
ನವದೆಹಲಿ(ಏ.29): ದೇಶದೆಲ್ಲೆಡೆ ಲಾಕ್‌ಡೌನ್ ಇರುವುದರಿಂದ ಕ್ಷೌರದಂಗಡಿ ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ಕ್ರಿಕೆಟಿಗ ಯುಸೂಫ್ ಪಠಾಣ್‌ಗೆ ಸಹೋದರ ಇರ್ಫಾನ್ ಪಠಾಣ್ ಹೇರ್‌ಕಟ್ ಮಾಡಿದ್ದಾರೆ.
ಈ ಫೋಟೋವನ್ನು ಯುಸೂಫ್ ಮಂಗಳವಾರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೊದಲಿಗೆ ಟ್ರಿಮ್ಮರ್ ಬಳಸಿ ಇರ್ಫಾನ್ ಪಠಾಣ್ ತಮ್ಮ ಸಹೋದರ ಯೂಸೂಫ್ ಕ್ಷೌರ ಮಾಡುವ ಚಿತ್ರವನ್ನು ಮೊದಲಿಗೆ ಫೋಸ್ಟ್ ಮಾಡಿದ್ದರು. ಇದಾದ ಬಳಿಕ ಯೂಸೂಫ್ ಮತ್ತೊಂದು ಪೋಸ್ಟ್ ಮಾಡಿದ್ದು, ಕಟಿಂಗ್‌ಗೂ ಮುನ್ನ, ಕಟಿಂಗ್ ನಂತರ ಎಂದು ಮತ್ತೊಂದು ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಾರ್ಬರ್ ಆಗಿ ಬದಲಾದ ಇರ್ಫಾನ್ ಎಂದು ಅಡಿಬರಹದಲ್ಲಿ ಯೂಸೂಫ್ ಬರೆದುಕೊಂಡಿದ್ದಾರೆ.
ತಮ್ಮ ಹೇರ್‌ಕಟ್ ತಾವೇ ಮಾಡಿಕೊಂಡ ಸಚಿನ್ ತೆಂಡುಲ್ಕರ್..!
ಕೊರೋನಾ ವೈರಸ್ ಸಂಕಷ್ಟಕ್ಕೆ ಪಠಾಣ್ ಬ್ರದರ್ಸ್ ನೆರವಿನ ಹಸ್ತ ಚಾಚಿದ್ದಾರೆ. ಮೊದಲ ಹಂತದಲ್ಲಿ ತವರಿನಲ್ಲೇ ಮಾಸ್ಕ್ ಹಂಚಿದ್ದ ಪಠಾಣ್ ಸಹೋದರರು ಆ ಬಳಿಕ 10,000 ಕೆ.ಜಿ ಅಕ್ಕಿ ಹಾಗೂ 7 ಕ್ವಿಂಟಾಲ್ ಆಲೂಗೆಡ್ಡೆಗಳನ್ನು ಬರೋಡ ಸುತ್ತಮುತ್ತ ಇರುವ ಬಡವರಿಗೆ ಹಂಚಿದ್ದರು. ಇದಷ್ಟೇ ಅಲ್ಲದೇ ಮದ್ದಿಲ್ಲದ ಮಹಾಮಾರಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೂ ಕೈಹಾಕಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸ್ಥಳೀಯರಲ್ಲಿ ಹಾಗೂ ತಮ್ಮ ಅಭಿಮಾನಿಗಳಲ್ಲಿ ಸಾಮಾಜಿಕ ಅಂತರದ ಮಹತ್ವದ ಬಗ್ಗೆ ತಿಳಿ ಹೇಳಿದ್ದಾರೆ. ಮನೆಯಲ್ಲೇ ಇರಿ, ಇದೊಂದು ಪರೀಕ್ಷಾ ಕಾಲವಾಗಿದ್ದು ಯಾರೂ ಹೆದರಬೇಡಿ ಹಾಗೂ ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಇರ್ಫಾನ್ ಪಠಾಣ್ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಹೇರ್ ಕಟ್ ಮಾಡಿದ್ದರು. ಸುರೇಶ್ ರೈನಾಗೆ ಅವರ ಪತ್ನಿ ಹೇರ್ ಕಟ್ ಮಾಡಿದ್ದರು. ಇನ್ನು ಟೀಂ ಇಂಡಿಯಾ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡಾ ತಮ್ಮ ಹೇರ್‌ಸ್ಟೈಲ್ ತಾವೇ ಮಾಡಿಕೊಂಡು ಗಮನ ಸೆಳೆದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.