರ ಗುತ್ತಿಗೆ ಪಡೆದ ಆಟಗಾರ ರಾಷ್ಟ್ರೀಯ ಕರ್ತವ್ಯದಲ್ಲಿದ್ದ ವೇಳೆ ಗಾಯಗೊಂಡು, ಐಪಿಎಲ್ ಟೂರ್ನಿಯಿಂದ ಹೊರಗುಳಿದರೆ ಸಂಪೂರ್ಣ ಸ್ಯಾಲರಿ ಸಿಗಲಿದೆ.
ಡೆಲ್ಲಿ ಕ್ಯಾಪಿಟಲ್ಸ್‌ಗೆ ಥ್ಯಾಂಕ್ಯೂ ಎಂದ ನೂತನ ನಾಯಕ ರಿಷಭ್ ಪಂತ್
ಈ ನಿಯಮದ ಪ್ರಕಾರ ಶ್ರೇಯಸ್ ಅಯ್ಯರ್ ತಮ್ಮ 7 ಕೋಟಿ ರೂಪಾಯಿ ವೇತನವನ್ನು ಪಡೆಯಲಿದೆ. ಶ್ರೇಯಸ್ ಅಯ್ಯರ್ ಅನುಪಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. ಎಪ್ರಿಲ್ 9 ರಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ.